ಹೊಸ ವಿನ್ಯಾಸದಲ್ಲಿ ನಾಜಿ ಕಾಲದ ಬೀಟಲ್ ಪ್ರತ್ಯಕ್ಷ

volkswagen-beetle
ಬೀಟಲ್ ಅಂದ್ರೆ ವಾಹನ ಲೋಕದಲ್ಲಿ ಒಂದು ಬೆರಗು. ತನ್ನ ಜನಪ್ರಿಯತೆ ಮತ್ತು ದೀರ್ಘಾಯಸ್ಸು ಉಳಿಸಿಕೊಂಡು ಐಕಾನಿಕ್ ಬ್ರಾಂಡಾಗಿ ಈಗಲೂ ತನ್ನ ವರ್ಚಸ್ಸು ಉಳಿಸಿಕೊಂಡಿದೆ. ಜನಮೆಚ್ಚುಗೆ ಪಡೆದ ಸಣ್ಣ ಕಾರು 1938ರ ನಾಜಿ ಯುಗದಲ್ಲಿ ಜರ್ಮನಿಯಲ್ಲಿ ರಸ್ತೆಗಿಳಿದಿತ್ತು. ಆಶ್ಚರ್ಯವೆಂದರೆ ಅದೇ ವಿನ್ಯಾಸವನ್ನು ಬದಲಾಯಿಸದೇ 2003ರವರೆಗೂ ಬೀಟಲ್ ಉತ್ಪಾದನೆಯಾಗುತ್ತಿತ್ತು.

1998ರಲ್ಲಿ ಬೀಟಲ್ ಕಾರನ್ನು ಮರು ವಿನ್ಯಾಸ ಮಾಡಲಾಗಿತ್ತು. ಅದು ಈಗಲೂ ಉತ್ಪಾದನೆಯಾಗುತ್ತಿದೆ. ಈಗ ಮತ್ತೆ ಫೋಕ್ಸ್ ವ್ಯಾಗನ್ ಎಜಿ ಕಂಪನಿಯು ಬೀಟಲ್ ನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ನೂತನ ಬೀಟಲ್ ಕಾರನ್ನು ಶಾಂಘೈ, ಬರ್ಲಿನ್ ಮತ್ತು ನ್ಯೂಯಾರ್ಕ್ ನಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಅನಾವರಣ ಮಾಡಿದೆ. ಇದು 2012ರ ಆರಂಭದಲ್ಲಿ ಭಾರತ ಸೇರಿದಂತೆ ಯುರೋಪ್ ಮಾರುಕಟ್ಟೆಗೆ ಪ್ರವೇಶಿಸಲಿದೆ.

ನೂತನ ಬೀಟಲ್ 2.5 ಲೀಟರ್ ನ 5 ಸಿಲಿಂಡರ್ ಎಂಜಿನ್ ಹೊಂದಿದ್ದು, ಸುಮಾರು 170 ಹಾರ್ಸ್ ಪವರ್ ನೀಡುತ್ತದೆ. ಹಳೆಯ ಬೀಟಲ್ ಕಾರುಗಳಿಗೆ ಹೋಲಿಸಿದರೆ ಇದರ ಉದ್ದ 6 ಇಂಚು ಹೆಚ್ಚಾಗಿದೆ ಮತ್ತು ಮೂರನೇ ತಲೆಮಾರಿಗೆ ಪೂರಕವಾಗಿ ಮರು ವಿನ್ಯಾಸಗೊಂಡಿದೆ. ಜನಸಾಮಾನ್ಯರ ಕಾರೆಂಬ ಖ್ಯಾತಿಯ ಪುಟ್ಟ ಕಾರಿನ ಹೊಸ ಆವೃತ್ತಿಯ ದರವನ್ನು ಕಂಪನಿ ತಿಳಿಸಿಲ್ಲ.

More from DriveSpark

Article Published On: Wednesday, April 20, 2011, 11:23 [IST]
English summary
Volkswagen AG showed off a redesigned Beetle small car at auto shows in Shanghai, Berlin and New York. Deliveries for this latest Beetle will start in early 2012 in Europe
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+