ವಿಲಿಯಂ ವೆಡ್ಸ್ ಕೇಟ್: ರಾಜಮನೆತನದ "ಕಾರು"ಬಾರಿನ ಕಥೆ

Prince William Weds Kate Middleton
ಬ್ರಿಟನ್ ರಾಜಕುಮಾರ ವಿಲಿಯಂ ಮತ್ತು ಇಂಗ್ಲೆಂಡ್ ನ ಕೇಟ್ ಮಿಡಲ್ ಟನ್ ಅವರ ವಿವಾಹ ಏಪ್ರಿಲ್ 29ರ ಶುಕ್ರವಾರ ಲಂಡನ್ ನಲ್ಲಿ ನಡೆಯಲಿದೆ. ಈ ಸುಂದರ ರಾಜಕುಮಾರನಲ್ಲಿ ಸಾಕಷ್ಟು ಸುಂದರವಾದ ಕಾರುಗಳಿವೆ. ಇವನ ಅಪ್ಪ, ಅಮ್ಮ, ಮಾವ ಮತ್ತು ಅಜ್ಜ ಮುತ್ತಜ್ಜರೂ ಹಲವು ದುಬಾರಿ ಕಾರುಗಳ ಒಡೆಯರಾಗಿದ್ದರು. ಅವರ ಮದುವೆಗೆ ಅಕ್ಷತೆ ಹಾಕೋ ಮುನ್ನ ಬ್ರಿಟನ್ ರಾಜಮನೆತನ ಹೊಂದಿದ್ದ ಭರ್ಜರಿ ಕಾರುಗಳ ಲೋಕದಲ್ಲಿ ಕೊಂಚ ಸುತ್ತಾಡೋಣ ಬನ್ನಿರಿ.

ಬ್ರಿಟನ್ ಯುವರಾಜನಿಗೆ ಓಪನ್ ಟಾಪ್ ಆಗಿರೋ ಡಿಬಿ6 ಎಂಬ ಆಸ್ಟನ್ ಮಾರ್ಟಿನ್ ಡ್ರೈವಿಂಗ್ ಮಾಡೋದು ಇಷ್ಟ. ರಾಣಿ ಡಯಾನ ಸುಜುಕಿ ವಿಟಾರ ಕಾರನ್ನು ತನ್ನ ಸವಾರಿಗೆ ಬಳಸುತ್ತಿದ್ದರು. ರಾಜ ಆಂಡ್ರ್ಯೂ ಮತ್ತು ಷರಹ್ ಫ್ರೆಗ್ ಸನ್ ಅವರಿಗೂ ಆಸ್ಟನ್ ಮಾರ್ಟಿನ್ ಕಂಪನಿಯ ಡಿಬಿ7 ವೊಂಟೆಜ್ ಕಾರೆಂದರೆ ಅಕ್ಕರೆ.

ವಿಲಿಯಂನ ದೀರ್ಘಕಾಲದ ಗೆಳತಿ, ನಾಡಿದ್ದು ಮದುವೆಯಾಗಲಿರುವ ಭವಿಷ್ಯದ ಯುವರಾಣಿ ಕೇಟ್ ಮಿಡಲ್ ಟನ್ ಅವರಲ್ಲಿ ಸಿಲ್ವರ್ ಬಣ್ಣದ ಹೊಸ ಆಡಿ ಎ3 ಕಾರಿದೆ. ಆಡಿ ಎ6 ಕಾರಿನಲ್ಲಿ ವಿಲಿಯಂ ಮತ್ತು ಕೇಟ್ ಜೊತೆಯಾಗಿ ಸವಾರಿ ಮಾಡುತ್ತಿದ್ದರು. ನಾಡಿದ್ದು ಇವರ ಮದುವೆಯಂದು ಜಾಗ್ವಾರ್ ಎಕ್ಸ್ ಜೆ ಕಾರನ್ನು ಉಡುಗೊರೆಯಾಗಿ ನೀಡಲು ಜಾಗ್ವಾರ್ ನಿರ್ಧರಿಸಿದೆ.

1963ರಲ್ಲಿ ರಾಣಿ ಎಲಿಜಬೆತ್ 2 ಬಳಸುತ್ತಿದ್ದದ್ದು "ರೋವರ್ ಪಿ5" ಎಂಬ ಸಲೂನ್ ಕಾರು. ನಂತರ ಎಂವೈಟಿಐ ನಂಬರ್ ಪ್ಲೇಟ್ ಇರುವ ವಾಕ್ಸುಹಾಲ್ ಕ್ರೆಸ್ಟ್ ಪಿಎ ಎಂಬ ಕಾರನ್ನು ಬಳಸಿದ್ದರು. ಆಕೆ ಒಮ್ಮೊಮ್ಮೆ ಲ್ಯಾಂಡ್ ರೋವರ್ ಕಾರನ್ನು ಸವಾರಿಗೆ ಬಳಸುತ್ತಿದ್ದರು. ರೋಲ್ಸ್ ರಾಯ್ಸ್, ಡೈಮ್ಲರ್ ಡಿಇ36 ಸೇರಿದಂತೆ ಇವರು ಹಲವು ಕಾರುಗಳ ಒಡತಿ.

ಯುವರಾಣಿ 1987ರಲ್ಲಿ ಆಸ್ಟನ್ ಮಾರ್ಟಿನ್ ಡಿಬಿ6 ಕಾರು ಬಳಸುತ್ತಿದ್ದರು. ಡಿಯಾನ ಬಳಿ ಜಾಗ್ವಾರ್ ಎಕ್ಸ್ ಜೆ6 ಕಾರಿದೆ. ರೋಲ್ಸ್ ರಾಯ್ಸ್ ಫಾಂಟಮ್ ಕಾರುಗಳು ಸಹ ಇವರಲ್ಲಿದೆ. 1966ರಲ್ಲಿ ಪ್ರಿನ್ಸ್ ಚಾರ್ಲ್ಸ್ ಬಳಸುತ್ತಿದ್ದದ್ದು ಎಂಜಿಸಿ ಎಂಬ ಸ್ಪೋರ್ಟ್ಸ್ ಕಾರು. ಡಿಯಾನ ಬಳಿ ಮರ್ಸಿಡಿಸ್ ಬೆಂಝ್ ಎಸ್ಎಲ್500 ಕಾರು ಇದೆ. ಇವರಲ್ಲಿರುವ ಕಾರುಗಳಿಗೆ ಇವೆಲ್ಲ ಕೆಲವು ಉದಾಹರಣೆಗಳು. ವಿಶ್ವದಲ್ಲಿರುವ ಎಲ್ಲಾ ದುಬಾರಿ, ಐಷಾರಾಮಿ ಕಾರುಗಳು ಇವರಲ್ಲಿದೆ ಎಂದುಕೊಳ್ಳಬಹುದು.

More from DriveSpark

Article Published On: Thursday, April 21, 2011, 13:02 [IST]
English summary
Britain Royal family has a illustrious tradition for passion for cars. William loves Aston Martin open top DB6. Kate Middleton likes Audi A3 and A6 . On the occasion of Royal wedding ( 29 April) a drive down the road Number 10 Downing Street.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+