ಭೂಮಿಗೊಂದು ದಿನ: ದಯವಿಟ್ಟು ಹೊಗೆ ಹಾಕದಿರಿ ಅಣ್ಣಾ!

By * ಧರಿತ್ರಿ

save earth
ಏಪ್ರಿಲ್ 22 ಅಂದರೆ ನಾಳೆ ವಿಶ್ವ ಭೂದಿನ. ನಮಗೂ ಅರಿವಾಗಿರಬಹುದು. ಬೆಂಗಳೂರಿನಂತಹ ಉದ್ಯಾನನಗರಿ ಹಿಂದಿನಂತಿಲ್ಲ. ಬೇಸಿಗೆಯ ಬೇಗೆ ಜಾಸ್ತಿಯಾಗಿದೆ. ಅಕಾಲಿಕ, ಅಪರೂಪದ ಮಳೆ ಕಂಡುಬರುತ್ತಿದೆ. ಅಂದಿನ ಚಳಿ ಇಂದು ನೆನಪು ಮಾತ್ರ. ಪರಿಸರ ಹಿಂದಿನಂತಿಲ್ಲ. ಕಾರ್ಬನ್ ಡೈಯಾಕ್ಸೆಡ್, ನ್ಯೂಟ್ರೊಸ್ ಅಕ್ಸಿಡೆಸ್, ಕಲುಷಿತ ನೀರು, ಮಿಥೆನ್ ಇತ್ಯಾದಿ ಹಾನಿಕಾರಕ ಅಂಶಗಳು ಭೂರಮೆಯ ಒಡಲು ತುಂಬುತ್ತಿದೆ.

ಇದಕ್ಕೆ ಕಾರಣಗಳು ನೂರಾರಿರಬಹುದು. ಆದರೆ ವಾಹನೋದ್ಯಮದ ಕೊಡುಗೆಯು ಸಾಕಷ್ಟಿದೆ. ಪೆಟ್ರೊಲ್ ಡೀಸಲ್ ಇತ್ಯಾದಿ ಮುಗಿದು ಹೋಗುವ ಸಂಪನ್ಮೂಲಗಳು, ವಾಹನಗಳು ಉಗುಳುವ ಹೊಗೆ, ಮಾಲಿನ್ಯ ಇದರಿಂದ ಭೂಮಿ ಹೆಚ್ಚು ಕಲುಷಿತಗೊಳ್ಳುತ್ತಿದೆ. ಪರಿಸರ ಸ್ನೇಹಿ ವಾಹನದತ್ತ ಮುಖ ಮಾಡುವುದೇ ಇಂದಿನ ತುರ್ತು.

ಇಡೀ ಭೂಮಿಯ ಉಳಿವಿಗಾಗಿ, ಆ ಮೂಲಕ ಮನಕುಲದ ಉಳಿವಿಗಾಗಿ ಎಲ್ಲರೂ ಯೋಚಿಸಬೇಕು. ಮುಖ್ಯವಾಗಿ ವಾಹನ ಖರೀದಿಸುವ ಮುನ್ನ ಎರಡೆರಡು ಬಾರಿ ಯೋಚಿಸಬೇಕು. ಹೈಬ್ರಿಡ್ ಅಥವಾ ಪರಿಸರ ಸ್ನೇಹಿ ವಾಹನಗಳನ್ನು ಖರೀದಿಸುವ ಕುರಿತು ಎಲ್ಲರೂ ಯೋಚಿಸಬೇಕು. ಸರಕಾರಗಳು ಕೂಡ ಪರಿಸರ ಸ್ನೇಹಿ ವಾಹನ ಖರೀದಿಗೆ ಸಾಕಷ್ಟು ವಿನಾಯಿತಿ ಕೂಡ ನೀಡುತ್ತಿವೆ.

ಸರಕಾರದ ಕೊಡುಗೆಗಳು: ಹೈಬ್ರಿಡ್ ಕಾರ್ ಗಳಿಗೆ ಆಮದು ಸುಂಕ ಕಡಿತ ಮಾಡುವ ಯೋಜನೆ ಇರುವುದಾಗಿ ಮತ್ತು ಈ ವಿಭಾಗದಲ್ಲಿನ ವಾಹನಗಳ ಕುರಿತು ಮೃದು ನೀತಿ ಅನುಸರಿಸುವುದಾಗಿ ಕೇಂದ್ರ ಸರಕಾರ ಇತ್ತೀಚೆಗೆ ಹೇಳಿತ್ತು. ಕಳೆದ ತಿಂಗಳ ಬಜೆಟ್ ನಲ್ಲೂ ಹೈಬ್ರಿಡ್ ವಾಹನಗಳಿಗೆ ರಾಷ್ಟ್ರೀಯ ಮಿಷನ್ ಸ್ಥಾಪನೆಯ ಪ್ರಸ್ತಾಪ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಹಸಿರು ವಾಹನಗಳನ್ನು ಆಯ್ಕೆ ಮಾಡಿಕೊಳ್ಳಲು ಜನರಿಗೆ ಇದು ಒಂದು ಕಾರಣವಾಗಬಹುದು.

ಪರಿಸರ ಸ್ನೇಹಿ:
ಜಾಗತಿಕ ತಾಪಮಾನ ಏರಿಕೆಯಾಗುವಲ್ಲಿ, ಓಝೋನ್ ಪರದೆಯಲ್ಲಿ ರಂಧ್ರವುಂಟಾಗುವಲ್ಲಿ ವಾಹನೋದ್ಯಮದ ಕೊಡುಗೆ ಅಪಾರ. ಒಟ್ಟಾರೆ ವಾಯುಮಾಲಿನ್ಯದಲ್ಲಿ ಕಾರ್, ಟ್ರಕ್ ಮತ್ತು ಇತರ ವಾಹನಗಳ ಕೊಡುಗೆ ಅರ್ಧದಷ್ಟಿದೆ. ಹೀಗಾಗಿ ಹೈಬ್ರಿಡ್ ವಾಹನಗಳ ಬಳಕೆ ಹೆಚ್ಚಾದಂತೆ ಹವಾಮಾನ ಮಾಲಿನ್ಯ ನಿಯಂತ್ರಿಸಬಹುದು. ಪರಿಸರಕ್ಕೆ ನೀವು ಹೀಗೂ ಕೊಡುಗೆ ನೀಡಬಹುದು. ಈಗ ರಸ್ತೆಯಲ್ಲಿ ಬೆರಳೆಣಿಕೆಯಷ್ಟು ಹೈಬ್ರಿಡ್ ಕಾರ್ ಗಳಿವೆ ಅಷ್ಟೇ! ಇಂಧನ ದರದ ನಾಗಲೋಟ, ತೆರಿಗೆ ವಿನಾಯಿತಿ ಮತ್ತು ಪರಿಸರ ಸ್ನೇಹಿ ಫೀಚರ್ ಗಳಿಂದ ನಿಮಗೂ ಹೈಬ್ರಿಡ್ ಕಾರ್ ಖರೀದಿಸುವ ಬಯಕೆಯಾಗಿರಬಹುದು.

ದೀರ್ಘಾವಧಿಗೆ ದುಬಾರಿಯಲ್ಲ : ಹೈಬ್ರಿಡ್ ಕಾರ್ ಖರೀದಿಸಬೇಕೆಂದಿದ್ದೇ ಆದರೆ ಅದು ದುಬಾರಿ ಎಂದು ನೀವು ಹೇಳಬಹುದು. ನಿಜ. ಇತರ ವಾಹನಗಳಿಗೆ ಹೋಲಿಸಿದರೆ ಇದು ಒಂದಿಷ್ಟು ದುಬಾರಿಯೇ. ಆದರೆ ದೀರ್ಘಾವಧಿ ಕುರಿತು ನೀವು ಯೋಚಿಸಿದ್ದರೆ, ಅಂದರೆ ದಿನನಿತ್ಯ ನೀವು ಪೆಟ್ರೋಲ್, ಡೀಸಲ್ ಗೆ ಸುರಿಯುವ ಹಣವನ್ನು ಲೆಕ್ಕ ಹಾಕಿದರೆ ಇದು ದುಬಾರಿಯಲ್ಲ. ಹೀಗಾಗಿ ಪರಿಸರ ರಕ್ಷಣೆಯೊಂದಿಗೆ ಹಣವನ್ನು ಉಳಿತಾಯ ಮಾಡಲು ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ವಾಹನಗಳಿಗೆ ಸಾಧ್ಯವಿದೆ.

More from DriveSpark

Article Published On: Thursday, April 21, 2011, 10:21 [IST]
English summary
World Earth Day is observed all over the world on 22nd April. This is good time to think about hybrid vehicle. Green cars color Earth Day‎. Buy a green car and save earth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+