ಜಾಗ್ವಾರ್ ಎಕ್ಸ್ ಜೆ; ವಿಶ್ವದ ವರ್ಷದ ಲಕ್ಷುರಿ ಕಾರಿಗೆ ಜೈ

ಟಾಟಾ ಗ್ರೂಪ್ ನ ಐಷಾರಾಮಿ ವಾಹನ ತಯಾರಿಕಾ ಘಟಕ ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್ ನೂತನ ಕಾರನ್ನು ಕಳೆದ ವರ್ಷ ಹೊರತಂದಿತ್ತು. ನೂತನ ಜಾಗ್ವಾರ್ ಎಕ್ಸ್ ಜೆಯ ಸುಂದರ ವಿನ್ಯಾಸ, ಆಕರ್ಷಕ ಫೀಚರ್ ಗಳನ್ನು ಪರಿಶೀಲಿಸಿ ಪರೀಕ್ಷಕರು ಇದನ್ನು ಜಾಗತಿಕ ರಸ್ತೆಯಲ್ಲಿರುವ ಅತ್ಯುತ್ತಮ ಐಷಾರಾಮಿ ಕಾರೆಂದು ಕರೆದಿದ್ದಾರೆ. ಈ ಕಾರು ಮೇ 2010ರಂದು ರಸ್ತೆಗಿಳಿದಿದ್ದು, ಮಾಧ್ಯಮ ಮತ್ತು ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದಿದೆ" ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಟೆಕ್ ಮಾಹಿತಿ: ಆಲ್ ನ್ಯೂ ಜಾಗ್ವಾರ್ ಎಕ್ಸ್ ಜೆ 5.0 ಎಲ್ ಸೂಪರ್ ಚಾರ್ಜ್ ಡ್ ಎಜೆ 8-ಸಿಲಿಂಡರ್ ವಿಜೆನ್ 3 ಪೆಟ್ರೊಲ್ ಎಂಜಿನ್ ಹೊಂದಿದೆ. ಇದು ಝಡ್ ಎಫ್ 6 ಸ್ಪೀಡ್ ಟ್ರಾನ್ಸ್ ಮಿಷನ್ ಹೊಂದಿದ್ದು ಸುಮಾರು 5 ಸಾವಿರ ಸಿಸಿ ನೀಡುತ್ತದೆ. ಎಲ್ ಇಡಿ ಟೇಲ್ ಲೈಟ್, ಏರ್ ಸಸ್ಪೆನ್ಷನ್ ಸೇರಿದಂತೆ ಹಲವು ಆಕರ್ಷಕ ಫೀಚರ್ ಗಳನ್ನು ಹೊಂದಿದೆ.
ಇತರ ಐಷಾರಾಮಿ ಕಾರುಗಳಿಗಿಂತ ಭಿನ್ನವಾದ ಆಕರ್ಷಕ ವಿನ್ಯಾಸವನ್ನು ಈ ನಾಲ್ಕು ಬಾಗಿಲಿನ ಸ್ಪೋರ್ಟ್ಸ್ ಕೂಪ್ ಹೊಂದಿದೆ. ಇದರ ಇಂಟಿರಿಯರ್ ಆಕರ್ಷಕವಾಗಿದ್ದು 135 ಎಂಎಂ ಜಾಸ್ತಿ ಸ್ಥಳಾವಕಾಶವನ್ನೂ ಹೊಂದಿದೆ. ಇದರಲ್ಲಿರುವ ಗ್ಲಾಷ್ ರೂಫ್ ಸಹಾಯದಿಂದ ಹೊರಗಿನ ನೈಸರ್ಗಿಕ ಬೆಳಕನ್ನೂ ಪಡೆಯಬಹುದಾಗಿದ್ದು ಆರಾಮ ಎನಿಸುತ್ತದೆ. ಈ ಐಷಾರಾಮಿ ಸಲೂನ್ ಕಾರಲ್ಲಿ ಪಾದಚಾರಿಗಳನ್ನು ಗುರುತಿಸುವ ಸೆನ್ಸಾರ್, 3 ಪ್ಲಾಷ್ ಇಂಡಿಕೇಟರ್, ಚಾಲಕ ಮತ್ತು ಪ್ರಯಾಣಿಕರಿಬ್ಬರಿಗೂ ಏರ್ ಬ್ಯಾಗ್ ಸೌಲಭ್ಯಗಳಿವೆ.
ಮೈಲೇಜ್ ಮತ್ತು ಇಂಧನ ದಕ್ಷತೆ: ನೂತನ ಜಾಗ್ವಾರ್ ಎಕ್ಸ್ ಜೆ 5.0 ಲೀಟರ್ ನ ಎಲ್ ವಿ 8 ಜೆನ್ 3 ಎಂಜಿನ್ ಹೊಂದಿದೆ. ಇದರಲ್ಲಿರುವ ಝಡ್ ಎಫ್ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಕರ್ಷಕ ಸವಾರಿಗೆ ಸೂಕ್ತವಾಗಿದೆ. ಎಕ್ಸ್ ಜೆ ನಗರದಲ್ಲಿ ಪ್ರತಿಲೀಟರ್ ಗೆ 5.8 ಕಿ.ಮೀ. ಮತ್ತು ಹೆದ್ದಾರಿಗಳಲ್ಲಿ 10.5 ಕಿ.ಮೀ ಮೈಲೇಜ್ ನೀಡುತ್ತದೆ. ಇದು ಪ್ರತಿಗಂಟೆಗೆ ಗರಿಷ್ಠ 250 ಕಿ.ಮೀ. ವೇಗವನ್ನೂ ನೀಡುತ್ತದೆ.
ಇದು ನೋಡಲು ಸುಂದರವಾದ ಸ್ಪೋರ್ಟ್ಸ್ ಕೂಪ್ ಕಾರು. ಇದರ ಬಾಡಿಯನ್ನು ಹಗುರ ಅಲ್ಯುಮಿನಿಯಂನಿಂದ ರಚಿಸಲಾಗಿದ್ದು, ಹಗುರವಿರುವುದರಿಂದ ಇಂಧನ ದಕ್ಷತೆಯನ್ನೂ ಹೆಚ್ಚಿಸಿದೆ. ಹಗುರವಾಗಿರುವುದರಿಂದ ಹ್ಯಾಂಡ್ಲಿಂಗ್ ಮಾಡುವುದು ಸುಲಭವಾಗಿದ್ದು ಸುರಕ್ಷತೆಯ ಸವಾರಿಗೂ ಪೂರಕವಾಗಿದೆ. ನೂತನ ಜಾಗ್ವಾರ್ ಎಕ್ಸ್ ಜೆ ಕಾರಿಗೆ ಭಾರತದ ಎಕ್ಸ್ ಶೋರೂಂ ದರ ಸುಮಾರು 95 ಲಕ್ಷ ರೂಪಾಯಿ. ಈ ಕಾರ್ 2,325 ಕೆ. ಜಿ ಭಾರವಿದೆ. ನೂತನ ಪ್ರಶಸ್ತಿಯಿಂದ ಇದು ಐಷಾರಾಮಿ ಸವಾರಿಗೆ ಜಾಗತಿಕವಾಗಿ ಸೂಕ್ತ ಕಾರೆಂದು ಜಾಹೀರಾಗಿದೆ.


Click it and Unblock the Notifications








