ವೋಲ್ಟ್ ಗೆ ಹಸಿರು ಹೊದಿಕೆ, ಲೀಫ್ ಗೆ ಅಗ್ರಸ್ಥಾನ

Nissan Leaf
ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರು ನಿಸ್ಸಾನ್ ಲೀಫ್ ಗೆ ವರ್ಷದ ಕಾರೆಂಬ ಗರಿ ದೊರಕಿದೆ. ನ್ಯೂಯಾರ್ಕ್ ನ ಅಂತರ್ ರಾಷ್ಟ್ರೀಯ ವಾಹನ ಪ್ರದರ್ಶನದಲ್ಲಿ ಈ ಕಾರು 2011ರ ಅತ್ಯುತ್ತಮ ಕಾರುಗಳಲ್ಲಿ ಅಗ್ರಸ್ಥಾನ ಪಡೆದಿದೆ. ಆದರೆ ವರ್ಷದ ಗ್ರೀನ್ ಕಾರು ವಿಭಾಗದಲ್ಲಿ ನಿಸ್ಸಾನ್ ಲೀಫ್ ರನ್ನರ್ ಅಪ್ ಆಗಿದೆ. 2011ರ ಪರಿಸರ ಸ್ನೇಹಿ ಪ್ರಶಸ್ತಿಯನ್ನು ಷೆವರ್ಲೆ ವೊಲ್ಟ್ ಪಡೆದುಕೊಂಡಿದೆ.

ವಿಶ್ವದ ಅತ್ಯುತ್ತಮ ಕಾರುಗಳಲ್ಲಿ ಲೀಫ್ ನಂತರದ ಸ್ಥಾನಗಳನ್ನು ಆಡಿ ಎ8 ಮತ್ತು ಬಿಎಂಡಬ್ಲ್ಯು 5 ಸೀರಿಸ್ ಕಾರುಗಳು ಪಡೆದುಕೊಂಡಿದೆ. ನಿಸ್ಸಾನ್ ಲೀಫ್ ಎಂಬುದು ವಿಶ್ವದ ಹೈಬ್ರಿಡ್ ಕಾರು ಲೋಕಕ್ಕೆ ಹೆಬ್ಬಾಗಿಲಾಗಿದೆ ಎಂದು ವಾಹನ ಪ್ರದರ್ಶನದಲ್ಲಿದ್ದ ಪರೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಅತ್ಯುತ್ತಮ ಕಾರ್ಯನಿರ್ವಹಣೆ ಮತ್ತು ಝೀರೋ ಎಮಿಷನ್ ಗುಣದ ಪರಿಸರ ಸ್ನೇಹಿ ಕಾರಾಗಿರುವುದರಿಂದ ನಿಸ್ಸಾನ್ ಲೀಫ್ ಜಗತ್ತಿನ ಅತ್ಯುತ್ತಮ ಕಾರೆಂದು ವಿಶ್ಲೇಷಕರು ಹೇಳುತ್ತಾರೆ.

ಉಳಿದಂತೆ ಫೆರಾರಿ 458 ಇಟಲಿಯಾ ವಿಶ್ವದ ಅತ್ಯುತ್ತಮ ಕಾರ್ಯಕ್ಷಮತೆಯ ಕಾರು ಮತ್ತು ಆಸ್ಟನ್ ಮಾರ್ಟಿನ್ ವಿಶ್ವದ ಅತ್ಯುತ್ತಮ ವಿನ್ಯಾಸದ ಕಾರಾಗಿ ಹೊರಹೊಮ್ಮಿದೆ. 2011ರ ನೂತನ ಜಾಗ್ವಾರ್ ಎಕ್ಸ್ ಜೆ "ಪ್ರಸಕ್ತ ವರ್ಷದ ಅಂತಾರಾಷ್ಟ್ರೀಯ ಐಷಾರಾಮಿ ಕಾರು" ಎಂಬ ಪ್ರಶಸ್ತಿಯನ್ನು ರಿನೌನ್ ಎಂಬ ರಸ್ತೆ ಮತ್ತು ಪ್ರವಾಸಿ ಮ್ಯಾಗಜಿನ್ ನಿಂದ ಪಡೆದಿತ್ತು.

More from DriveSpark

Article Published On: Saturday, April 23, 2011, 10:25 [IST]
English summary
Electric car Nissan Leaf has been named the 2011 World Car of the Year at the New York International Auto Show. Audi A8 and BMW 5 series cars respectively get 2nd and 3rd place. Ferrari 458 Italia as the World Performance Car and the Aston Martin Rapide for World Design Car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+