ಪಬ್ಲಿಕ್ ಟಾಯ್ಲೆಟ್ ಗಿಂತ ಕಾರು ಸೀಟು ಜಾಸ್ತಿ ಗಲೀಜು: ವಿಜ್ಞಾನಿಗಳು

ಸಾರ್ವಜನಿಕ ಶೌಚಾಲಯದಲ್ಲಿ ಪ್ರತಿ ಸೆಂಟಿಮೀಟರ್ ಗೆ ಸುಮಾರು 80ರಷ್ಟು ಬ್ಯಾಕ್ಟೀರಿಯಾಗಳಿದ್ದರೆ ಕಾರಿನ ಇಂಟಿರಿಯರ್ ನಲ್ಲಿ ಪ್ರತಿ ಸೆಂಟಿಮೀಟರ್ ನಲ್ಲಿ ಸುಮಾರು 700ರಷ್ಟು ಬ್ಯಾಕ್ಟೀರಿಯಾಗಳಿರುವುದಾಗಿ ಲಂಡನಿನ ಸಂಶೋಧನಾ ವರದಿಯೊಂದನ್ನು ಉಲ್ಲೇಖಿಸಿ ಡೈಲಿ ಮೈಲ್ ವರದಿ ಮಾಡಿದೆ.
"ಇದರಲ್ಲಿ ಹೆಚ್ಚಿನವು ಅಪಾಯಕಾರಿ ಬ್ಯಾಕ್ಟೀರಿಯಾಗಳು. ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿಯಾದಂತಹ ಬ್ಯಾಕ್ಟೀರಿಯಾಗಳು ಕಾರಿನೊಳಗೆ ಹೆಚ್ಚಿನ ಸಂಖ್ಯೆಯಲ್ಲಿವೆ" ಎಂದು ಲಂಡನ್ ನ ಕ್ವೀನ್ ಮೆರಿ ಯುನಿವರ್ಸಿಟಿಯ ಜೈವಿಕ ವೈದ್ಯಕೀಯ ವಿಜ್ಞಾನ ವಿಭಾಗದ ನಿರ್ದೇಶಕರು ಹೇಳಿದ್ದಾರೆ. ಜನರಿಗೆ ಮನೆಯನ್ನು ಸ್ವಚ್ಛಗೊಳಿಸುವ ಅಸ್ಥೆ ಕಾರಿನ ಸ್ವಚ್ಛತೆಯತ್ತ ಇರುವುದಿಲ್ಲ. ಎಲ್ಲೆಲ್ಲೂ ರಬ್ಬಿಶ್ ತರಹ ಡ್ರೈವ್ ಮಾಡಿ ಬಂದು ಕಾರನ್ನು ಬ್ಯಾಕ್ಟೀರಿಯಾಗಳ ತೊಟ್ಟಿಯಾಗಿಸುತ್ತಾರೆ" ಎಂದು ಹೇಳಿದ್ದಾರೆ.
ಕಾರಿನೊಳಗೆ ಕಲ್ಮಷ ತುಂಬಿರುವ ಸ್ಥಳಗಳಲ್ಲಿ ಪ್ರತಿ ಅರ್ಧ ಇಂಚಿಗೆ ಸುಮಾರು ಒಂದು ಸಾವಿರದಷ್ಟು ಸಂಖ್ಯೆಯಲ್ಲಿ ಬ್ಯಾಕ್ಟೀರಿಯಾಗಳು ವಾಸಿಸುತ್ತವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. "ಬ್ಯಾಕ್ಟೀರಿಯಾಗಳ ವೃದ್ಧಿಗೆ ಕಾರು ಸೂಕ್ತ ಸ್ಥಳವಾಗಿದೆ. ಇದರೊಳಗೆ ತಿಂಡಿ ತಿನಿಸು ತಿನ್ನುವುದು ಹೆಚ್ಚು ಅಪಾಯಕಾರಿ. ಇದಕ್ಕಾಗಿ ಇಂಟಿರಿಯರ್ ಮತ್ತು ಎಕ್ಸ್ ಟೀರಿಯರ್ ಶುಚಿತ್ವದತ್ತ ಹೆಚ್ಚಿನ ಗಮನ ನೀಡಬೇಕು" ಎಂದು ಅವರು ಸಲಹೆ ನೀಡುತ್ತಾರೆ.
ಅಕ್ಕಿ, ಜಂಕ್ ಫುಡ್, ಟೊಮೆಟೊ ಮತ್ತು ನೋಟಿನ ಮೇಲಿರುವ ಬಾಸಿಲಸ್ ಸೆರೆಸ್ ಎಂಬ ಒಂದು ಬಗೆಯ ಬ್ಯಾಕ್ಟೀರಿಯಾ ಕಾರ್ ಸೀಟ್ ಗಳಲ್ಲಿ ಸಾಮಾನ್ಯವಾಗಿರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಆಹಾರ ವಿಷವಾಗುವುದು ಅಂದರೆ ಫುಡ್ ಪಾಯಿಸನ್ ಆಗುವುದರಲ್ಲಿ ಈ ಬ್ಯಾಕ್ಟೀರಿಯಾದ್ದು ಮಹತ್ವದ ಪಾತ್ರವಾಗಿದೆ. ಮಾನವನ ಚರ್ಮದಲ್ಲಿ ಮತ್ತು ಮಣ್ಣಿನಲ್ಲಿರುವ ಇನ್ನೊಂದು ಬಗೆಯ ಆರ್ಟ್ರೊಬ್ಯಾಕ್ಟರ್ ಎಂಬ ಬ್ಯಾಕ್ಟೀರಿಯಾ ಕೂಡ ಕಾರಿನೊಳಗೆ ಹೇರಳವಾಗಿರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ನಿಮ್ಮ ಕಾರಿನ ಸೀಟ್ ಒಮ್ಮೆ ಮುಟ್ಟಿ ನೋಡಿ. ವ್ಯಾಕ್!!


Click it and Unblock the Notifications








