ಗ್ಯಾಸ್ ಫಿಕ್ಸ್ ಮಾಡಿ, ಪೆಟ್ರೊಲ್ ಡೀಸಲ್ ಕಾರಿಗೆ ಗುಡ್ ಬೈ ಹೇಳಿರಿ

spark
ಒಂದೆಡೆ ಪೆಟ್ರೊಲ್ ದರಗಳು ಏರಿಕೆ ಕಾಣುತ್ತಿವೆ. ಪೆಟ್ರೊಲ್ ಗೆ ಗುಡ್ ಬೈ ಹೇಳಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸೋಣವೆಂದರೆ ಅದು ದುಬಾರಿ ಮತ್ತು ಯಾಕೋ ಮನಸ್ಸಿಗೆ ಸಮಾಧಾನವಿಲ್ಲ. ಹೀಗಾಗಿ ಹೆಚ್ಚೆಚ್ಚು ಜನರು ಅಡುಗೆ ಅನಿಲ ಅರ್ಥಾತ್ ಎಲ್ ಪಿಜಿ ಮತ್ತು ಸಿಎನ್ ಜಿ ಚಾಲಿತ ಕಾರುಗಳತ್ತ ಮುಖ ಮಾಡುತ್ತಿದ್ದಾರೆ. ಗ್ರಾಹಕರ ಈ ಯುಟರ್ನ್ ಗಮನದಲ್ಲಿಟ್ಟುಕೊಂಡೇ ವಾಹನ ಕಂಪನಿಗಳು ತಮ್ಮ ಹೆಚ್ಚಿನ ಕಾರು ಮಾಡೆಲ್ ಗಳಿಗೆ ಗ್ಯಾಸ್ ಸಿಲಿಂಡರ್ ಪಿಕ್ಸ್ ಮಾಡುತ್ತಿವೆ.

ಜನರು ಪರ್ಯಾಯ ಇಂಧನದ ಕಾರುಗಳತ್ತ ಹೆಚ್ಚು ಗಮನ ನೀಡುತ್ತಿದ್ದಾರೆ. ಒಟ್ಟಾರೆ ಕಾರು ಮಾರುಕಟ್ಟೆಯಲ್ಲಿ ಸಿಎನ್ ಜಿ ಮತ್ತು ಎಲ್ ಪಿಜಿ ಚಾಲಿತ ಕಾರುಗಳ ಮಾರಾಟದ ಪಾಲು ಶೇಕಡ 10ರ ಆಸುಪಾಸಿನಲ್ಲಿದೆ ಎಂದು ಕೆಲವು ವರದಿಗಳು ತಿಳಿಸಿವೆ. ಮಾರುತಿ ಸುಜುಕಿ, ಹ್ಯುಂಡೈ ಮೋಟರ್ ಮತ್ತು ಜನರಲ್ ಮೋಟರ್ ಕಂಪನಿಗಳು ಗ್ಯಾಸ್ ಪಿಕ್ಸ್ ಮಾಡೋದರಲ್ಲಿ ಮುಂಚೂಣಿಯಲ್ಲಿವೆ. ಈ ಕಂಪನಿಗಳು ಕಾಂಪ್ಯಾಕ್ಟ್ ಮತ್ತು ಸೆಡಾನ್ ಸೆಗ್ಮೆಂಟ್ ನಲ್ಲಿ ಶೇ. 3ರಿಂದ 4ರಷ್ಟು ಆವೃತ್ತಿಗಳು ಸಿಎನ್ ಜಿ, ಎಲ್ ಪಿಜಿ ಇಂಧನದಲ್ಲಿ ಚಲಿಸುವ ಕಾರುಗಳಾಗಿವೆ.

ಇದರಲ್ಲಿ ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಮುಂದಿದೆ. ಸಣ್ಣ ಕಾರುಗಳಾದ ಆಲ್ಟೊ, ವ್ಯಾಗನಾರ್ ಮತ್ತು ಎಸ್ಟಿಲೊ ಸಿಎನ್ ಜಿ ಆಯ್ಕೆಯಲ್ಲಿ ದೊರಕುತ್ತಿವೆ. ದೇಶದ ಕೆಲವು ರಾಜ್ಯಗಳಲ್ಲಿ ಇಕೊ ಮತ್ತು ಎಸ್ ಎಕ್ಸ್ 4 ಸೆಡಾನ್ ಕಾರುಗಳು ಸಿಎನ್ ಜಿ ಆಯ್ಕೆಯಲ್ಲಿ ದೊರಕುತ್ತಿವೆ. ಮಾರುತಿ ಸುಜುಕಿ ಓಮ್ನಿ ಮತ್ತು ವ್ಯಾಗನಾರ್ ಡ್ಯೋ ಎಲ್ ಪಿಜಿಗೆ ಬೇಡಿಕೆ ಹೆಚ್ಚಿದ್ದು ಈ ಸೆಗ್ಮೆಂಟ್ ನ ಒಟ್ಟಾರೆ ಮಾರಾಟದಲ್ಲಿ ಶೇ. 10ರಷ್ಟು ಪಾಲನ್ನು ಆಕ್ರಮಿಸಿದೆ.

ಹ್ಯುಂಡೈ ಮೋಟರ್ ಕೂಡ ಸಿಎನ್ ಜಿ- ಎಲ್ ಪಿಜಿ ಆವೃತ್ತಿಗಳನ್ನು ಪರಿಚಯಿಸಿದೆ. ಕಂಪನಿಯ ಸಣ್ಣ ಕಾರು ಸ್ಯಾಂಟ್ರೊ ಮತ್ತು ಎಂಟ್ರಿ ಲೆವೆಲ್ ಸೆಡಾನ್ ಕಾರು ಅಸ್ಸೆಂಟ್ ಕೂಡ ಅನಿಲ ಇಂಧನ ಆಯ್ಕೆಯಲ್ಲಿ ದೊರಕುತ್ತಿದೆ. "ಕಂಪನಿಯ ಒಟ್ಟಾರೆ ಕಾರು ಮಾರಾಟದಲ್ಲಿ ಇಂತಹ ಕಾರುಗಳ ಮಾರಾಟ ಶೇ. 14ರಿಂದ ಶೇ. 15ರಷ್ಟಿದೆ" ಎಂದು ಹ್ಯುಂಡೈ ವಕ್ತಾರರು ಹೇಳುತ್ತಾರೆ.

ಜನರಲ್ ಮೋಟರ್ಸ್ ನ ಷೆವರ್ಲೆ ಬೀಟ್ ಮತ್ತು ಸ್ಪಾರ್ಕ್ ಕಾರುಗಳು ಎಲ್ ಪಿಜಿ ಆವೃತ್ತಿಗಳಲ್ಲಿ ದೊರಕುತ್ತವೆ. ಇದೇ ರೀತಿ ಷೆವರ್ಲೆ ಅವಿಯೊ ಮತ್ತು ಓಪ್ಟ್ರಾ ಕಾರುಗಳನ್ನು ಸಿಎನ್ ಜಿ ಇಂಧನಗಳಲ್ಲಿಯೂ ದೊರಕುತ್ತವೆ. ಜನರಲ್ ಮೋಟರ್ಸ್ ನ ಅನಿಲ ಚಾಲಿತ ಕಾರು ಮಾರಾಟ ಶೇಕಡಾ 10ರಿಂದ ಶೇಕಡಾ 12ರಷ್ಟಿದೆ. ಆಸಕ್ತಿದಾಯಕ ವಿಷಯವೆಂದರೆ ಪೆಟ್ರೊಲ್ ಮತ್ತು ಡೀಸಲ್ ಆವೃತ್ತಿಯ ಕಾರುಗಳಿಗೆ ಹೋಲಿಸಿದರೆ ಸಿಎನ್ ಜಿ ಮತ್ತು ಎಲ್ ಪಿಜಿ ಕಾರುಗಳಿಗೆ ದರ ಕೂಡ ಕಡಿಮೆಯಾಗಿದೆ.

More from DriveSpark

Article Published On: Monday, April 25, 2011, 11:00 [IST]
English summary
The automobile companies offering some alternative fuel driven models of their cars. Maruti Suzuki introduced CNG variants of its Alto, WagonR, Estilo, Eeco and SX4 sedan Cars. Hyundai Motor offers CNG-LPG variants of entry level sedan, Accent and small car Santro. GM LPG variants of small cars Beat and Spark. General Motors also introduced CNG variants of Aveo and Optra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+