ಮಹೀಂದ್ರ "ವೆರಿಟೊ" ರಸ್ತೆಗೆ, ದರ 4.82 ಲಕ್ಷ ರೂಪಾಯಿ

"ಹಳೆಯ ಲೊಗನ್ ಕಾರಿನಂತೆ ಕಾಣುವ ನೂತನ ವೆರಿಟೊ ಒಂದಿಷ್ಟು ಹೊಸ ಸ್ಟೈಲ್ ಮತ್ತು ಬದಲಾವಣೆಯೊಂದಿಗೆ ರಸ್ತೆಗಿಳಿದಿದೆ. ಇದು ದೇಶದ ಗ್ರಾಹಕರಿಗೆ ಖರೀದಿಸಲು ಸೂಕ್ತವಾಗಿರುವ ಎಂಟ್ರಿ ಲೆವೆಲ್ ಸೆಡಾನ್ ಕಾರಾಗಿದೆ" ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ವೆರಿಟಾಸ್ ಎಂಬುದರ ಲ್ಯಾಟಿನ್ ಪದ "ವೆರಿಟಾಸ್". ಇದರ ಅರ್ಥ "ಸತ್ಯ" ಎಂದಾಗಿದೆ ಎಂದು ಕಂಪನಿ ಹೇಳಿದೆ.
ನೂತನ ಮಹೀಂದ್ರ ವೆರಿಟೊ 1.5 ಲೀಟರ್ ಡಿಎಸ್ಐ ರೆನಾಲ್ಟ್ ಟರ್ಬೊ ಎಂಜಿನ್ ಹೊಂದಿದೆ. ಇದು ಮೂರು ಎಂಜಿನ್ ಆಯ್ಕೆಗಳಲ್ಲಿ ಅಂದರೆ 1.4 ಲೀಟರ್, 1.5 ಲೀಟರ್ ಮತ್ತು 1.6 ಲೀಟರ್ ಎಂಜಿನ್ ಗಳಲ್ಲಿ ದೊರಕುತ್ತಿದೆ. ಇದರಲ್ಲಿ 1.6 ಲೀಟರ್ ಡೀಸಲ್ ಕಾರಿನದ್ದಾಗಿದ್ದು ಉಳಿದವು ಪೆಟ್ರೊಲ್ ಆವೃತ್ತಿಗಳಾಗಿವೆ.
ಇದರಲ್ಲಿ ಕಾರು ಸೀಟನ್ನು ಎತ್ತರಕ್ಕೆ ಹೊಂದಾಣಿಕೆ ಮಾಡಬಹುದಾದ ಅನುಕೂಲತೆ, ಇಂಧನ ದಕ್ಷತೆಯ ಎಂಜಿನ್ ಇತ್ಯಾದಿ ಫೀಚರ್ ಗಳು ಗ್ರಾಹಕರಿಗೆ ಇಷ್ಟವಾಗುವಂತಿದೆ. ಸಿಂಗಲ್ ಡಿಸ್ಕ್ ಸಿಡಿ ಪ್ಲೇಯರ್, ಎದುರಿನ ಫಾಗ್ ಲ್ಯಾಂಪ್, ಪವರ್ ವಿಂಡೊ, ಗ್ಲೊವ್ ಬಾಕ್ಸ್ ಲೈಟ್, ಟ್ರಂಕ್ ರೂಮ್ ಲೈಟ್ ಸೇರಿದಂತೆ ಸಾಕಷ್ಟು ಫೀಚರ್ ಗಳಿವೆ. ಈ ಕಾರ್ ಕಾಂಪ್ಯಾಕ್ಟ್ ಸೆಡಾನ್ ಕಾರಾಗಿದ್ದು ಆಕರ್ಷಕ ಬಾಡಿ ವಿನ್ಯಾಸ ಹೊಂದಿದೆ.


Click it and Unblock the Notifications








