ಮದುವೆ ದಿಬ್ಬಣದಲ್ಲಿ ಮನಸೂರೆಗೊಂಡ ಕಾರುಗಳು

ಯುವರಾಜ ವಿಲಿಯಂ ಅರಮನೆ ಹೊರಗಡೆ "ಜಸ್ಟ್ ವೆಡ್" ಎಂಬ ನಂಬರ್ ಪ್ಲೇಟ್ ಹಾಕಿದ ಆಸ್ಟನ್ ಮಾರ್ಟಿನ್ ವೊಲಾಂಟೆ ಕಾರಲ್ಲಿ ಸುತ್ತಾಡಿದರು. ಕೇಟ್ ಅವರು ರಾಲ್ಸ್ ರಾಯ್ಸ್ ಪಾಂಟಮ್ 6 ಕಾರಲ್ಲಿ ಕುಳಿತು ಎಲ್ಲರತ್ತ ನಗುಮುಖದಿಂದ ಕೈಬೀಸುತ್ತಿದ್ದರು. ಈ ಕಾರನ್ನು ಎಲಿಜಬೆತ್ 2 ಅವರಿಗೆ 1977ರಲ್ಲಿ ವಿಶೇಷವಾಗಿ ರೂಪಿಸಲಾಗಿತ್ತು. ಇದೇ ಕಾರಲ್ಲಿ ಕೇಟ್ ಕೂಡ ಸಂಚರಿಸಿ ಪುಳಕಗೊಂಡರು. ವಿಲಿಯಂ ಮತ್ತು ಕೇಟ್ಸ್ ಬಂದ ಕಾರುಗಳಿಗೆ ಗುಂಡು ನಿರೋಧಕ ಗಾಜುಗಳನ್ನು ಹಾಕಲಾಗಿತ್ತು. ಗ್ಯಾಸ್ ಅಟ್ಯಾಕ್ ನಿಂದ ಪಾರಾಗುವ ಉದ್ದೇಶದಿಂದ ಕ್ಯಾಬಿನನ್ನು ವಿಶೇಷವಾಗಿ ರೂಪಿಸಲಾಗಿತ್ತು.
ಬ್ರಿಟನ್ ರಾಜಮನೆತನತದ ಕಾರುಲೋಕ: ಬ್ರಿಟನ್ ಯುವರಾಜನಿಗೆ ಓಪನ್ ಟಾಪ್ ಆಗಿರೋ ಡಿಬಿ6 ಎಂಬ ಆಸ್ಟನ್ ಮಾರ್ಟಿನ್ ಡ್ರೈವಿಂಗ್ ಮಾಡೋದು ಇಷ್ಟ. ರಾಣಿ ಡಯಾನ ಸುಜುಕಿ ವಿಟಾರ ಕಾರನ್ನು ತನ್ನ ಸವಾರಿಗೆ ಬಳಸುತ್ತಿದ್ದರು. ರಾಜ ಆಂಡ್ರ್ಯೂ ಮತ್ತು ಷರಹ್ ಫ್ರೆಗ್ ಸನ್ ಅವರಿಗೂ ಆಸ್ಟನ್ ಮಾರ್ಟಿನ್ ಕಂಪನಿಯ ಡಿಬಿ7 ವೊಂಟೆಜ್ ಕಾರೆಂದರೆ ಅಕ್ಕರೆ. ಕೇಟ್ ಮಿಡಲ್ ಟನ್ ಅವರಲ್ಲಿ ಸಿಲ್ವರ್ ಬಣ್ಣದ ಹೊಸ ಆಡಿ ಎ3 ಕಾರಿದೆ. ಆಡಿ ಎ6 ಕಾರಿನಲ್ಲಿ ವಿಲಿಯಂ ಮತ್ತು ಕೇಟ್ ಜೊತೆಯಾಗಿ ಸವಾರಿ ಮಾಡುತ್ತಿದ್ದರು.
1963ರಲ್ಲಿ ರಾಣಿ ಎಲಿಜಬೆತ್ 2 ಬಳಸುತ್ತಿದ್ದದ್ದು "ರೋವರ್ ಪಿ5" ಎಂಬ ಸಲೂನ್ ಕಾರು. ನಂತರ ಎಂವೈಟಿಐ ನಂಬರ್ ಪ್ಲೇಟ್ ಇರುವ ವಾಕ್ಸುಹಾಲ್ ಕ್ರೆಸ್ಟ್ ಪಿಎ ಎಂಬ ಕಾರನ್ನು ಬಳಸಿದ್ದರು. ಆಕೆ ಒಮ್ಮೊಮ್ಮೆ ಲ್ಯಾಂಡ್ ರೋವರ್ ಕಾರನ್ನು ಸವಾರಿಗೆ ಬಳಸುತ್ತಿದ್ದರು. ರೋಲ್ಸ್ ರಾಯ್ಸ್, ಡೈಮ್ಲರ್ ಡಿಇ36 ಸೇರಿದಂತೆ ಇವರು ಹಲವು ಕಾರುಗಳ ಒಡತಿ.
ಯುವರಾಣಿ 1987ರಲ್ಲಿ ಆಸ್ಟನ್ ಮಾರ್ಟಿನ್ ಡಿಬಿ6 ಕಾರು ಬಳಸುತ್ತಿದ್ದರು. ಡಿಯಾನ ಬಳಿ ಜಾಗ್ವಾರ್ ಎಕ್ಸ್ ಜೆ6 ಕಾರಿದೆ. ರೋಲ್ಸ್ ರಾಯ್ಸ್ ಫಾಂಟಮ್ ಕಾರುಗಳು ಸಹ ಇವರಲ್ಲಿದೆ. 1966ರಲ್ಲಿ ಪ್ರಿನ್ಸ್ ಚಾರ್ಲ್ಸ್ ಬಳಸುತ್ತಿದ್ದದ್ದು ಎಂಜಿಸಿ ಎಂಬ ಸ್ಪೋರ್ಟ್ಸ್ ಕಾರು. ಡಿಯಾನ ಬಳಿ ಮರ್ಸಿಡಿಸ್ ಬೆಂಝ್ ಎಸ್ಎಲ್500 ಕಾರು ಇದೆ. ಇವರಲ್ಲಿರುವ ಕಾರುಗಳಿಗೆ ಇವೆಲ್ಲ ಕೆಲವು ಉದಾಹರಣೆಗಳು. ವಿಶ್ವದಲ್ಲಿರುವ ಎಲ್ಲಾ ದುಬಾರಿ, ಐಷಾರಾಮಿ ಕಾರುಗಳು ಬ್ರಿಟನ್ ರಾಜಮನೆತನದ ಗ್ಯಾರೇಜಿನಲ್ಲಿವೆ ಎನ್ನಬಹುದು.


Click it and Unblock the Notifications








