ವಾಹನ ಖರೀದಿದಾರರಿಗೆ ದರ ಏರಿಕೆಯ ಬರೆ

Bike Price Hike
ಪ್ರಸಕ್ತ ತ್ರೈಮಾಸಿಕದಲ್ಲಿ ಮಂಡನೆಯಾಗಲಿರುವ ಬಜೆಟ್ ನಲ್ಲಿ ಅಬಕಾರಿ ಸುಂಕ ಏರಿಕೆ ಕಾಣಲಿರುವ ಊಹಾಪೋಹಗಳಿದ್ದು, ಬೈಕ್ ಮತ್ತು ಕಾರ್ ದರಗಳು ಮತ್ತೆ ಏರಿಕೆ ಕಾಣುವ ಸಾಧ್ಯತೆಯನ್ನು ಉದ್ಯಮ ಮೂಲಗಳು ವ್ಯಕ್ತಪಡಿಸಿವೆ. ಹೀಗಾಗಿ ವಾಹನ ಖರೀದಿದಾರರಿಗೆ ಮತ್ತೊಮ್ಮೆ ದರ ಏರಿಕೆಯ ಬರೆ ಬೀಳುವ ನಿರೀಕ್ಷೆಯಿದೆ.

ಬಿಡಿಭಾಗಗಳ ದರ ಹೆಚ್ಚಳ, ಸಾಗಾಟ ವೆಚ್ಚ ಮತ್ತು ಒಟ್ಟಾರೆ ತಯಾರಿಕಾ ವೆಚ್ಚ ಏರಿಕೆ ಕಂಡ ಕಾರಣವನ್ನಿಟ್ಟುಕೊಂಡು ಕಂಪನಿಗಳು ಕಳೆದ ಎರಡು ತಿಂಗಳಲ್ಲಿ ವಾಹನ ದರ ಏರಿಕೆ ಮಾಡಿದ್ದವು. ಮಾರುತಿ, ಹ್ಯುಂಡೈನಂತಹ ಕಂಪನಿಗಳ ಲಾಭ ಇಳಿಕೆಗೂ ಒಟ್ಟಾರೆ ವೆಚ್ಚ ಏರಿಕೆ ಕಂಡಿರುವುದೇ ಕಾರಣ ಎನ್ನಲಾಗಿದೆ. ಅಬಕಾರಿ ಸುಂಕ ಹೆಚ್ಚಾದರೆ ವಾಹನಗಳ ದರ ಏರಿಕೆ ಮಾಡುವ ದಾರಿಯಲ್ಲದೇ ಬೇರೆ ಆಯ್ಕೆಗಳಿಲ್ಲ ಎಂದು ಮಾರುತಿ ಸುಜುಕಿಯ ಮುಖ್ಯವ್ಯವಸ್ಥಾಪಕರು ಹೇಳಿದ್ದಾರೆ.

3 ಲಕ್ಷ ರೂ. ಆಸುಪಾಸಿನಲ್ಲಿರುವ ವಾಹನಗಳಿಗೆ ಸುಮಾರು 6 ಸಾವಿರ ರೂ.ನಷ್ಟು ದರ ಹೆಚ್ಚಾಗುವ ಮುನ್ಸೂಚನೆಯನ್ನೂ ಮಾರುತಿ ಸುಜುಕಿಯ ಮುಖ್ಯವ್ಯವಸ್ಥಾಪಕರು ನೀಡಿದ್ದಾರೆ. ವೆಚ್ಚ ಹೆಚ್ಚಾಗಿರುವ ಕಾರಣ ನೀಡಿ ಇತ್ತೀಚೆಗೆ ಕಂಪನಿಯು ಶೇ. 1-2ರಷ್ಟು ದರ ಹೆಚ್ಚಿಸಿತ್ತು.

ಬಜೆಟ್ ನಲ್ಲಿ ಅಬಕಾರಿ ಸುಂಕ ಏರಿಕೆ ಮಾಡಿದರೆ ಅದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೀರೋ ಹೋಂಡಾದ ಸಿಇಒ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷರು ಹೇಳಿದ್ದಾರೆ. ದರ ಏರಿಕೆಯು ದ್ವಿಚಕ್ರ ವಾಹನ ಮಾರುಕಟ್ಟೆ ಮೇಲೆ ಬೇಗ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಆರ್ಥಿಕ ಹಿಂಜರಿತದ ಹಿನ್ನಲೆಯಲ್ಲಿ ಎರಡು ವರ್ಷದ ಹಿಂದೆ ಕೇಂದ್ರ ಸರಕಾರವು ಅಬಕಾರಿ ಸುಂಕದ ಮೇಲೆ ವಿನಾಯಿತಿ ನೀಡಿತ್ತು. ಇದು ಜಾಗತಿಕವಾಗಿ ದೇಶದ ವಾಹನ ಉದ್ಯಮವು ಪ್ರಗತಿ ಕಾಣಲು ನೆರವಾಗಿತ್ತು. ಕಳೆದ ಬಜೆಟ್ ನಲ್ಲಿ ಸರಕಾರವು ಅಬಕಾರಿ ಸುಂಕವನ್ನು ಶೇ. 2ಕ್ಕೆ ತಂದಿತ್ತು.

ಪ್ರಸಕ್ತ ಬಜೆಟ್ ನಲ್ಲಿ ಸರಕಾರವು ಅಬಕಾರಿ ಸುಂಕವನ್ನು ಹಿಂದಿನ ಶೇ. 4ಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ವಾಹನ ಉದ್ಯಮ ಕಳವಳ ಪಟ್ಟಿದೆ. ಈಗಾಗಲೇ ಅತ್ಯಧಿಕ ನಿರ್ವಹಣೆ ವೆಚ್ಚ ಮತ್ತು ಇಂಧನ ದರಗಳು ಏರಿಕೆ ಕಂಡಿರುವುದರಿಂದ ಕಂಪನಿಗಳ ಲಾಭ ಇಳಿಕೆ ಕಂಡಿರುವುದರಿಂದ ಕಂಪನಿಗಳು ಕಂಗಲಾಗಿವೆ.

ಅಬಕಾರಿ ಸುಂಕ ಏರಿಕೆ ಕಂಡರೆ ಆ ವೆಚ್ಚ ಗ್ರಾಹಕರ ಮೇಲೆ ವರ್ಗಾವಣೆಗೊಳ್ಳಲಿದೆ ಎಂದು ಮಹೀಂದ್ರ ಆಟೋಮೋಟಿವ್ಸ್ ನ ಅಧ್ಯಕ್ಷರು ಹೇಳಿದ್ದಾರೆ. ಇದೇ ಮಾತನ್ನು ಹೋಂಡಾ ಕಂಪನಿಯೂ ಹೇಳಿದೆ.

More from DriveSpark

Article Published On: Saturday, February 5, 2011, 15:41 [IST]
English summary
English Summary: With the budget for the ensuing FY in the offing, speculations are there that the prices of cars and motorcycles may increase. If any increased in excise duty is effected in the budget, then it would be the second such increase in the last two months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+