ಅಕ್ಟೋಬರ್ ನಲ್ಲಿ ಮಾರುತಿ ಸುಜುಕಿ ಸೆರ್ವೊ ರಸ್ತೆಗೆ

ಬಹುನಿರೀಕ್ಷಿತ ಕಾರಿನ ಬಿಡುಗಡೆ ಕುರಿತು ದೇಶದ ಬೃಹತ್ ಕಾರು ತಯಾರಿಕ ಕಂಪನಿ ಅಧಿಕೃತವಾಗಿ ಇನ್ನೂ ಪ್ರಕಟಿಸಿಲ್ಲ. ಸುಜುಕಿ ಸೆರ್ವೊ ಮುಂದಿನ ಅಕ್ಟೋಬರ್ ವೇಳೆಗೆ ರಸ್ತೆಗಿಳಿಯುವ ನಿರೀಕ್ಷೆಯನ್ನು ಕಂಪನಿಯ ಮೂಲಗಳು ವ್ಯಕ್ತಪಡಿಸಿವೆ.
ಮಾರುತಿ ಸುಜುಕಿ ಸೆರ್ವೊ ಕಾರಿನ ದರ ಸುಮಾರು 2 ಲಕ್ಷ ರು. ಒಳಗಡೆ ಇರಲಿದೆ. ಇದು ತನ್ನದೇ ಮಾರುತಿ ಆಲ್ಟೊ ಮತ್ತು ಟಾಟಾದ ನ್ಯಾನೊ ಕಾರಿಗೆ ಪೈಪೋಟಿ ನೀಡಲಿದೆ. ನ್ಯಾನೊ ಕಾರುಗಳ ದರಗಳೂ ಕೂಡ ಒಂದು ಲಕ್ಷ ರು.ನಿಂದ ಆರಂಭವಾಗಿ ಎರಡುವರೆ ಲಕ್ಷ ರು.ವರೆಗಿದೆ.
ವಿನ್ಯಾಸ ಮತ್ತು ಸ್ಟೈಲ್ ವಿಷಯದಲ್ಲಿ ಸುಜುಕಿ ಸೆರ್ವೊ ಕಾರು ಆಲ್ಟೊದಂತೆ ಇರಲಿದೆ. ಸೆರ್ವೊ ಸುಮಾರು 800 ಸಿಸಿ, 54 ಹಾರ್ಸ್ ಪವರ್ ಎಂಜಿನ್ ನೊಂದಿಗೆ ರಸ್ತೆಗಿಳಿಯುವ ನಿರೀಕ್ಷೆಯಿದೆ. ಇದು ಅತ್ಯಧಿಕ ಇಂಧನ ದಕ್ಷತೆಯ ಕಾರು ಕೂಡ ಆಗಲಿದೆ ಎಂದು ಮೂಲಗಳು ಹೇಳಿವೆ.
ನೂತನ ಸುಜುಕಿ ಸೆರ್ವೊ ಪ್ರತಿಲೀಟರ್ ಇಂಧನಕ್ಕೆ ಸುಮಾರು 24 ಕಿ.ಮೀ. ಮೈಲೇಜ್ ನೀಡುವ ನಿರೀಕ್ಷೆಯಿದೆ. ಇದರಲ್ಲಿ ಪವರ್ ಸ್ಟೇರಿಂಗ್, ಪವರ್ ವಿಂಡೊ ಇತ್ಯಾದಿ ಫೀಚರ್ ಗಳಿರಲಿವೆ ಎಂದು ಮೂಲಗಳು ಹೇಳಿವೆ.


Click it and Unblock the Notifications








