ನೌಕರರ ಮುಷ್ಕರ, ಮಾರುತಿಗೆ 150 ಕೋಟಿ ರು. ನಷ್ಟ

Maruti Suzuki Employees Strike
ಇಂದಿಗೆ ಮಾನೆಸರ್ ಘಟಕದಲ್ಲಿ ಮಾರುತಿ ನೌಕರರು ಮುಷ್ಕರ ಆರಂಭಿಸಿ ನಾಲ್ಕು ದಿನಗಳಾಗಿವೆ. ಇದರಿಂದಾಗಿ ಕಂಪನಿಗೆ ಸುಮಾರು 150 ಕೋಟಿ ರು. ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಇದೀಗ ಕಂಪನಿಯು ಮುಷ್ಕರ ನಿರತ ಸಿಬ್ಬಂದಿ ಮೇಲೆ ಕ್ರಮಕ್ಕೆ ಮುಂದಾಗಿದೆ.

ಕಂಪನಿ ಆಡಳಿತದ ವಿರುದ್ಧ ಹೋರಾಡಲು ಜನರನ್ನು ಪ್ರೇರೆಪಿಸಿದ ಕಾರಣಕ್ಕಾಗಿ ಈಗಾಗಲೇ 11 ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಿದೆ.

ಮಾರುತಿ ಸುಜುಕಿ ನೌಕರರ ಹೊಸ ಸಂಘಟನೆಯನ್ನು ಪರಿಗಣಿಸುವ ಬೇಡಿಕೆಯನ್ನಿಟ್ಟು ನೌಕರರು ಮುಷ್ಕರ ಆರಂಭಿಸಿದ್ದರು. ಇದರಿಂದಾಗಿ ಪ್ರತಿದಿನ ಸುಮಾರು 180 ಕಾರುಗಳ ಉತ್ಪಾದನೆಗೆ ತೊಂದರೆಯಾಗಿತ್ತು.

ಉಳಿದ ಸಿಬ್ಬಂದಿಗಳ ಸುರಕ್ಷತೆಯ ದೃಷ್ಟಿಯಿಂದ ಮುಷ್ಕರಕ್ಕೆ ಕಾರಣರಾದ 11 ಜನರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಎಂಎಸ್ ಐ ಚೇರ್ಮನ್ ಆರ್ ಸಿ ಭಾರ್ಗವ ಹೇಳಿದ್ದಾರೆ.

"ಯಾವುದೇ ಸೂಚನೆ ನೀಡದೆ ಮುಷ್ಕರ ಆರಂಭಿಸಲಾಗಿದೆ. ಹೀಗಾಗಿ ಸಿಬ್ಬಂದಿಗಳ ನಿಯಮಬಾಹಿರವಾದ ಯಾವುದೇ ಬೇಡಿಕೆಗಳನ್ನು ಕಂಪನಿ ಈಡೇರಿಸುವುದಿಲ್ಲ" ಎಂದು ಭಾರ್ಗವ ಹೇಳಿದ್ದಾರೆ. ಈ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ದೊರಕುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

More from DriveSpark

Article Published On: Tuesday, June 7, 2011, 15:30 [IST]
English summary
The ongoing strike at Maruti’s Manesar plant since three days stays on. Complete halt at the facility the company is facing a production loss of about 1,800 car units every day. Maruti Suzuki standing tough against the protestors and has right away terminated 11 employees,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+