ಡೀಸಲ್ ಕಾರಿಗೆ ಜೈಹೋ, ಡೆಲಿವರಿ ಟ್ರಾಫಿಕ್ ಜಾಮ್!

ಗ್ರಾಹಕರು ಮನಸ್ಸು ಬದಲಾಯಿಸಿದ್ದಾರೆ. ಡೀಸಲ್ ಕಾರುಗಳನ್ನು ಖರೀದಿಸಲು ಹೆಚ್ಚು ಒಲವು ತೋರುತ್ತಿದ್ದಾರೆ. "ಕಳೆದ ಒಂದು ತಿಂಗಳಲ್ಲಿ ಡೀಸಲ್ ಕಾರು ಬೇಡಿಕೆ ದ್ವಿಗುಣಗೊಂಡಿದೆ" ಎಂದು ಮಾರುತಿ ಮಾರುಕಟ್ಟಿ ವಿಭಾಗದ ಮುಖ್ಯಸ್ಥರು ಹೇಳುತ್ತಾರೆ.
ಗ್ರಾಹಕರ ಬದಲಾದ ಈ ಮನೋಭಾವನೆಯಿಂದ ಗ್ರಾಹಕರ ಬೇಡಿಕೆಗೆ ತಕ್ಕಂತೆ ಡೀಸಲ್ ಇಂಜಿನ್ ಅಳವಡಿಸಿ ಪೂರೈಸುವುದು ಕಂಪನಿಗಳಿಗೆ ಕಷ್ಟವಾಗುತ್ತಿದೆ. ಪರಿಣಾಮವಾಗಿ ಡೆಲಿವರಿ ತಡವಾಗುತ್ತಿದೆ. ಉದಾಹರಣೆಗೆ ಸ್ವಿಫ್ಟ್ ಡೆಲಿವರಿಗೆ ಈಗ 5 ತಿಂಗಳು ಮತ್ತು ಡಿಜೈರ್ ಡೆಲಿವರಿಗೆ 6 ತಿಂಗಳು ಬೇಕಿದೆ.
"ಎರಡು ವರ್ಷದ ಹಿಂದೆ ಡೀಸಲ್ ಸೆಗ್ಮೆಂಟ್ ಗೆ ಪ್ರವೇಶಿಸಲು ವಾಹನ ಕಂಪನಿಗಳು ಭಯಪಡುತ್ತಿದ್ದವು. ಇದೀಗ ಪೆಟ್ರೊಲ್ ಗಿಂತ ಡೀಸಲ್ ಸುಮಾರು ಶೇ. 40ರಷ್ಟು ಅಗ್ಗವಾಗಿರುವುದರಿಂದ ಹೆಚ್ಚು ಜನರು ಡೀಸಲ್ ವಾಹನ ಖರೀದಿಸುತ್ತಿದ್ದಾರೆ" ಎಂದು ವಾಹನ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.


Click it and Unblock the Notifications








