ಹೀಗಿದೆ ನೋಡಿ ನೂತನ ಮಾರುತಿ ಝೆನ್ ಎಸ್ಟಿಲೋ

ಮಾರುತಿ 800 ಕಾರನ್ನು ಪರಿಚಯಿಸಿದ ನಂತರ ಕಂಪನಿ ಹಿಂತುರುಗಿ ನೋಡಿದಂತಿಲ್ಲ. ಪ್ರತಿಕಾರುಗಳೂ ಸಕ್ಸಸ್ ಸ್ಟೋರಿ ಬರೆಯುತ್ತ ಸಾಗಿದವು. 800 ನಂತರ ರಸ್ತೆಗಿಳಿದದ್ದು ಝೆನ್. ಅದು 2005ರವರೆಗೆ ಜನಪ್ರಿಯವಾಗಿತ್ತು. ಅದರ ಮುಂದುವರೆದ ಆವೃತ್ತಿಯಾಗಿ ಬಂದದ್ದು ಮಾರುತಿ ಸುಜುಕಿ ಝೆನ್ ಎಸ್ಟಿಲೋ....
20 ಲಕ್ಷ ಎಸ್ಟಿಲೋ ಮಾರಾಟದ ಸಂಭ್ರಮಕ್ಕೆ ಮಾರುತಿ ಲಿಮೆಟೆಡ್ ಅಡಿಷನ್ ಎಸ್ಟಿಲೋ ಕಾರೊಂದನ್ನು ಹೊರತಂದಿದೆ. ಅದರ ಹೆಸರು ಎಸ್ಟಿಲೋ ವೋಗ್ಯೂ. ಹತ್ತು ಹಲವು ಬದಲಾವಣೆಗಳೊಂದಿಗೆ ಬಂದ ಈ 5 ಡೋರಿನ ಹ್ಯಾಚ್ ಬ್ಯಾಕ್ ಹೆಚ್ಚು ಮಾಡರ್ನ್ ಆಗಿ ಕಾಣುತ್ತಿದೆ. ಇದು ಸ್ಯಾಂಟ್ರೊ ಕ್ಸಿಂಗ್, ಹ್ಯುಂಡೈ ಐ10, ಐ20, ಷೆವರ್ಲೆ ಸ್ಪಾರ್ಕ್ ಮತ್ತು ಫೋರ್ಡ್ ಫಿಗೊ ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಎಂಜಿನ್ ಮತ್ತು ವಿಶೇಷತೆಗಳು: ನೂತನ ಮಾರುತಿ ಸುಜುಕಿ ಝೆನ್ ಎಸ್ಟಿಲೊ ಕಾರುಗಳು 998 ಸಿಸಿ ಕೆ-ಸೀರಿಸ್ ಎಂಜಿನ್ ಹೊಂದಿವೆ. ಎ-ಸ್ಟಾರ್ ಕಾರುಗಳಲ್ಲಿಯೂ ಇದೇ ಎಂಜಿನ್ ಇವೆ. ಇದು 6,200 ಆರ್ ಪಿಎಂಗೆ 68 ಹಾರ್ಸ್ ಪವರ್ ನೀಡುತ್ತದೆ. ಎಸ್ಟಿಲೊ 5-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಈ ಹಿಂದೆ ಮೆಕಾನಿಕಲ್ ಟ್ರಾನ್ಸ್ ಮಿಷನ್ ಗೇರ್ ಹೊಂದಿತ್ತು.
ಎಕ್ಸಿಟೀರಿಯರ್: ಆಕರ್ಷಕ ವಿನ್ಯಾಸದಿಂದ ಎಸ್ಟಿಲೊ ಇಷ್ಟವಾಗುತ್ತದೆ. ನೂತನ ವುಡ್, ಚೌಕಟ್ಟು, ಹಿಂಬದಿ ಲ್ಯಾಂಪ್, ಆಕರ್ಷಕ ವಿನ್ಯಾಸದ ಮುಂದಿನ ಬಂಪರ್ ಸುಂದರವಾಗಿದೆ. ಒಟ್ಟಾರೆಯಾಗಿ ಈ ಹ್ಯಾಚ್ ಬ್ಯಾಕ್ ನ ಒಟ್ಟಾರೆ ವಿನ್ಯಾಸ ಕಣ್ಮನ ಸೆಳೆಯುವಂತ್ತಿದೆ.
ಇಂಟಿರಿಯರ್ ಗೆ ಇಣುಕಿ: ಹೊರವಿನ್ಯಾಸದಂತೆ ಇಂಟಿರಿಯರ್ ವಿನ್ಯಾಸ್ ಕೂಡ ಮುದ ನೀಡುತ್ತದೆ. ಆಕರ್ಷಕ ಫೀಚರ್ ಗಳಿಂದ ಕೂಲಾಗಿರುವ ಕ್ಯಾಬಿನ್ ಸವಾರಿಯನ್ನು ಅತ್ಯುತ್ಕರ್ಷಗೊಳಿಸುತ್ತದೆ. ಡ್ಯೂಯಲ್ ಟೋನ್ ಕಲರ್ ನಿಂದಾಗಿ ಐಷಾರಾಮಿ ಸೆಡಾನ್ ಕಾರಿನಲ್ಲಿ ಕುಳಿತಂತೆ ಭಾಸವಾಗುತ್ತದೆ. ಸೀಟುಗಳು ಕೂಡ ಸ್ಮಾರ್ಟಾಗಿ ಫಿಟ್ ಮಾಡಲಾಗಿದ್ದು, ಅದರಲ್ಲಿರುವ ಹೊಂದಾಣಿಕೆ ಫೀಚರ್ ಗಳು ತಲೆನೋವು, ಬೆನ್ನು ನೋವು ಬಾರದಂತೆ ನೋಡಿಕೊಳ್ಳಲು ಸಫಲವಾಗಿವೆ.
ಆರಾಮದಾಯಕತೆ: ಕಂಪನಿಯ ಇತರ ಕಾರುಗಳಿಗೆ ಹೋಲಿಸಿದರೆ ನೂತನ ಎಸ್ಟಿಲೊ ಕಾರಲ್ಲಿ ಎಕ್ಸ್ ಟ್ರಾ ಕಂಫರ್ಟ್ ಇರುವ ಅನುಭವವಾಗುತ್ತದೆ. ಇದರಲ್ಲಿರುವ ಹಲವು ಫೀಚರ್ ಗಳು ಕೂಡ ಆರಾಮದಾಯಕತೆಗೆ ನೆರವಾಗಿವೆ.
ಅಂದರೆ ಪವರ್ ಸ್ಟೀರಿಂಗ್, ಪವರ್ ವಿಂಡೋ, ರಿಮೋಟ್ ಕಂಟ್ರೋಲ್ ಲಾಕಿಂಗ್, ಮಡುಚಬಹುದಾದ ಹಿಂಬದಿ ಸೀಟುಗಳು, ಹಿಂಬದಿಯ ಪಾರ್ಸೆಲ್ ಟ್ರೇ, ವಿದ್ಯುತ್ ಪವರ್ ಮೂಲಕ ಹೊಂದಾಣಿಕೆ ಮಾಡಬಹುದಾದ ಸೈಡ್ ಮಿರರ್, ಹಿಂಬದಿಯ ವೈಪರ್, ವಾಷರ್, ಟೆಕ್ನೊಮೀಟರ್, ಡಿಜಿಟಲ್ ವೊಡೊಮೀಟರ್, ಹಿಂಬದಿಯ ಮತ್ತು ಮುಂಬದಿಯ ಓಡೊಮೀಟರ್ ಇತ್ಯಾದಿ ಫೀಚರ್ ಗಳು ಮರುವಿನ್ಯಾಸದಿಂದ ಹೆಚ್ಚು ಆರಾಮದಾಯಕ ಸವಾರಿಗೆ ನೆರವಾಗುತ್ತವೆ.
ಸುರಕ್ಷತೆ: ಇದರಲ್ಲಿ ಎಲೆಕ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಜೊತೆಗೆ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಇದೆ. ಜೊತೆಗೆ ಎದುರಿನ ಸೀಟಿಗೆ ಎಸ್ಆರ್ಎಸ್ ಏರ್ ಬ್ಯಾಗ್ ಗಳು, ಮೂರು ಪಾಯಿಂಟ್ ಸೀಟ್ ಬೆಲ್ಟ್ ಗಳು ಮತ್ತು ಹಿಂಬದಿಯ ಫಾಗ್ ಲ್ಯಾಂಪ್ ಗಳು ಸುರಕ್ಷತೆಯ ಸವಾರಿಗೆ ನೆರವಾಗುತ್ತವೆ.
ಮೈಲೇಜ್ ಮತ್ತು ದರ: ನೂತನ ಮಾರುತಿ ಎಸ್ಟಿಲೊ ನಗರದಲ್ಲಿ ಪ್ರತಿಲೀಟರ್ ಇಂಧನಕ್ಕೆ 14.5 ಕಿ.ಮೀ. ಮತ್ತು ಹೆದ್ದಾರಿಯಲ್ಲಿ ಪ್ರತಿಲೀಟರ್ ಗೆ 18.2 ಕಿ.ಮೀ. ಮೈಲೇಜ್ ನೀಡುತ್ತದೆ. ಈ ಹ್ಯಾಚ್ ಬ್ಯಾಕ್ ಕಾರು ದರ(ದೆಹಲಿ ಎಕ್ಸ್ ಶೋರೂಂ) ಸುಮಾರು 3.27 ಲಕ್ಷ ರು.ನಿಂದ 4.14 ಲಕ್ಷ ರು.ವರೆಗಿದೆ.


Click it and Unblock the Notifications








