ಮಾನ್ಸೂನ್ ಆಫರ್: ಕಾರುಗಳಿಗೆ ಭಾರಿ ಡಿಸ್ಕೌಂಟ್

ಕೆಲವು ಕಂಪನಿಗಳು ತಮ್ಮ ಪೆಟ್ರೋಲ್ ಕಾರುಗಳ ದರ ಇಳಿಕೆ ಮಾಡಿವೆ. ಉಳಿದ ಕಂಪನಿಗಳು ಡೀಸಲ್ ಕಾರುಗಳನ್ನು ಖರೀದಿ ಮಾಡಿದರೆ ಯಾವೆಲ್ಲ ಲಾಭಗಳಿವೆ ಅಂತ ಜಾಹೀರಾತು ನೀಡಲು ಆರಂಭಿಸಿವೆ.
ಮಾರುತಿ ಸುಜುಕಿ ಕಂಪನಿಯು ಆಲ್ಟೋ ಕಾರುಗಳಿಗೆ ದರ ಕಡಿಮೆ ಮಾಡಿದೆ. ಆಲ್ಟೊ ಮತ್ತು ಆಲ್ಟೊ ಕೆ10 ದರಗಳು ಕ್ರಮವಾಗಿ 41 ಸಾವಿರ ರು. ಮತ್ತು 25 ಸಾವಿರ ರು. ಕಡಿಮೆಗೆ ದೊರಕಲಿದೆ. ಷೆವರ್ಲೆ ಬೀಟ್ ದರ 21 ಸಾವಿರ ರು. ಕಮ್ಮಿಯಾಗಿದೆ.
ವರ್ಷಕ್ಕೆ ಶೇ. 8.99 ವಿಶೇಷ ಬಡ್ಡಿ ದರದಲ್ಲಿ ಜೂನ್ ತಿಂಗಳಲ್ಲಿ ಕಾರುಗಳನ್ನು ಮಾರಾಟ ಮಾಡುವುದಾಗಿ ಟಾಟಾ ಮೋಟರ್ಸ್ ಡೀಸಲ್ ಕಾರುಗಳ ಜಾಹೀರಾತು ನೀಡುತ್ತಿದೆ. ಈ ಡಿಸ್ಕೌಂಟ್ ನಿಂದಾಗಿ ಇಂಡಿಕಾ ವಿಸ್ಟಾ ಕ್ಯೂಡ್ರಾಜೆಟ್ ದರ 35 ಸಾವಿರ ರು.ನಷ್ಟು ಕಡಿಮೆಯಾಗಲಿದೆ. ಇಂಡಿಗೊ ಇಸಿಎಸ್ ದರ 30 ಸಾವಿರ ರು. ಮತ್ತು ಇಂಡಿಗೊ ಮಾಂಝಾ ದರ 45 ಸಾವಿರ ರು. ಇಳಿಕೆ ಕಾಣಲಿದೆ.
ಫಿಯೆಟ್ ಕೂಡ ತನ್ನ ಡೀಸಲ್ ಕಾರುಗಳ ಇಂಧನ ದಕ್ಷತೆ ಹೆಚ್ಚಾಗಿದೆ ಎಂದಿದೆ. ಫಿಯೆಟ್ ಪುಂಟೊ ಮತ್ತು ಲಿನಿಯಾ ದರ ಸುಮಾರು 40 ಸಾವಿರ ರು. ಕಡಿಮೆಯಾಗಿದೆ. ಈಗ ಪುಂಟೊ ಡೀಸಲ್ ಕಾರು 5.26 ಲಕ್ಷ ರು. ಮತ್ತು ಲಿನಿಯಾ ದರ 7.56 ಲಕ್ಷ ರು.ಗೆ ದೊರಕುತ್ತದೆ.


Click it and Unblock the Notifications








