ಕಾರುಗಳಿಗೆ ಮೈಲೇಜ್ ಪಟ್ಟಿ ಕಟ್ಟಲು ಸರಕಾರ ಪಟ್ಟು

ಇದರಿಂದೇನೂ ಲಾಭ ಅಂತ ಕೇಳಬಹುದು. ಇದು ಕಾರು ಖರೀದಿದಾರರಿಗೆ ವಿವಿಧ ಕಾರುಗಳ ನಿಖರ ಮೈಲೇಜ್ ತಿಳಿಯಲು ನೆರವಾಗಲಿದೆ. ಅಂದರೆ ಕೆಲವು ಕಂಪನಿ ಪ್ರಾಯೋಜಿತ ವಾಹನ ವಿಮರ್ಶೆ ಓದಿ ಅಥವಾ ಮಾರಾಟದ ತಂತ್ರಕ್ಕೆ ಸಿಲುಕಿ ಮೈಲೇಜ್ ವಿಷಯದಲ್ಲಿ ಮೋಸ ಹೋಗುವುದು ತಪ್ಪಲಿದೆ.
ಇಂಧನ ದರ ಇಂದು ಹೆಚ್ಚು ತಲೆಬಿಸಿ ಮಾಡಿಕೊಳ್ಳುವ ವಿಷಯ. ಹೀಗಾಗಿ ಪ್ರತಿಯೊಬ್ಬ ಕಾರು ಖರೀದಿದಾರರು ಖರೀದಿಗೆ ಮುನ್ನ ಮೊದಲು ಕೇಳುವ ಪ್ರಶ್ನೆ ಮೈಲೇಜ್ ಎಷ್ಟಿದೆ ಅಂತ. ಕೇಂದ್ರ ಸರಕಾರವು ಪ್ರತಿ ಹೊಸ ಕಾರುಗಳನ್ನು ಪ್ರಮಾಣೀಕರಿಸಿ ಮೈಲೇಜ್ ಲೇಬಲ್ ನೀಡಲಿದೆ. ಹೀಗಾಗಿ ಮೈಲೇಜ್ ಖಾತ್ರಿಗಾಗಿ ಹತ್ತು ಜನರಲ್ಲಿ ವಿಚಾರಿಸುವ ಅವಶ್ಯಕತೆ ಗ್ರಾಹಕರಿಗೆ ಬಾರದು.
ಬೃಹತ್ ಕಾರುಗಳ ಸಾಕಷ್ಟು ವಿರೋಧಗಳ ನಡುವೆಯೂ ಎನರ್ಜಿ ಎಫಿಶಿಯನ್ಸಿ ಬ್ಯೂರೋ ಗೆದ್ದಿದೆ. ಇದೀಗ ಬ್ಯೂರೋದ ಒತ್ತಡಕ್ಕೆ ವಾಹನ ಕಂಪನಿಗಳು ಮಣಿದಿವೆ. ಮುಂದಿನ ವರ್ಷ ಮಾರ್ಚ್ ನಿಂದ ಎಲ್ಲಾ ವಾಹನಗಳು ಇಂಧನ ದಕ್ಷತೆಯ ಲೇಬಲ್ ಅಂಟಿಸಿಕೊಂಡು ಬರಲಿವೆ. ಇಂಧನ ದಕ್ಷತೆ ಹೆಚ್ಚಿಸಲು ಇನ್ನು ಮುಂದೆ ವಾಹನ ಕಂಪನಿಗಳು ಪೈಪೋಟಿ ನಡೆಸುವ ನಿರೀಕ್ಷೆಯಿದೆ.


Click it and Unblock the Notifications








