7ನೇ ದಿನಕ್ಕೆ ಕಾಲಿಟ್ಟ ಮಾರುತಿ ಸುಜುಕಿ ನೌಕರರ ಮುಷ್ಕರ

ವ್ಯತ್ಯಾಸವೆಂದರೆ ರಾಮದೇವ್ ಕಪ್ಪು ಹಣದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆದರೆ ಮಾರುತಿ ನೌಕರರು ಹೊಸ ಸಂಘಟನೆಯನ್ನು ಪರಿಗಣಿಸುವ ಬೇಡಿಕೆಯನ್ನಿಟ್ಟು ಮುಷ್ಕರ ನಡೆಸುತ್ತಿದ್ದಾರೆ.
ಇದೀಗ ಕಂಪನಿಯ ಮಾನೆಸರ್ ಘಟಕದಲ್ಲಿ ಉತ್ಪಾದನೆಯೂ ಸಂಪೂರ್ಣ ಸ್ಥಗಿತಗೊಂಡಿದೆ. "ಶುಕ್ರವಾರದ ಪರಿಸ್ಥಿತಿಯೂ ನಿನ್ನೆಯಂತೆಯೇ ಇದೆ" ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.
ಕಳೆದ ಶನಿವಾರದಿಂದ ಸುಮಾರು 2 ಸಾವಿರ ನೌಕರರು ಮುಷ್ಕರ ನಿರತರಾಗಿದ್ದಾರೆ. ಇಲ್ಲಿವರೆಗೆ ಕಂಪನಿಗೆ ಸುಮಾರು 5,400 ಕಾರುಗಳ ಉತ್ಪಾದನೆ ನಷ್ಟವಾಗಿದೆ ಎನ್ನಲಾಗಿದೆ. ಕಂಪನಿಗೆ ಸುಮಾರು 270 ಕೋಟಿ ರು. ನಷ್ಟವಾಗಿದೆ ಎಂದು ಮೂಲಗಳು ಹೇಳಿವೆ.
ನೌಕರರ ಮುಷ್ಕರದ ಬಿಸಿ ಕಂಪನಿಯ ಷೇರಿಗೂ ತಟ್ಟಿದೆ. ಮುಂಬೈ ಷೇರುಪೇಟೆಯಲ್ಲಿ ಮಾರುತಿ ಷೇರು ಶೇ. 1.68ರಷ್ಟು ಇಳಿಕೆ ಕಂಡಿದ್ದು 1196.80 ರು.ಗೆ ತಲುಪಿದೆ.


Click it and Unblock the Notifications








