ಚೈನಾ ಮೊಬೈಲ್ ಆಯ್ತು, ಭಾರತಕ್ಕೆ ಚೈನಾ ಆಟೋಮೊಬೈಲ್

ಜನರಲ್ ಮೋಟರ್ಸ್ ಕಂಪನಿಯು ಶಾಂಘೈ ಆಟೋಮೊಬೈಲ್ ಇನ್ ವೆಸ್ಟ್ ಮೆಂಟ್ ಕಾರ್ಪೊರೇಷನ್ ನೊಂದಿಗೆ ಕಳೆದ ವರ್ಷ ಸುಮಾರು 65 ಕೋಟಿ ಡಾಲರ್ ನ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಇದು ಭಾರತದ ರಸ್ತೆಗೆ 5 ಚೈನಿಸ್ ಕಾರುಗಳನ್ನು ಹೊರತರುವ ಒಪ್ಪಂದವಾಗಿದೆ.
ಮುಂದಿನ ಎರಡು ವರ್ಷಗಳಲ್ಲಿ ಭಾರತದ ವಾಹನ ಮಾರುಕಟ್ಟೆಗೆ ಜನರಲ್ ಮೋಟರ್ಸ್, ಎರಡು ವ್ಯಾನ್, ಎರಡು ಕಾರು ಮತ್ತು ಎರಡು ಹಗುರ ವಾಹನಗಳನ್ನು ಪರಿಚಯಿಸಲಿದೆ. ಆದರೆ ನೂತನ ಚೈನಿಸ್ ವಾಹನಗಳು ಭಾರತದಲ್ಲಿ ಸ್ಥಳೀಯ ಬ್ರಾಂಡ್ ಹೆಸರು, ಷೆವರ್ಲೆ ಲೊಗೊ ಮತ್ತು ಫಿಯೆಟ್ ಎಂಜಿನ್ ನೊಂದಿಗೆ ಬರಲಿದೆ. ಇದಕ್ಕಾಗಿ ಸುಮಾರು 25 ಕೋಟಿ ಡಾಲರ್ ಹೂಡಿಕೆ ಮಾಡಿರುವುದಾಗಿ ಜನರಲ್ ಮೋಟರ್ಸ್ ಇಂಡಿಯಾದ ಸಿಇಒ ಕಾರ್ಲ್ ಸ್ಯಾಮ್ ಹೇಳಿದ್ದಾರೆ.


Click it and Unblock the Notifications








