10 ಲಕ್ಷ ರು.ಗಿಂತ ಅಗ್ಗದ 5 ಎಟಿ ಗೇರ್ ಕಾರು ನಿಮಗಾಗಿ

ಹ್ಯುಂಡೈ ಐ10: ಹ್ಯುಂಡೈ ಐ10 ಲೋಕದಲ್ಲಿ ಮಾಗ್ನ, ಸ್ಪೋರ್ಟ್ಸ್ ಮತ್ತು ಆಸ್ಟಾ ಎಂಬ ಮೂರು ಆವೃತ್ತಿಗಳಿವೆ. 4-ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಈ ಮೂರು ಕಾರುಗಳು ಕಪ್ಪಾ ಎಂಜಿನ್ ನಲ್ಲಿ ದೊರಕುತ್ತಿವೆ. ನಗರದ ಟ್ರಾಫಿಕ್ ನಲ್ಲಿ ಈ ಎಟಿ ಕಾರು ನಿಮಗೆ ಇಷ್ಟವಾಗಬಹುದು. ದರ: 5,52,000 ರು.ನಿಂದ ಆರಂಭ.
ಹ್ಯುಂಡೈ ಐ20: ಐ20 ಎಟಿ ಕಾರು ಐ10 ಆಟೋಮ್ಯಾಟಿಕ್ ಕಾರಿನಂತೆಯೇ 4-ಸ್ಪೀಡ್ ಬಾಕ್ಸ್ ಹೊಂದಿದೆ. ಇದು 1.4 ಲೀಟರ್ ನ ಗಾಮಾ ಪೆಟ್ರೊಲ್ ಎಂಜಿನ್ ಹೊಂದಿದೆ (ಐ10ನಲ್ಲಿ 1.2 ಲೀಟರ್). ದರ: 7,48,000 ರು.ನಿಂದ ಆರಂಭ.
ಹ್ಯುಂಡೈ ವೆರ್ನಾ: ಡೀಸಲ್ ಎಂಜಿನ್ ಬಯಸುವಿರಾದರೆ ವೆರ್ನಾ ನಿಮಗೆ ಸೂಕ್ತವಾಗಿದೆ. ವೆರ್ನಾದ ಸಿಆರ್ಡಿಐ ಎಟಿ ಗೇರ್ ಬಾಕ್ಸ್ ಕೂಡ ಐ10, ಐ20ಯಂತೆಯೇ 4-ಸ್ಪೀಡ್ ಆಗಿದೆ. ಇದು ಮೆಟ್ರೊ ಸವಾರಿಗೆ ಸೂಕ್ತವಾದ ಕಾರು. ಆದರೆ ಇದರಲ್ಲಿ ಪೆಡಲ್ ಸಿಫ್ಟ್ ಅವಕಾಶವಿಲ್ಲವಾದರಿಂದ ಹೆದ್ದಾರಿ ಸವಾರಿ ಮಜಾ ನೀಡುವುದಿಲ್ಲ. ದರ: 9,02,000 ರು.
ಹೋಂಡಾ ಸಿಟಿ: ಹೋಂಡಾ ಸಿಟಿಯು 5 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ನೊಂದಿಗೆ ಬಂದಿದೆ. ಇಲ್ಲೊಂದು ಸಂತೋಷಪಡಬೇಕಾದ ವಿಷಯವಿದೆ. ಅದೇನೆಂದರೆ ಇಲ್ಲಿ ಪೆಡಲ್ ಸಿಫ್ಟ್ ಅವಕಾಶವಿದೆ. ದರ: 9,77,500 ರು.
ಮಾರುತಿ ಸುಜುಕಿ ಎಸ್ಎಕ್ಸ್4: ಇತ್ತೀಚೆಗೆ ಮಾರುತಿ ಎಸ್ಎಕ್ಸ್4 ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ನೊಂದಿಗೆ ರಸ್ತೆಗಿಳಿದಿದೆ. 4 ಸ್ಪೀಡ್ ಗೇರ್ ಬಾಕ್ಸ್ ನ ಈ ಕಾರು ಹೋಂಡಾ ಸಿಟಿಗೆ ಒಂದಿಷ್ಟು ಜರ್ಕ್ ನೀಡಿದೆ ಎಂದರೆ ತಪ್ಪಾಗದು. ಎಲೆಕ್ಟ್ರಾನಿಕ್ ಪರದೆಯಲ್ಲಿ ಗೇರ್ ಮಾಹಿತಿ ದೊರಕುತ್ತದೆ. ಆದರೆ ಇಲ್ಲೂ ಪೆಡಲ್ ಸಿಫ್ಟ್ ಮಿಸ್ ಆಗಿದೆ. ದರ: 8,25,200 ರು.ನಿಂದ ಆರಂಭ.


Click it and Unblock the Notifications