ಬೃಹತ್ ಹಗುರ ವಾಹನ ಮಾರುಕಟ್ಟೆಯಾಗುವತ್ತ ಭಾರತ

"ದೇಶದ ಹಗುರ ವಾಹನ ಮಾರುಕಟ್ಟೆ ವಿಸ್ತರಿಸುತ್ತಿದೆ. ಹೀಗಾಗಿ 2020ರ ವೇಳೆಗೆ ಹಗುರ ವಾಣಿಜ್ಯ ವಾಹನಗಳು(ಎಲ್ ಸಿವಿ) ಮತ್ತು ಪ್ರಯಾಣಿಕ ಕಾರು ಮಾರಾಟದಲ್ಲಿ ಭಾರತ ಮೂರನೇ ಸ್ಥಾನ ಪಡೆಯಲಿದೆ" ಎಂದು ಮಾರುಕಟ್ಟೆ ಸಂಶೋಧನಾ ಕಂಪನಿ ಜೆಡಿ ಪವರ್ ಏಷ್ಯಾ ಪೆಸಿಫಿಕ್ ಅಂದಾಜಿಸಿದೆ. ಉಳಿದಂತೆ ಚೀನಾ ಮತ್ತು ಅಮೆರಿಕ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಪಡೆಯಲಿದೆ ಎಂದು ಜೆಡಿ ಪವರ್ ಮುನ್ನೋಟ ತಿಳಿಸಿದೆ.
2020ಕ್ಕೆ ಭಾರತವು ಪ್ರಯಾಣಿಕ ಕಾರು ಮತ್ತು ಎಲ್ ಸಿವಿ ಸೇರಿದಂತೆ ಒಟ್ಟು 1.2 ಕೋಟಿ ಹಗುರ ವಾಹನ ಮಾರಾಟ ಮಾಡುವ ನಿರೀಕ್ಷೆಯಿದೆ ಎಂದು ಜೆಡಿ ಪವರ್ ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ. 2000ನೇ ಇಸವಿಯಲ್ಲಿ ಭಾರತ ಸುಮಾರು 7 ಲಕ್ಷ ಹಗುರ ವಾಹನ ಮಾರಾಟ ಮಾಡಿತ್ತು. "ಭಾರತದ ವಾಹನ ಮಾರುಕಟ್ಟೆ ಪ್ರಗತಿಯಲ್ಲಿದೆ. "ಮೂಲಸೌಕರ್ಯ ಅಭಿವೃದ್ಧಿ ಇಲ್ಲಿನ ಪ್ರಮುಖ ಸವಾಲಾಗಿದೆ" ಎಂದು ಅವರು ಹೇಳಿದ್ದಾರೆ.


Click it and Unblock the Notifications








