ಮಾರುತಿ ನೌಕರರ ಮುಷ್ಕರ 12ನೇ ದಿನಕ್ಕೆ, ಭಾರಿ ನಷ್ಟ

ನೌಕರರು ನೂತನ ಕಾರ್ಮಿಕ ಸಂಘದ ಕುರಿತಾದ ಬೇಡಿಕೆಯಲ್ಲಿನ ಪಟ್ಟು ಬಿಡುತ್ತಿಲ್ಲ. ಮುಷ್ಕರ ಜೂನ್ ನಾಲ್ಕರಂದು ಆರಂಭವಾಗಿತ್ತು. ಕಂಪನಿ ಆಡಳಿತದ ವಿರುದ್ಧ ಹೋರಾಡಲು ಜನರನ್ನು ಪ್ರೇರೆಪಿಸಿದ ಕಾರಣಕ್ಕಾಗಿ ಈಗಾಗಲೇ 11 ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಿದೆ.
ಇಷ್ಟು ದಿನದ ಮುಷ್ಕರ ಕಂಪನಿಯ 10,200 ಕಾರು ಉತ್ಪಾದನೆಗೆ ಹೊಡೆತ ನೀಡಿದ್ದು ಸುಮಾರು 510 ಕೋಟಿ ರು. ಆದಾಯ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ. ಮಾರುತಿ ಸುಜುಕಿ ನೌಕರರ ಹೊಸ ಸಂಘಟನೆಯನ್ನು ಪರಿಗಣಿಸುವ ಬೇಡಿಕೆಯನ್ನಿಟ್ಟು ನೌಕರರು ಮುಷ್ಕರ ಆರಂಭಿಸಿದ್ದರು. ಈ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ದೊರಕುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.


Click it and Unblock the Notifications








