ವಾಹನವಿನ್ನೂ ದುಬಾರಿ, ಗ್ರಾಹಕರ ಜೇಬಿಗೆ ಆರ್ ಬಿಐ ಕತ್ತರಿ

ಆರ್ ಬಿಐ ರೆಪೊ ದರಗಳನ್ನು ಶೇಕಡಾ 7.50ಕ್ಕೆ ಮತ್ತು ರಿಸರ್ವ್ ರೆಪೊ ದರಗಳನ್ನು ಶೇಕಡಾ 6.50ಕ್ಕೆ ಹೆಚ್ಚಿಸಿದೆ. ಹಣದುಬ್ಬರ ನಿಗ್ರಹಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಂಡಿದೆ.
ಇದರಿಂದಾಗಿ ವಾಹನ ಖರೀದಿ ಇಎಂಐ ಬಡ್ಡಿದರಗಳು ಹೆಚ್ಚಾಗಲಿವೆ. ಬಡ್ಡಿದರ ಹೆಚ್ಚಾದರೂ ಗ್ರಾಹಕರನ್ನು ಸೆಳೆಯಲು ಕಾರು ಕಂಪನಿಗಳು ಹೊಸ ಹೊಸ ಆಫರ್ ಗಳನ್ನು ಜನರ ಮುಂದಿಡುವ ನಿರೀಕ್ಷೆಯನ್ನು ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕಾರು ದರಗಳನ್ನು ಕಡಿತ ಮಾಡಿದ ಕಂಪನಿಗಳು ಆರ್ ಬಿಐನ ಈ ನಿರ್ಧಾರದಿಂದ ತಲೆಮೇಲೆ ಕೈಯಿಟ್ಟುಕೊಳ್ಳುವಂತಾಗಿವೆ. ಫೋಕ್ಸ್ ವ್ಯಾಗನ್ ಇಂಡಿಯಾ ಮತ್ತು ಮರ್ಸಿಡಿಸ್ ಬೆಂಝ್ ಇಂಡಿಯಾ ಈಗಾಗಲೇ ಕಡಿಮೆ ಬಡ್ಡಿದರಕ್ಕೆ ಕಾರು ಮಾರಾಟ ಮಾಡುತ್ತಿವೆ.


Click it and Unblock the Notifications








