ಭಾರತಕ್ಕೆ ನಿಸ್ಸಾನ್ "ಇನ್ಫಿನಿಟಿ" ಸೂಪರ್ ಲಕ್ಷುರಿ ಕಾರು

ಭಾರತದ ಐಷಾರಾಮಿ ಕಾರು ಮಾರುಕಟ್ಟೆ: ಭಾರತದಲ್ಲಿ ಸೂಪರ್ ಲಕ್ಷುರಿ ಕಾರುಗಳಿಗೆ ಕಡಿಮೆ ಬೇಡಿಕೆಯಿದೆ. ಆದರೂ ವರ್ಷದಿಂದ ವರ್ಷಕ್ಕೆ ಲಕ್ಷುರಿ ಕಾರು ಮಾರಾಟ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಸದ್ಯ ಬಿಎಂಡಬ್ಲ್ಯು ಮುಂಚೂಣಿಯಲ್ಲಿದೆ. 2010-11ರ ಆರ್ಥಿಕ ವರ್ಷದಲ್ಲಿ ಬಿಎಂಡಬ್ಲ್ಯು ಸುಮಾರು 6,281 ಕಾರು ಮಾರಾಟ ಮಾಡಿದ್ದು, ಇದಕ್ಕೂ ಹಿಂದಿನ ವರ್ಷದ 3,461 ಕಾರು ಮಾರಾಟಕ್ಕೆ ಹೋಲಿಸಿದರೆ ಗಮನಾರ್ಹ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಇದೇ ಸಮಯದಲ್ಲಿ ಮರ್ಸಿಡಿಸ್ ಬೆಂಝ್ ಕಾರು ಮಾರಾಟ 5,987 ಯೂನಿಟ್ ಗೆ ತಲುಪಿದೆ. ಇದಕ್ಕೂ ಹಿಂದಿನ ವರ್ಷ 3,611 ಬೆಂಝ್ ಕಾರುಗಳು ಮಾರಾಟಗೊಂಡಿದ್ದವು. ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಸುಮಾರು 4,500 ಕಾರುಗಳು ಮಾರಾಟವಾಗುವ ನಿರೀಕ್ಷೆಯನ್ನು ಆಡಿ ವ್ಯಕ್ತಪಡಿಸಿದೆ.
ಈ ವರ್ಷ ಕನಿಷ್ಠ 500 ಕಾರು ಮಾರಾಟವಾಗುವ ನಿರೀಕ್ಷೆಯಲ್ಲಿ ಫೋರ್ಷ್ ಕಂಪನಿಯಿದೆ. ಕಳೆದ ವರ್ಷ 130 ಪೋರ್ಷ್ ಕಾರುಗಳು ಮಾರಾಟವಾಗಿದ್ದವು. ಇದರೊಂದಿಗೆ ಇಂಗ್ಲೆಂಡ್ ನ ಬೆಂಟ್ಲಿ ಕೂಡ 1.9 ಕೋಟಿ ರು.ನ 100 ಕಾರು ಮಾರಾಟ ಮಾಡುವ ನಿರೀಕ್ಷೆಯಲ್ಲಿದೆ.


Click it and Unblock the Notifications








