ಕಾರಿನ ಕಪ್ಪು ಕನ್ನಡಿಯೊಳಗಿನ ರಹಸ್ಯ ಬಲ್ಲವರಾರು?

Tinted glasses
ಪಕ್ಕದಲ್ಲಿ ಕಾರು ನಿಂತರೆ ನಾವೆಲ್ಲ ತಲೆಬಾಚಿಕೊಳ್ಳುತ್ತೇವೆ. ಯಾಕೆಂದರೆ ಅದರ ಕಪ್ಪು ವಿಂಡೋ, ಕನ್ನಡಿಯನ್ನು ಮೀರಿಸುವಂತೆ ನಮ್ಮ ಮುಖ ಕಾಣಿಸುತ್ತದೆ. ಜೊತೆಗೆ ಕಾರಿನೊಳಗೆ ಏನು ನಡೆಯುತ್ತಿದೆ ಎಂಬುದನ್ನು ಕಾಣಿಸುವುದಿಲ್ಲ.

ಕಾರಿನ ಕಿಟಕಿಗಳಿಗೆ ಬಣ್ಣದ ಪೇಪರ್ ಅಂಟಿಸೋದು ಕಾಮನ್ ಫ್ಯಾಷನ್. ಇದರಿಂದ ಕಾರಿನ ಲುಕ್ ಹೆಚ್ಚುತ್ತದೆ. ಹೊರಗಿನವರಿಗೆ ಒಳಗಿನವರನ್ನು ನೋಡಲು ಸಾಧ್ಯವಿಲ್ಲ. ಒಳಗಿನವರು ಎಲ್ಲವನ್ನೂ ನೋಡುತ್ತ ಹೇಗೆ ಬೇಕಾದರೂ ಇರಬಹುದು. ಏನು ಬೇಕಾದರೂ ಮಾಡಬಹುದು.

ಹೀಗಾಗಿ ಮದುವೆಯಾದವರಿಗೆ ಹೆಚ್ಚಿನ ಕಾರುಗಳು ಮಧುಮಂಚವಾಗುತ್ತಿದೆ. ಮದುವೆಯಾಗದವರಿಗೆ ಕೂಡ. ಕಳ್ಳಸಾಗಾಣಿಕೆ, ಕೊಲೆ, ಕಿಡ್ನಾಪ್, ಅತ್ಯಾಚಾರ ಪ್ರಕರಣಗಳು ಕಾರಿನ ಗಾಢ ಕಪ್ಪು ಕನ್ನಡಿಯಿಂದಾಗಿ ಹೊರಜಗತ್ತಿಗೆ ತಿಳಿಯುತ್ತಿಲ್ಲ.

ಹೀಗಾಗಿ ಕಾರಿನ ಕನ್ನಡಿ ಎಷ್ಟು ಪಾರದರ್ಶಕವಾಗಿರಬೇಕೆಂದು ಬಹಳ ಹಿಂದೆಯೇ ಕಾನೂನು ರೂಪಿಸಲಾಗಿದೆ. 1989ರ ಕೇಂದ್ರ ಮೋಟರ್ ವಾಹನ ಕಾಯಿದೆ ಪ್ರಕಾರ ಕಾರಿನ ವಿಂಡ್ ಸ್ಕ್ರೀನ್ ಮತ್ತು ಹಿಂಬದಿ ಕಿಟಕಿ ಶೇ. 70ರಷ್ಟು ಮತ್ತು ಸೈಡ್ ಕಿಟಕಿಗಳು ಶೇ. 50ರಷ್ಟು ಪಾರದರ್ಶಕವಾಗಿರಬೇಕು ಎಂದು ಹೇಳಿದೆ.

ಆದರೆ ಅದು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲವೆಂಬುದಕ್ಕೆ ನಮ್ಮ ರಸ್ತೆ ಸಾಕ್ಷಿ ಹೇಳುತ್ತಿದೆ.

ಕಾರಿನೊಳಗಿನವರ ಸುರಕ್ಷತೆಗಾಗಿ ಕೆಲವರು ಕನಿಷ್ಠ ಪಾರದರ್ಶಕತೆ ಇರಬೇಕು ಎನ್ನುತ್ತಾರೆ. ಆದರೆ ಹೆಚ್ಚು ಗಾಢ ಬಣ್ಣ ಹೊಂದಿರುವ ಕಾರು ಕಿಟಕಿಗಳಲ್ಲಿ ಸ್ಪಷ್ಟವಾಗಿ ಕಾಣದ ಹಿನ್ನಲೆಯಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತವೆ ಎಂಬುದನ್ನು ಮರೆಯಬಾರದು. ಆದರೂ ಹೆಚ್ಚಿನವರು ಕಾರು ಸುಂದರವಾಗಿ ಕಾಣುತ್ತಿದೆ ಎಂಬ ಕಾರಣಕ್ಕೆ ಗಾಢ ಬಣ್ಣ ಬಳಿಯುತ್ತಾರೆ.

ಕಾರಿಗೆ ಗಾಢ ಬಣ್ಣ ಏಕೆ ಬಳಿಯುತ್ತೀರಿ ಎಂದರೆ ಜನರು ನೀಡುವ ಕಾರಣಗಗಳಿವು
* ಕಾರಿನ ಲುಕ್ ಹೆಚ್ಚಾಗುತ್ತದೆ.
* ಸೂರ್ಯನ ದಟ್ಟ ಬೆಳಕಿನಿಂದ ಪಾರಾಗಬಹುದು.
* ಹೊರಗಿನವರು ನೋಡುವುದಿಲ್ಲ. ಹೀಗಾಗಿ ಖಾಸಗಿ ಅನುಭವಕ್ಕೆ ದಕ್ಕೆಯಿಲ್ಲ.

ಒಟ್ಟಾರೆ ಸಮಾಜದ ಒಳಿತಿಗಾಗಿ ಕಪ್ಪು ಕಿಟಕಿ ಕಾರುಗಳು ಹೆಚ್ಚು ಪಾರದರ್ಶಕವಾಗಿರಬೇಕು. ಈ ಕಾಯಿದೆ ಅನುಷ್ಠಾನಕ್ಕೆ ಟ್ರಾಫಿಕ್ ಇಲಾಖೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಲಿ ಎಂಬುದು ಹೆಚ್ಚಿನವರ ಕಳಕಳಿ. ಎಲ್ಲಾ ಕಾರು ಮಾಲಿಕರಿಗೆ ಒಂದೆರಡು ತಿಂಗಳು ಟೈಂ ಕೊಟ್ಟು ಕಪ್ಪು ಕನ್ನಡಿ ಬದಲಾಯಿಸಲು ಸೂಚಿಸಿದರೆ ಒಳಿತು. ಇಲ್ಲದಿದ್ದರೆ ಕಾರಿನೊಳಗೆ ನಡೆಯುವ ಕೊಲೆ, ಅತ್ಯಾಚಾರ, ಕೇಳಿಗಳಿಗೆ ಕೊನೆಯಿಲ್ಲ....

More from DriveSpark

Article Published On: Tuesday, June 21, 2011, 11:07 [IST]
English summary
One of the most common ways in which tinted glass is used is in automobile windows. According to Central Motor Vehicle Rules, 1989, the windscreen and rear window of cars should have at least 70 per cent transparency and side windows should 50 per cent transparency. But many people not following this rules..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+