ಬೆಂಝ್ ಕಾರಿಗೆ ಓಮ್ನಿ ನಂಬರ್ ಪ್ಲೇಟ್ ಹಾಕಿದ ಭೂಪ

Luxury car
ಬೆಂಗಳೂರು ಪೊಲೀಸರೇ ದಂಗಾಗಿದ್ದರು. ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ. ಆತ ತನ್ನ ಆಮದು ಮಾಡಿದ ಬೆಂಝ್ ಕಾರಿಗೆ ಮಾರುತಿ ಓಮ್ನಿ ನಂಬರ್ ಪ್ಲೇಟ್ ಹಾಕಿ ತೆರಿಗೆ ವಂಚನೆ ಮಾಡುತ್ತಿದ್ದ. ನಮ್ಮ ಬೆಂಗಳೂರಿನಲ್ಲಿ ಕನ್ನಡ ನಂಬರ್ ಪ್ಲೇಟ್ ಹಾಕಿದರೆ ಫೈನ್ ಹಾಕುವ ಟ್ರಾಫಿಕ್ ಪೊಲೀಸರಿಗೆ ಈ ವಂಚನೆ ಗೊತ್ತಾಗಲೇ ಇಲ್ಲ.

ಅವನು ಅಲೆಕ್ಸಾಂಡರ್ ಮೊರೆ(55). ರಿಯಲ್ ಎಸ್ಟೇಟ್ ಕಂಪನಿ "ಎಲ್ ಜಿ ಹೂಕರ್"ನ ಸಿಇಒ. ಆಸ್ಟ್ರೇಲಿಯದವನು. 2008ರಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾನೆ. ಆತ ತನ್ನ ಬೆಂಝ್ ಕಾರಿಗೆ ಮಾರುತಿ ಓಮ್ನಿ(KA-03-MB-8388)ಯೊಂದರ ನಂಬರ್ ಪ್ಲೇಟ್ ಹಾಕಿದ್ದ.

ಇಲ್ಲಿವರೆಗೆ ಯಾರ ಕೈಗೂ ಸಿಕ್ಕಿ ಬೀಳದೇ ಆಮದು ಸುಂಕ, ತೆರಿಗೆ ವಂಚನೆ ಮಾಡುತ್ತಿದ್ದ. ಬೆಂಝ್ ಕಾರನ್ನು ಮುಂಬೈ ಬಂದರಿಗೆ ಆಮದು ಮಾಡಿಕೊಂಡಿದ್ದ. ಅಲ್ಲಿಂದ ಬೆಂಗಳೂರಿಗೆ ತರಿಸಿಕೊಂಡಿದ್ದ. ನಂತರ ಅದಕ್ಕೆ ಇಂದಿರಾ ನಗರ ನಿವಾಸಿಯೊಬ್ಬರ 2002 ಮಾಡೆಲ್ ಮಾರುತಿ ಓಮ್ನಿ ನಂಬರ್ ಪ್ಲೇಟನ್ನು ಹಾಕಿರುವುದಾಗಿ ಅಶೋಕನಗರ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಕಳ್ಳ ಸಿಕ್ಕಿಬಿದ್ದ: ಅಸಲಿಗೆ ಘನ ಹುದ್ದೆಯಲ್ಲಿರುವ ಅವನು ಇಂತಹ ವಂಚನೆ ಮಾಡುತ್ತಿದ್ದ ಎಂಬುದು ಯಾರಿಗೂ ಗೊತ್ತಾಗಿರಲಿಲ್ಲ. ಆತನ ಹೂಕರ್ ಕಂಪನಿಯಲ್ಲಿದ್ದ ವಿಜಯ್ ಎಂಬ ಕೆಲಸಗಾರನಿಗೂ ಆತನಿಗೂ ಏನೋ ಕಿರಿಕ್ ಆಗಿತ್ತು. ಆತನನ್ನು ಕಂಪನಿಯಿಂದ ತೆಗೆದು ಹಾಕಲಾಗಿತ್ತು.

ಸೇಡು ತೀರಿಸಿಕೊಳ್ಳುವ ಹಪಾತಪಿಯಲ್ಲಿದ್ದ ವಿಜಯ್ ನ ಕಣ್ಣಿಗೆ ಬಿದ್ದದ್ದು ಬೆಂಝ್ ಕಾರು. ಅದರ ಹಿಸ್ಟರಿ ಇವನಿಗೆ ಗೊತ್ತಿತ್ತು. ಆತ ಕ್ಯಾಮರವೊಂದನ್ನು ಹಿಡಿದುಕೊಂಡು ಅಲೆಕ್ಸಾಂಡರ್ ನಗರದಲ್ಲಿ ಬೆಂಝ್ ಕಾರಿನಲ್ಲಿ ಸುತ್ತಾಡುವುದನ್ನು ರೆಕಾರ್ಡ್ ಮಾಡಿಕೊಂಡ. ನಂತರ ಸೂಕ್ತ ಪುರಾವೆಗಳೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ.

ಪೊಲೀಸರು ಬಂದು ಬೆಂಝ್ ಕಾರು ಸೀಝ್ ಮಾಡಿದಾಗ ಅಮಾಯಕನ ಪೋಸ್ ನೀಡಿದ. ಸಾಕಷ್ಟು ದಾಖಲೆ ಕಾಗದಗಳನ್ನು ತೋರಿಸಿದ. ಆದರೆ ನಮ್ಮ ಬೆಂಗಳೂರು ಪೊಲೀಸರು ಬಿಡುತ್ತಾರೆಯೇ. ಜಾಣತನದಿಂದ ವಿಷಯ ಕೆದಕುತ್ತ ಹೋದರು. ಕೊನೆಗೆ ಎಲ್ಲಾ ವಿಷಯ ಬಾಯಿಬಿಟ್ಟ.

ಇವನ ಕುರಿತು ಭಾರತದಲ್ಲಿರುವ ಆಸ್ಟ್ರೇಲಿಯಾ ರಾಯಭಾರಿ ಕಚೇರಿಗೆ ಮಾಹಿತಿ ನೀಡಿ ಬಂಧಿಸಿದ್ದಾರೆ. ಆತ ಆಮದು ಸುಂಕ ಸೇರಿದಂತೆ ಹಲವು ತೆರಿಗೆಗಳನ್ನು ವಂಚಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇಷ್ಟು ದಿನ ಆತ ಹೇಗೆ ಇದರಲ್ಲಿ ಕಾಲ ಕಳೆದ ಎಂಬುದೇ ಪೊಲೀಸರಿಗೆ ಆಶ್ಚರ್ಯ ತರಿಸಿದ್ದು. ಇಂತಹ ಕಾರುಗಳಿಗೆ ಆಗಾಗ ಸರ್ವಿಸಿಂಗ್ ಮಾಡುವ ಅವಶ್ಯಕತೆಯಿದೆ. ಕೆಲವೊಮ್ಮೆ ಬಿಡಿಭಾಗ ಬದಲಾಯಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿಯೂ ಯಾರಿಗೂ ಸಂಶಯ ಬರದಿರದ ವಿಷಯ ಕೇಳಿ ಬೆಂಗಳೂರು ಪೊಲೀಸರೇ ದಂಗಾಗಿದ್ದರು.

More from DriveSpark

Article Published On: Wednesday, June 22, 2011, 16:45 [IST]
English summary
Australian national Alexander Moore (55) living in the Bangalore is evading arrest for allegedly ‘forging’ the registration number of a Maruti Omni (KA-03-MB-8388) for his Mercedes Benz.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+