ಹರಾಜಿನಲ್ಲಿ 18 ಕೋಟಿ ರು.ಗೆ ಬಿಕರಿಯಾದ ನಂಬರ್ ಪ್ಲೇಟ್

ಕೆ 50 ಎಂಬ ನಂಬರ್ ಪ್ಲೇಟನ್ನು ಅತ್ಯಧಿಕ ದರಕ್ಕೆ ಹರಾಜು ಮಾಡಲಾಗಿದೆ ಎಂದು ರಸ್ತೆ ಮತ್ತು ಸಾರಿಗೆ ಅಥಾರಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಹರಾಜಿನಲ್ಲಿ ಮತ್ತೊಂದು ಜನಪ್ರಿಯ ನಂಬರ್ ಪ್ಲೇಟ್ ಸಂಖ್ಯೆಯು ಐ26 ಎಂಬುದು ಸುಮಾರು 15 ಕೋಟಿ ರು.ಗೆ ಮಾರಾಟಗೊಂಡಿದೆ. ಜಿ-36 ಎಂಬ ನಂಬರ್ ಪ್ಲೇಟ್ ಸಂಖ್ಯೆಯು 13 ಕೋಟಿ ರು.ಗೆ ಬಿಕರಿಯಾಗಿದೆ. ಒಟ್ಟು 62 ಜನ ಹರಾಜುದಾರರು ಪಾಲ್ಗೊಂಡಿದ್ದರು. ಮುಂದಿನ ಸೆಪ್ಟಂಬರ್ ನಲ್ಲಿ ಮತ್ತೊಂದು ಹರಾಜು ಪ್ರಕ್ರಿಯೆ ನಡೆಯಲಿದೆಯಂತೆ!
ಫ್ಯಾನ್ಸಿ ಕ್ರೇಝ್ ಕುರಿತು: ಫ್ಯಾನ್ಸಿ ನಂಬರ್ ಅಂದ್ರೆ ಎಲ್ಲರಿಗೂ ಇಷ್ಟ. ಅದು ಮೊಬೈಲ್ ಫೋನ್ ನಂಬರ್ ಆಗಿರಬಹುದು, ತಮ್ಮಲ್ಲಿದ್ದ ವಾಹನದ ನಂಬರ್ ಆಗಿರಬಹುದು. ಇದನ್ನು ಶೋಕಿ ನಂಬರ್ ಅಂತಲೂ ಕೆಲವರು ಕರೀತಾರೆ. 9999, 8888 ಹೀಗೆ ವಿಭಿನ್ನ ಆಕರ್ಷಕ ಫ್ಯಾನ್ಸಿ ನಂಬರ್ ಗಳನ್ನು ಹೊಂದಲು ಹೆಚ್ಚಿನವರು ಇಷ್ಟಪಡುತ್ತಾರೆ. ಎಷ್ಟು ದುಡ್ಡು ತೆತ್ತಾದರೂ ಸರಿ ಅಂತಹ ನಂಬರ್ ಗಳನ್ನು ತಮ್ಮದಾಗಿಸುತ್ತಾರೆ. ಕೆಲವು ಕಾರು ನಂಬರ್ ಗಳು ಅಪಘಾತ ಉಂಟು ಮಾಡುತ್ತವೆ ಎಂದು ನಂಬುವರೂ ಇದ್ದಾರೆ.
ಮಂತ್ರಿಗಳು, ರಾಜಕಾರಣಿಗಳು, ಪೋಲಿಸ್ ಅಧಿಕಾರಿಗಳು, ಉದ್ಯಮಿಗಳು ಮತ್ತು ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವ ಪ್ರಮುಖ ವ್ಯಕ್ತಿಗಳಿಗೆ ಇಂತಹ ಕಾರು ನಂಬರ್ ಶೋಕಿ ಜಾಸ್ತಿ. ಇವರು ತಮಗೆ ಹಿಡಿಸಿದ ನಂಬರುಗಳು ಎಷ್ಟು ದುಬಾರಿಯಾಗಿದ್ದರೂ ಸರಿ ದೂಸರ ಮಾತನಾಡದೇ ಖರೀದಿಸುತ್ತಾರೆ.


Click it and Unblock the Notifications








