ಜುಲೈನಲ್ಲಿ ಫೋರ್ಸ್ ಮೋಟರ್ ನ "ಫೋರ್ಸ್ ಒನ್" ರಸ್ತೆಗೆ

ದೇಶದಲ್ಲಿ ಈ ವರ್ಷ ಸುಮಾರು 4 ಸಾವಿರ "ಫೋರ್ಸ್ ಒನ್" ಕಾರು ಮಾರಾಟ ಮಾಡುವ ಗುರಿಯನ್ನು ಕಂಪನಿ ಹೊಂದಿದೆ. "ಕಂಪನಿಯು ಸದ್ಯ ವಾಣಿಜ್ಯ ವಾಹನ ಮಾರುಕಟ್ಟೆಯಿಂದ ಹೊಸ ಅವಕಾಶಗಳ ಹುಡುಕಾಟಕ್ಕಾಗಿ ಪ್ರಯಾಣಿಕ ಕಾರು ಮಾರುಕಟ್ಟೆಗೆ ಪ್ರವೇಶಿಸುತ್ತಿದೆ" ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಫಿರೊಡಿಯಾ ಹೇಳಿದ್ದಾರೆ.
"ಫೋರ್ಸ್ ಒನ್" ಉತ್ಪಾದನೆಗಾಗಿ ಕಂಪನಿಯು ಕಳೆದ ಒಂದುವರೆ ವರ್ಷದಿಂದ ಸುಮಾರು 150 ಕೋಟಿ ರು. ಹೂಡಿಕೆ ಮಾಡಿದೆ. ನೂತನ ಎಸ್ ಯುವಿ ಕಾರನ್ನು ಕಂಪನಿಯು ಮಧ್ಯಪ್ರದೇಶದ ಪೀತಾಂಬರ್ ಘಟಕದಲ್ಲಿ ಉತ್ಪಾದಿಸುತ್ತಿದೆ. ಈ ಘಟಕವು ಕ್ಕೆ ವರ್ಷದಲ್ಲಿ 12 ಸಾವಿರ ವಾಹನ ಉತ್ಪಾದನಾ ಸಾಮರ್ಥ್ಯ ಹೊಂದಿದೆ.


Click it and Unblock the Notifications








