ಫೆರಾರಿ ಲಕ್ಕಿ ನಂಬರ್ ಉಳಿಸಿಕೊಂಡ ತೆಂಡೂಲ್ಕರ್

ಫೆರಾರಿ ಕಾರಿನಲ್ಲಿದ್ದ MH01 AD 9999 ಲಕ್ಕಿ ನಂಬರನ್ನು ತಮ್ಮಲ್ಲಿಯೇ ಸಚಿನ್ ಉಳಿಸಿಕೊಂಡಿದ್ದಾರೆ. ಇದನ್ನು ಸ್ವತಃ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎ. ಎಸ್. ಖರಿಯುಲ್ಲಾ ದೃಢೀಕರಿಸಿದ್ದಾರೆ.
"ಸಚಿನ್ ತೆಂಡೂಲ್ಕರ್ ವಿಐಪಿ ನಂಬರ್ ಉಳಿಸಿಕೊಳ್ಳುವ ಸಲುವಾಗಿ ವಿಶೇಷ ಕೋರಿಕೆ ಸಲ್ಲಿಸಿದ್ದರು. ಅವರು ತಮ್ಮ ಪ್ರತಿನಿಧಿಯೊಬ್ಬರ ಮೂಲಕ ಕೋರಿಕೆ ಪತ್ರವನ್ನು ಸಲ್ಲಿಸಿದ್ದಾರೆ. ಅದಕ್ಕಾಗಿ ಸುಮಾರು 50 ಸಾವಿರ ರು. ಡಿಡಿ ಕೂಡ ಮಾಡಿದ್ದಾರೆ" ಎಂದು ಆರ್ ಟಿಒ ಅಧಿಕಾರಿ ಹೇಳಿಕೆಯನ್ನು ಮಿಡ್ ಡೇ ವರದಿ ಮಾಡಿದೆ.
ಪತ್ರದಲ್ಲಿ ಏನಿದೆ? " ನಾನು ನನ್ನ ಫೆರಾರಿ ಕಾರನ್ನು ಜಯೇಶ್ ಕುಮಾರ್ ಬಟುಕ್ರೈ ದೇಸಾಯಿ ಗೆ ಮಾರಾಟ ಮಾಡಿರುವುದರ ಕುರಿತು ಇದು ಮಾಹಿತಿಯಾಗಿದೆ. ನನ್ನ ಹೊಸ ಕಾರಿಗೆ ಹಳೆಯ ಫೆರಾರಿ ನಂಬರನ್ನೇ ಉಳಿಸಿಕೊಳ್ಳಲು ಅವಕಾಶ ನೀಡಬೇಕಾಗಿ ನನ್ನ ಕೋರಿಕೆ. ಇದಕ್ಕಾಗಿ ನಾನು ಆರ್ ಟಿಒ ಶುಲ್ಕ 50 ಸಾವಿರ ರು. ನೀಡಲು ರೆಡಿ" ಎಂದು ಪತ್ರದಲ್ಲಿ ಸಚಿನ್ ಬರೆದಿದ್ದಾರೆ.
"ಸಚಿನ್ ತೆಂಡೂಲ್ಕರ್ ಒಂದು ತಿಂಗಳೊಳಗೆ ಹೊಸ ಕಾರು ಖರೀದಿಸಬೇಕಾಗುತ್ತದೆ. ಯಾಕೆಂದರೆ ಅವರು ನೀಡಿರುವ 50 ಸಾವಿರ ಶುಲ್ಕದ ವ್ಯಾಲಿಡಿಟಿ ಒಂದು ತಿಂಗಳು" ಎಂದು ಆರ್ ಟಿಒ ಅಧಿಕಾರಿ ಹೇಳಿದ್ದಾರೆ. ಸಚಿನ್ ಫೆರಾರಿ ಕಾರು ಖರೀದಿಸಿದ ದೇಸಾಯಿ ಹೊಸ ನಂಬರ್ ಪ್ಲೇಟ್ ಸಂಖ್ಯೆ ಪಡೆಯಬೇಕಿದೆ. ಫೆರಾರಿ ಮಾರಾಟ ಮಾಡಿದ ನಂತರ ಸಚಿನ್ ಈಗಾಗಲೇ ಹೊಸ ಸೂಪರ್ ಕಾರ್ ನಿಸ್ಸಾನ್ ಜಿಟಿ-ಆರ್ ಖರೀದಿಸಿದ್ದಾರೆ.


Click it and Unblock the Notifications








