ದುಬಾರಿ ಕಾರುಗಳ ತೆರಿಗೆ ವಂಚಿಸಲು ಟ್ಯಾಕ್ಸಿ ಟ್ರಿಕ್

Luxury cars
ಕೆಲವರು ಹೈಎಂಡ್ ಕಾರುಗಳನ್ನು ಖರೀದಿಸುತ್ತಾರೆ. ಆದರೆ ನ್ಯಾಯಯುತವಾಗಿ ಸರಕಾರಕ್ಕೆ ತೆರಿಗೆ ಕಟ್ಟಲು ಇಚ್ಚಿಸುವುದಿಲ್ಲ. ಅದಕ್ಕಾಗಿ ಹಲವು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಇತ್ತೀಚೆಗೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ದುಬಾರಿ ಕಾರುಗಳ ಮಾಲಕರು ತಮ್ಮ ಕಾರುಗಳನ್ನು ಟ್ಯಾಕ್ಸಿಯೆಂದು ಆರ್ ಟಿಒ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಸದ್ಯದ ಆರ್ ಟಿಒ ನಿಯಮದ ಪ್ರಕಾರ 20 ಲಕ್ಷ ರು.ಗಿಂತ ಕಡಿಮೆ ದರದ ಕಾರುಗಳಿಗೆ ಶೇ. 17ರಷ್ಟು ಅಜೀವ ತೆರಿಗೆ(ಶೇ. 11 ಸೆಸ್) ವಿಧಿಸಲಾಗಿದೆ. 20 ಲಕ್ಷ ರು.ಗಿಂತ ಹೆಚ್ಚು ದರದ ಕಾರುಗಳಿಗೆ ಶೇ. 18ರಷ್ಟು ಲೈಫ್ ಟೈಂ ತೆರಿಗೆ ವಿಧಿಸಲಾಗಿದೆ. ಎಲ್ಲಾದರೂ 50 ಲಕ್ಷ ರು.ಗಿಂತ ದುಬಾರಿ ಕಾರುಗಳಿಗೆ ಸುಮಾರು 10 ಲಕ್ಷ ರು.ವಿನಷ್ಟು ಲೈಫ್ ಟೈಂ ತೆರಿಗೆ ಪಾವತಿಸಬೇಕಿದೆ. ಎಲ್ಲಾದರೂ ಇವರು ಇದನ್ನು ಟ್ಯಾಕ್ಸಿಯಾಗಿ ರಿಜಿಸ್ಟರ್ ಮಾಡಿಕೊಂಡರೆ ವರ್ಷಕ್ಕೆ ಸುಮಾರು 2,500 ರು. ತೆರಿಗೆ ಪಾವತಿಸಿದರೆ ಸಾಕು.

ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಝ್ ಮತ್ತು ಪೊರ್ಷ್ ಕಾರುಗಳನ್ನು ಕೆಲವರು ಟ್ಯಾಕ್ಸಿಯಾಗಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಈ ಮೂಲಕ ಸರಕಾರಕ್ಕೆ ಹಲವು ಲಕ್ಷ ರು. ತೆರಿಗೆ ವಂಚಿಸುತ್ತಿದ್ದಾರೆ. ಬೆಂಗಳೂರು ಮಿರರ್ ಇಂತಹ ಇತ್ತೀಚಿನ ಒಂದು ಪ್ರಕರಣವನ್ನು ಪ್ರಕಟಿಸಿದ್ದಾಎಡ. ಮಂಗಳೂರಿನ ವ್ಯಕ್ತಿಯೊಬ್ಬರು ಖರೀದಿಸಿದ 65 ಲಕ್ಷ ರು.ವಿನ ಕಾರನ್ನು ಟ್ಯಾಕ್ಸಿಯೆಂದು ರಿಜಿಸ್ಟರ್ ಮಾಡಿಕೊಂಡಿದ್ದಾರೆ ಎಂದು ವರದಿ ಹೇಳಿದೆ.

Article Published On: Wednesday, June 29, 2011, 15:07 [IST]
English summary
Lifetime taxes of cars are a one time payment that is paid during the purchase of a new car. Luxury car buyers feel this lifetime tax is too high and are using loopholes in the system to avoid paying it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+