ಜಯಲಲಿತಾಗೆ ಬಾಯ್! ನರೇಂದ್ರ ಮೋದಿಗೆ ಹಾಯ್!!

Narendra Modi
ವದಂತಿಗಳು ನಿಜವಾಗಿವೆ. ಫ್ರಾನ್ಸ್ ವಾಹನ ತಯಾರಿಕಾ ಕಂಪನಿ ಪ್ಯೂಜೊ ಸಿಟ್ರೊನ್ ಘಟಕ ನಿರ್ಮಿಸುವ ಕುರಿತು ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರೊಂದಿಗೆ ನಿನ್ನೆ ಮಾತನಾಡಿದೆ.

ಆಸಕ್ತಿದಾಯಕ ವಿಷ್ಯ ಏನಪ್ಪ ಅಂದ್ರೆ ಈ ಕಂಪನಿ ಇದಕ್ಕೂ ಮುನ್ನ ತಮಿಳುನಾಡಿನಲ್ಲಿ ಘಟಕ ನಿರ್ಮಿಸುವುದಾಗಿ ಹೇಳಿತ್ತು. ಆಂಧ್ರದತ್ತಲೂ ಮುಖ ಮಾಡಿತ್ತು. ಆದರೆ ಹೂಡಿಕೆ ಸ್ನೇಹಿ ರಾಜ್ಯವೆಂದು ಹೆಸರು ಪಡೆಯುತ್ತಿರುವ ಗುಜರಾತ್ ಸದ್ಯ ಪ್ಯೂಜೊ ಸಿಟ್ರೊನ್ ಕಂಪನಿಯನ್ನು ಸೆಳೆದಿದೆ. ಕಂಪನಿ ಇನ್ನೂ ತನ್ನ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

ದೇಶದ ವಾಹನ ಮಾರುಕಟ್ಟೆಗೆ ಪ್ರವೇಶಿಸುವುದಾಗಿ ಪ್ಯೂಜೊ ಕಳೆದ ಫೆಬ್ರವರಿಯಲ್ಲಿ ಪ್ರಕಟಿಸಿತ್ತು. ಕೆಲವು ತಿಂಗಳ ಹಿಂದೆ ಗುಜರಾತಿಗೂ ಭೇಟಿ ನೀಡಿ ಘಟಕ ನಿರ್ಮಿಸುವ ಅವಕಾಶಗಳನ್ನು ಹುಡುಕಿತ್ತು.

ಮೊನ್ನೆ ಮತ್ತೊಂದು ಬೆಳವಣಿಗೆಯಲ್ಲಿ ಹೀರೋ ಹೋಂಡಾದ ಗಮನ ಕರ್ನಾಟಕದತ್ತ ಸರಿದಿದೆ. ತನ್ನ ನಾಲ್ಕನೇ ಉತ್ಪಾದನೆ ಘಟಕವನ್ನು ನಿರ್ಮಿಸಲು ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳನ್ನು ಶಾರ್ಟ್ ಲಿಸ್ಟ್ ಮಾಡಿರುವುದಾಗಿ ಹೇಳಿತ್ತು. ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಹೀರೋ ಹೋಂಡಾವನ್ನು ಸೆಳೆಯುವ ಸಾಮರ್ಥ್ಯವಿದೆಯೇ ಕಾದುನೋಡಬೇಕಿದೆ.

More from DriveSpark

Article Published On: Friday, July 1, 2011, 11:39 [IST]
English summary
French car manufacturer PSA Peugeot Citroen called on the Chief Minister, Mr Narendra Modi for its first manufacturing plant in India. Hero Honda said it has shortlisted Gujarat and Karnataka for its fourth manufacturing plant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+