ಐಷಾರಾಮಿ ಸೆಡಾನ್ ಕಾರ್ ಆಡಿ ಎ8ಎಲ್ ರಸ್ತೆಗೆ

Audi A8L
ಐಷಾರಾಮಿ ಕಾರ್ ಲೋಕದಲ್ಲಿ ಎಲ್ಲವೂ ಕೋಟಿ ರೂ.ಗಳದ್ದೇ ಕಾರುಬಾರು. ಆದರೆ ಆಡಿ ಫ್ಯಾಕ್ಟರಿಯಿಂದ ಬಂದ ಹೊಸ ಎ8 ಎಲ್ ದರ ಕೋಟಿಗಿಂತ ಕೊಂಚ ಕಡಿಮೆಯೇ. ಆದರೆ ಕೋಟಿ ರೂ. ಕಾರ್ ಗಳು ನಾಚುವಂತ ಫೀಚರ್ ಗಳು ಇದರಲ್ಲಿವೆ ಅಂದರೆ ತಪ್ಪಾಗದು.

ಜರ್ಮನಿಯ ಐಷಾರಾಮಿ ಕಾರ್ ತಯಾರಿಕಾ ಕಂಪನಿ ಹೊರತಂದ ನೂತನ ಲಕ್ಷುರಿ ಸೆಡಾನ್ ಕಾರ್ ಆಡಿ ಎ8ಎಲ್ ದರ ಸುಮಾರು 89 ಲಕ್ಷ ರೂಪಾಯಿ. ಕಂಪನಿಯ ಇತರ ಕಾರ್ ಗಳಿಗೆ ಹೋಲಿಸಿದರೆ ಇದರ ವೀಲ್ ಬೇಸ್ 13 ಸೆಂಟಿಮೀಟರ್ ದೊಡ್ಡಾದಾಗಿದೆ. ಆರಾಮದಾಯಕತೆ, ಅನನ್ಯ ಡ್ರೈವಿಂಗ್ ಗೆ ಪೂರಕವಾಗಿ ಹೊಸ ಶಕ್ತಿಶಾಲಿ 4.2 ಎಫ್ ಎಸ್ ಐ ಪೆಟ್ರೋಲ್ ಎಂಜಿನ್ ಹೊಂದಿದೆ.

"ಮುಂದಿನ ದಿನಗಳಲ್ಲಿ ನೂತನ ಮಾಡೆಲ್ ಗೆ ದೇಶದಲ್ಲಿ ಸಾಕಷ್ಟು ಬೇಡಿಕೆ ಏರಿಕೆ ಕಾಣುವ ನಿರೀಕ್ಷೆಯಿದೆ" ಎಂದು ಆಡಿ ಇಂಡಿಯಾದ ಮುಖ್ಯಸ್ಥರು ಹೇಳಿದ್ದಾರೆ. ಕಳೆದ ವರ್ಷ ಕೂಡ ಕಂಪನಿ ಸಾಕಷ್ಟು ಪ್ರಗತಿ ದಾಖಲಿಸಿದ್ದು, ನೂತನ ಸೆಡಾನ್ ಕಾರ್ ಮೂಲಕ ಪ್ರಶಕ್ತ ವರ್ಷವೂ ಮಾರಾಟ ಗಣನೀಯವಾಗಿ ಏರಿಕೆ ಕಾಣಲಿದೆ" ಎಂದಿದ್ದಾರೆ. ಇದಕ್ಕೂ ಮುನ್ನ ಕಂಪನಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಕ್ಯೂ7 ಹೊರತಂದಿತ್ತು.

ಕಂಪನಿಯ ಈ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ನೂತನ ಕಾರ್ 13 ಸೆಂಟಿಮೀಟರ್ ಉದ್ದದ ವೀಲ್ ಬೇಸ್ ಹೊಂದಿದೆ. ಇದರಿಂದಾಗಿ ಹಿಂದಿನ ಸೀಟ್ ನ ಪ್ರಯಾಣಿಕರು ಹೆಚ್ಚು ಆರಾಮವಾಗಿ ಕುಳಿತುಕೊಳ್ಳಬಹುದು. ಇಂಟಿರಿಯರ್ ಫ್ರೇಮ್ ಹೆಚ್ಚು ಆಕರ್ಷಕವಾಗಿದ್ದು ಕಾರ್ ನ ಲುಕ್ ಹೆಚ್ಚಿಸಿದೆ ಎಂದು ಅವರು ಹೇಳಿದ್ದಾರೆ.

ಖರೀದಿದಾರರಿಗೆ ಇಷ್ಟವಾಗುವಂತೆ ನೂತನ ಕಾರ್ ಅಡ್ವಾನ್ಸ್ ಮೆಂಟ್ ತಂತ್ರಜ್ಞಾನ ಹೊಂದಿದ್ದು, ಕಂಫರ್ಟ್ ಮತ್ತು ಆಧುನಿಕತೆಯ ಎಲ್ಲ ಲಕ್ಷಣಗಳನ್ನು ಹೊಂದಿದೆ. ಐಷಾರಾಮಿ ಕಾರ್ ಸವಾರಿಯ ಹೊಸ ಅನುಭವ ನೀಡುವಂತಾಗಲು ಎಂಜಿನ್ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದೆ. ಗ್ರಾಹಕರಿಗೆ ಇಷ್ಟವಾಗುವಂತಹ ಹಲವು ಫೀಚರ್ ನೂತನ ಕಾರ್ ನಲ್ಲಿರುವುದಾಗಿ ಅವರು ಹೇಳುತ್ತಾರೆ.

ಈ ಕಾರ್ ಗೆ ಜಾಗತಿಕ ಮಾರುಕಟ್ಟೆಯಿಂದ "ಕಾರ್ಪೊರೇಟ್ ಫ್ಲೀಟ್ ಅವಾರ್ಡ್", ಯುರೋ ಕಾರ್ ಬಾಡಿ ಅವಾರ್ಡ್, ಗೋಲ್ಡನ್ ಸ್ಟೀರಿಂಗ್ ವೀಲ್ ಪ್ರಶಸ್ತಿ, ಟೆಲಿಮ್ಯಾಟಿಕ್ಸ್ ಸೇರಿದಂತೆ ಹಲವು ಪ್ರಶಸ್ತಿಗಳು ದೊರಕಿವೆ. ಹೊಸ ಕಾರ್ ಮಾರುಕಟ್ಟೆಯಲ್ಲಿರುವ ಮರ್ಸಿಡಿಸ್, ಬಿಎಂಡಬ್ಲ್ಯುಗಳೊಂದಿಗೆ ಯಾವ ರೀತಿ ಪೈಪೋಟಿ ನಡೆಸಲಿದೆ ಎಂದು ಕಾದು ನೋಡಬೇಕಿದೆ.

ನೂತನ ಆಡಿ8ಎಲ್ ಬಾಡಿಯನ್ನು ಹಗುರ ಅಲ್ಯುಮಿನಿಯಂನಿಂದ ನಿರ್ಮಿಸಲಾಗಿದ್ದು, ಶಕ್ತಿಶಾಲಿ, ಅತ್ಯಧಿಕ ಕಾರ್ಯದಕ್ಷತೆಯ ಎಂಜಿನ್ ಅಳವಡಿಸಲಾಗಿದೆ. ಇಂಟಿರಿಯರ್ ವಿನ್ಯಾಸವಾಗಿದ್ದು, ನೂತನ ಜಮಾನದ ಫೀಚರ್ ಗಳು ಸಾಕಷ್ಟಿವೆ. ಸ್ಟೀಲ್ ಬಾಡಿಗಳಿಗೆ ಹೋಲಿಸಿದರೆ ಹೊಸ ಕಾರ್ ಶೇ. 40ರಷ್ಟು ಹಗುರವಾಗಿದೆ. ಎಲ್ಇಡಿ ಸೌಲಭ್ಯವಿರುವ ಡ್ಯಾಷ್ ಬೋರ್ಡ್ ಆಕರ್ಷಕವಾಗಿದೆ. ಆಡಿ8ಎಲ್ ಸುಮಾರು 372 ಹಾರ್ಸ್ ಪವರ್ ಹೊಂದಿದೆ. ಕೇವಲ 5.8 ಸೆಕೆಂಡ್ ಗಳಲ್ಲಿ ಕಾರಿನ ವೇಗ ಸೊನ್ನೆಯಿಂದ-100ಕ್ಕೆ ತಲುಪುತ್ತದೆ. ಎಲೆಕ್ಟ್ರಾನಿಕ್ ಸಾಧನವೊಂದರ ನೆರವಿನಿಂದ ಕಾರಿನ ಗರಿಷ್ಠ ವೇಗವನ್ನು 250ಕ್ಕೆ ಸೀಮಿತಗೊಳಿಸಲಾಗಿದೆ.

More from DriveSpark

Article Published On: Monday, February 7, 2011, 14:46 [IST]
English summary
English Summary: The German luxury car maker Audi has just launched its new luxury sedan A8 L posing innovative standards in the segment. With long wheels, and new powerful 4.2 FSI petrol engine the car is at the New Delhi showroom on display at the price tag of Rs89 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+