ಜನವರಿಯಲ್ಲಿ ಆಡಿ ಮಾರಾಟ ಏರಿಕೆ

ಆಡಿ ಮಾರಾಟ ಹೆಚ್ಚಳ
ಕಳೆದ ಜನವರಿ ತಿಂಗಳ ಮಾರಾಟದಲ್ಲಿ ಜರ್ಮನಿಯ ಕಾರ್ ತಯಾರಿಕಾ ಕಂಪನಿ ಆಡಿ ಮಾರಾಟ ಶೇ. 57ರಷ್ಟು ಏರಿಕೆ ಕಂಡಿದೆ. ಕಳೆದ ತಿಂಗಳು ಕಂಪನಿಯು 480 ಯೂನಿಟ್ ಕಾರ್ ಮಾರಾಟ ಮಾಡಿದ್ದು, ಕಳೆದ ವರ್ಷದ ಜನವರಿ ತಿಂಗಳ 306 ಯೂನಿಟ್ ಗೆ ಹೋಲಿಸಿದರೆ ಮಾರಾಟ ಗಣನೀಯವಾಗಿ ಏರಿಕೆ ಕಂಡಿದೆ. ಮುಂಬರುವ ದಿನಗಳಲ್ಲಿಯೂ ಮಾರಾಟ ಏರಿಕೆ ಮುಂದುವರೆಸುವ ನಿರೀಕ್ಷೆಯನ್ನು ಆಡಿ ಇಂಡಿಯಾದ ಮುಖ್ಯಸ್ಥರು ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಆಡಿ ಸುಮಾರು 3 ಸಾವಿರ ಯೂನಿಟ್ ಕಾರ್ ಮಾರಾಟ ಮಾಡಿದ್ದು ದೇಶೀಯ ಮಾರುಕಟ್ಟೆಯಲ್ಲಿ ವೇಗವಾಗಿ ಪ್ರಗತಿ ಕಾಣುತ್ತಿರುವ ಲಕ್ಷುರಿ ಕಾರ್ ಬ್ರಾಂಡಾಗಿ ಹೊರಹೊಮ್ಮಿತ್ತು. ಪ್ರಸಕ್ತ ವರ್ಷ ಸುಮಾರು 4 ಸಾವಿರ ಕಾರ್ ಮಾರಾಟವಾಗುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಹೊರತಂದ ಆಡಿಎ8ಎಲ್ ಕಂಪನಿಯ ಫ್ಲಾಗ್ ಷಿಪ್ ಬ್ರಾಂಡಾಗಿದ್ದು, ಭವಿಷ್ಯದಲ್ಲಿ ಇಂತಹ ಕಾರ್ ಗಳಿಗೆ ಬೇಡಿಕೆ ಇನ್ನಷ್ಟು ಏರಿಕೆ ಕಾಣುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಆಡಿ ಎ8ಎಲ್ ಲಕ್ಷುರಿ ಕಾರ್ 4.2 ಎಫ್ಎಸ್ಐ ಪೆಟ್ರೋಲ್ ಎಂಜಿನ್ ಹೊಂದಿದ್ದು ಆಕರ್ಷಕ ಕಾರಾಗಿದೆ.

More from DriveSpark

Article Published On: Monday, February 7, 2011, 16:50 [IST]
English summary
English Summary: There won’t be any other impressive performance for the German car maker Audi whose sale mark saw 57% rise in January. This came with the sale of 480 units from the last year’s 306 units.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+