ಯುರೋಪ್ ದೇಶಗಳಿಗೆ ಹೀರೋ ಇ-ಬೈಕ್ ರಫ್ತು

ಕಂಪನಿಯು ಥೈವಾನ್ಸೆ ಟೆಕ್ನಾಲಜಿಸ್ ಮೂಲಕ ಯುರೋಪ್ ದೇಶಗಳಿಗಾಗಿ ವಿಶೇಷವಾಗಿ ಎಲೆಕ್ಟ್ರಿಕ್ ವಾಹನಗಳನ್ನು ವಿನ್ಯಾಸ ಮಾಡಲಿದೆ ಎಂದು ಕಂಪನಿಯ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಹೇಳಿದ್ದಾರೆ. ನೂತನ ಎಲೆಕ್ಟ್ರಿಕ್ ಬೈಕ್ ಗಳನ್ನು ಭಾರತದಲ್ಲಿ ಉತ್ಪಾದಿಸಿ, ಯುರೋಪ್ ಗೆ ರಫ್ತು ಮಾಡಲಾಗುವುದೆಂದರು. ಆದರೆ ಆ ಉತ್ಪನ್ನಗಳನ್ನು ಭಾರತದಲ್ಲಿ ರಫ್ತು ಮಾಡಲಾಗುವುದಿಲ್ಲ ಎಂದಿದ್ದಾರೆ.
ಯುರೋಪ್ ಮಾರುಕಟ್ಟೆಯು ಅಲ್ಲಿನ ರಸ್ತೆಗೆ ಅನುಗುಣವಾಗಿ ಅತ್ಯಧೀಕ ಶಕ್ತಿಯ ಮತ್ತು ಗುಣಮಟ್ಟದ ವಾಹನ ಬಯಸುತ್ತದೆ. ಅಲ್ಲಿ ಸುಮಾರು ವರ್ಷಕ್ಕೆ 500 ಯೂನಿಟ್ ಗಳಿಗೆ ಬೇಡಿಕೆ ಇರುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಈಜಿಪ್ಟ್ ನಲ್ಲಿನ ಇತ್ತೀಚಿನ ರಾಜಕೀಯ ಸನ್ನಿವೇಶಗಳಿಂದಾಗಿ ಇಂಧನ ದರ ಏರಿಕೆ ಕಾಣುವ ನಿರೀಕ್ಷೆಯಿಲ್ಲವೆಂದು ಅವರು ಹೇಳಿದ್ದಾರೆ. ಭಾರತದಲ್ಲಿ ಈಗ ಹೀರೋ ಎಲೆಕ್ಟ್ರಿಕ್, ಅಜಂತಾ ಗ್ರೂಪ್ ಇತ್ಯಾದಿ ಕಂಪನಿಗಳಿಂದ ವರ್ಷಕ್ಕೆ 85 ಸಾವಿರದಷ್ಟು ಇ-ಬೈಕ್ ಗಳಿಗೆ ಬೇಡಿಕೆ ಇದೆ ಎಂದರು.


Click it and Unblock the Notifications








