ಮೆಕ್ ಡೊನಾಲ್ಡ್ ನಲ್ಲಿ ತಿನ್ನಿರಿ, ಮಾರುತಿ ಇಕೊ ಗೆಲ್ಲಿರಿ!

ಮಾರುತಿ ಸುಜುಕಿ ಮತ್ತು ಮೆಕ್ ಡೊನಾಲ್ಡ್ ಕಂಪನಿಯು "ಇಕೊ-ಮೀಲ್" ಎಂಬ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿದೆ. ಮೆಕ್ ಡೊನಾಲ್ಡ್ ಬರ್ಗರ್, ಪಿಜ್ಜಾ ಇತ್ಯಾದಿ ಆಹಾರದೊಂದಿಗೆ ಮಾರುತಿ ಇಕೊ ಕಾರು ಗೆಲ್ಲುವ ಅದೃಷ್ಟವೂ ದೊರಕಲಿದೆ.
ಕುಟುಂಬದ ಮಂದಿ ಒಟ್ಟಾಗಿ ತಿನ್ನಿ, ಒಟ್ಟಾಗಿ ಪ್ರಯಾಣಿಸಿ ಎಂಬುದು ನೂತನ ಕಾನ್ಸೆಪ್ಟ್ ನ ಥೀಮ್. ಈ ಸ್ಪರ್ಧೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಚಾಲನಾ ಪರವಾನಿಗೆ ಇರುವ ಭಾರತೀಯರು ಭಾಗವಹಿಸಬಹುದಂತೆ. ಅಂದಹಾಗೇ ಈ ಅವಕಾಶ ಜುಲೈ 30ರವರೆಗೆ ಮಾತ್ರ.
ಮೆಕ್ ಡೊನಾಲ್ಡ್ ತಿಂದು ಕಾರು ಸಿಕ್ಕರೆ ಅದೃಷ್ಟ. ಇಂತಹ ಜಂಕ್ ಫುಡ್ ತಿಂದು ಆರೋಗ್ಯ ಕೆಟ್ಟರೆ ಅದು ನಿಮ್ಮ ದುರಾದೃಷ್ಟ. ಗ್ರಾಹಕರನ್ನು ಸೆಳೆಯಲು ಇನ್ಯಾವ ಕಂಪನಿ ಇನ್ಯಾವ ಬಗೆಯ ತಂತ್ರ ಅನುಸರಿಸುತ್ತದೋ.... ವೈಟ್ ಆಂಡ್ ಸಿ


Click it and Unblock the Notifications








