ಶಿಕ್ಷಣ ಸಂಸ್ಥೆಗಳಿಗೆ ಪವರ್ ಟ್ರೈನ್ ಕೊಡುಗೆ ನೀಡಿದ ಮಾರುತಿ

ಇಷ್ಟು ಎಂಜಿನ್ ಮತ್ತು ಪವರ್ ಟ್ರೈನ್ ಗಳ ಮೌಲ್ಯ ಒಂದುವರೆ ಕೋಟಿ ರು. ಎಂದು ಅಂದಾಜಿಸಲಾಗಿದೆ. ದೇಶದ ಭವಿಷ್ಯದ ವಾಹನ ವಿನ್ಯಾಸಕರನ್ನು ಪ್ರೋತ್ಸಾಹಿಸಲು ಉಚಿತವಾಗಿ ಎಂಜಿನ್ ಮತ್ತು ಪವರ್ ಟ್ರೈನ್ ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ.
ಇತ್ತೀಚೆಗೆ ಕಂಪನಿಯ ಎಸ್ಎಇ ಇಂಡಿಯಾ ಸ್ಪರ್ಧೆಯಲ್ಲೂ ಹಲವು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ದೊರಕಿದೆ. ದೇಶದ ಸುಮಾರು 1,100 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸುಪ್ರ ಎಸ್ಎಇ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಎಸ್ಎಇ ಇಂಡಿಯಾ ಸ್ಪರ್ಧೆಯಲ್ಲಿ ಇಷ್ಟು ಜನರ ಈ 41 ತಂಡಗಳು ಫಾರ್ಮುಲಾ ಒನ್ ರೇಸಿಂಗ್ ಕಾರಿನ ಪ್ರೊಟೊ ಟೈಪ್ ನಿರ್ಮಿಸಬೇಕಿದೆ. ಗೆದ್ದ ತಂಡಕ್ಕೆ ಕಂಪನಿ ಬಹುಮಾನ ನೀಡುತ್ತದೆ. ದೇಶದ ಭವಿಷ್ಯದ ಎಂಜಿನಿಯರ್ ಗಳಿಗೆ ಪ್ರೋತ್ಸಾಹ ನೀಡಲು ಮಾರುತಿ ಸುಜುಕಿ ಇಂತಹ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ.


Click it and Unblock the Notifications