ನಾನು ಮತ್ತು ನನ್ನ ಕಾರು: ಐ ಲವ್ ಸ್ಕೋಡಾ ಫಾಬಿಯಾ

By * ಮುರಾರಿ ಕೃಷ್ಣಾ

Skoda Fabia
ಒಂದು ಸ್ಮಾರ್ಟ್ ಕಾರು ಖರೀದಿಸುವುದು ನನ್ನ ಬಹುದಿನದ ಕನಸ್ಸಾಗಿತ್ತು. ಆಗ ನನ್ನ ಕಣ್ಣಿಗೆ ಬಿದ್ದದ್ದು ಸ್ಕೋಡಾ ಫಾಬಿಯಾ. ಲವ್ ಅಟ್ ಫಸ್ಟ್ ಸೈಟ್ ಅಂತಾರಲ್ಲ. ಮೊದಲ ನೋಟಕ್ಕೆ ತುಂಬಾ ಇಷ್ಟವಾಯ್ತು. ಐ ಲವ್ ಫಾಬಿಯಾ. ನನ್ನ ಕಾರಿನ ಹೆಸರು ಸ್ಕೋಡಾ ಫಾಬಿಯಾ. ಅದಕ್ಕೆ ನಾನಿಟ್ಟ ಹೆಸರು ಜಿಪ್ಸಿ.

ಎಕ್ಸ್ ಟೀರಿಯರ್: ಸದ್ಯ ವಾಹನ ಮಾರುಕಟ್ಟೆಯಲ್ಲಿರುವ ಕಾರುಗಳಲ್ಲಿ ಸ್ಕೋಡಾ ಫಾಬಿಯಾ ಜನಪ್ರಿಯ ಕಾರು. ನೋಡಲು ಕೊಂಚ ಫೋಕ್ಸ್ ವ್ಯಾಗನ್ ಪೊಲೊ ತರಹನೇ ಇದೆ. ನನ್ನ ಜಿಪ್ಸಿ ಕಾರಿನ ಕಲರ್ ಸಿಲ್ವರ್. ಹೊರಗಿನಿಂದ ನೋಡುವಾಗ ಸೂಪರ್ ಆಗಿ ಕಾಣುತ್ತದೆ ಅಂತ ನನ್ನ ಸ್ನೇಹಿತರು ಮತ್ತು ಬಂಧುಗಳು ಹೇಳುತ್ತಾರೆ. ಯಾಕೋ ನನ್ನ ಮಗಳಿಗೆ ಈ ಬಣ್ಣ ತುಂಬಾ ಇಷ್ಟವಂತೆ.

ಇಂಟಿರಿಯರ್: ಎದುರಿನ ಸೀಟ್ ದೊಡ್ಡ ಸೆಡಾನ್ ಕಾರಿನ ಸೀಟಿನಂತ್ತಿದೆ. ಹಿಂಬಾಗದ ಸೀಟು ಕಂಫರ್ಟ್ ಆಗಿದೆ. ಆದರೆ ಅದರಲ್ಲಿ ದೊಡ್ಡವರಿಬ್ಬರು ಮತ್ತು ಒಂದು ಮಗು ಕುಳಿತುಕೊಳ್ಳಬಹುದಷ್ಟೇ. ಮೂರು ದಡಿಯರಿಗಂತೂ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ. ನಿಜ ಹೇಳಬೇಕೆಂದರೆ ನನ್ನ ಕಾರಿನಲ್ಲಿ ಹಿಂಬಾಗದ ಸೀಟಿನಲ್ಲಿ ಇಬ್ಬರಿಗಿಂತ ಹೆಚ್ಚು ಜನರನ್ನು ಕುಳಿತುಕೊಳ್ಳಲು ಬಿಡುವುದಿಲ್ಲ.

ಇಂಟಿರಿಯರ್ ವಿನ್ಯಾಸ ನನಗೆ ಇಷ್ಟವಾಗಿದೆ. ಫ್ಯಾಬ್ರಿಕ್ ಸೀಟ್, ಆಡಿಯೋ ಫೆಸಿಲಿಟಿ ಎಲ್ಲವೂ ಉತ್ತಮ. ಪ್ಲಾಸ್ಟಿಕ್ ಸ್ಟೇರಿಂಗ್, 12 ಸ್ಪೀಡಿನ ಕಿಟಕಿಯ ವೈಪರ್, ಏರ್ ಕಂಡಿಷನ್ ಎಲ್ಲಾ ಇದೆ. ಡ್ರೈವರ್ ಸೀಟು ಅಜೆಸ್ಟ್ ಮಾಡಿಕೊಳ್ಳಬಹುದು. ಟೆಲಿಸ್ಕೋಪಿಕ್ ಸ್ಟೇರಿಂಗ್ ಇರೋದರಿಂದ ಸರಿಯಾಗಿ ಡ್ರೈವಿಂಗ್ ಮಾಡಬಹುದು. ಎರಡು ಸ್ಟಾಂಡರ್ಡ್ ಏರ್ ಬ್ಯಾಗ್ ಇರುವುದರಿಂದ ಸೇಫ್ಟಿಗೂ ಒಳ್ಳೆಯದು. ಕಾರಿನ ಡಿಕ್ಕಿ ದೊಡ್ಡದಾಗಿದೆ. ಇದು ನನಗೆ ಅತ್ಯಂತ ಮುಖ್ಯವಾಗಿತ್ತು. ಅದಕ್ಕಾಗಿ ಪುಂಟೊ, ಫಿಗೊ, ಸ್ವಿಫ್ಟ್, ರಿಟ್ಜ್, ಪೊಲೊ ಕಾರುಗಳನ್ನು ಚೆಕ್ ಮಾಡಿದ್ದೆ. ಕೊನೆಗೆ ಫಾಬಿಯಾ ಡಿಕ್ಕಿ ನನಗೆ ಇಷ್ಟವಾಯ್ತು.

ಎಂಜಿನ್ ಮತ್ತು ಮೈಲೇಜ್: ಪೊಲೊದಲ್ಲಿರುವ ಎಂಜಿನನ್ನೇ ಅಳವಡಿಸಲಾಗಿದೆ. ಎಂಜಿನ್ ಶಬ್ದ ಮಾಡೋದು ಕೊಂಚ ಜಾಸ್ತಿ ಎಂದು ಹೇಳಬಹುದು. ಆದರೆ ಕಾರಿನ ವೇಗ ಹೆಚ್ಚಿಸಿದಾಗ ಸದ್ದು ಕಡಿಮೆಯಾಗುತ್ತದೆ. ಪಿಕ್ ಅಪ್ ಕೂಡ ಚೆನ್ನಾಗಿದೆ. ಮೈಲೇಜ್ ವಿಷ್ಯ ನನಗೆ ಹೆಚ್ಚು ಇಷ್ಟವಾಯಿತು. ಬೆಂಗಳೂರಿನಲ್ಲಿ ಈ ಕಾರು ಪ್ರತಿಗಂಟೆಗೆ 15-16 ಕಿ.ಮೀ. ಮೈಲೇಜ್ ನೀಡುತ್ತದೆ. ಹೆದ್ದಾರಿ ಪ್ರಯಾಣದಲ್ಲಿ ಪ್ರತಿಗಂಟೆಗೆ 19-21 ಕಿ.ಮೀ. ಮೈಲೇಜ್ ನೀಡುತ್ತದೆ.

ನನಗೆ ಈ ಕಾರಿನ ರೈಡಿಂಗ್ ಅನುಭವ ಇಷ್ಟವಾಯ್ತು. ಕೆಲವೊಮ್ಮೆ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಉಂಟುಮಾಡುತ್ತದೆ. ಇದರಲ್ಲಿ ನೈಸ್ ರಸ್ತೆಯಲ್ಲಿ ರೈಡಿಂಗ್ ಮಾಡುವುದು ಅನನ್ಯ ಅನುಭವ ನೀಡುತ್ತದೆ. ಪ್ರತಿಗಂಟೆಗೆ 100 ಕಿ.ಮೀ.ಯಿಂದ 120 ಕಿಲೋಮೀಟರ್ ವೇಗದಲ್ಲಿ ಸಾಗಿದರೂ ಕಾರು ಒಳ್ಳೆ ಸ್ಟೆಬಿಲಿಟಿ ನೀಡುತ್ತೆ.

ಪಾರ್ಕಿಂಗ್ ಗೆ ಮುನ್ನ: ನಿಜಕ್ಕೂ ಫಾಬಿಯಾ ಎಕ್ಸಲೆಂಟ್ ಹ್ಯಾಚ್ ಬ್ಯಾಕ್ ಕಾರು. ಸ್ವಿಫ್ಟ್ ಗಿಂತ ದುಬಾರಿ. ಆದರೆ ಕ್ವಾಲಿಟಿ, ದೊಡ್ಡ ಡಿಕ್ಕಿ, ಸ್ಥಳಾವಕಾಶ, ಏರ್ ಬ್ಯಾಗ್ ಇವೆಲ್ಲ ಹೆಚ್ಚು ಇಷ್ಟವಾಗುತ್ತೆ. ಸ್ವಿಫ್ಟ್ ಗಿಂತ ದುಬಾರಿಯಾದರೂ ಇದರಲ್ಲಿರುವ ಇಂತಹ ಫೀಚರ್ ಗಳು ಹೆಚ್ಚು ಇಷ್ಟವಾಗುತ್ತೆ. ಸ್ವಿಫ್ಟ್ ನಲ್ಲಾದರೆ 5 ಸಾವಿರ ಕಿ.ಮಿ.ಗೊಮ್ಮೆ ಸರ್ವಿಸ್ ಮಾಡಬೇಕು. ಇದನ್ನು 15 ಸಾವಿರ ಕಿ.ಮಿ. ಡ್ರೈವಿಂಗ್ ಮಾಡಿದ ನಂತರ ಸರ್ವಿಸ್ ಮಾಡಿದರೆ ಸಾಕು. ಕೊನೆಯದಾಗಿ ಹೇಳಬೇಕಾದರೆ ಈ ಕಾರನ್ನು ನಾನು ತುಂಬಾ ಇಷ್ಟಪಟ್ಟೆ. ಐ ಲವ್ ಫಾಬಿಯಾ. ಐ ಲವ್ ಸೋ ಮಚ್ ಮೈ ಜಿಪ್ಸಿ...

ಹೆಸರು: ಸ್ಕೋಡಾ ಫಾಬಿಯಾ(1.2 ಲೀಟರ್ ಡಿಡಿಐ)
ಇಂಧನ ದಕ್ಷತೆ: ಪ್ರತಿಲೀಟರ್ ಗೆ 17 ಕಿ.ಮೀ.
ದರ: 4,20,216 ರೂಪಾಯಿ

(ನೀವು ಕೂಡ ನಿಮ್ಮ ಹೊಸ/ಹಳೆಯ ಕಾರು, ಬೈಕು, ಸ್ಕೂಟರ್, ಜೀಪಿನ ಕುರಿತಾದ ಬರಹಗಳನ್ನು ಕಳುಹಿಸಿಕೊಡಬಹುದು. ಇನ್ನೇಕೆ ತಡ [email protected] ಗೆ ಇಮೇಲ್ ಮಾಡಿ.

More from DriveSpark

Article Published On: Tuesday, July 5, 2011, 15:25 [IST]
English summary
Skoda Fabia User Review: Murari Krishna from Bangalore writing about his new car Skoda Fabia. He writes Skoda Fabia Price, Mileage, Performence, Features, Space, Comfort, good and bad etc. Just read before you buy Skoda Fabia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+