ಮಾರುತಿ ಸುಜುಕಿ ಸ್ವಿಫ್ಟ್ ಉತ್ಪಾದನೆ ಸ್ಥಗಿತ, ಮುಂದೇನು?

ಆಗಸ್ಟ್ ತಿಂಗಳಿನಿಂದ ಹಳೆ ಸ್ವಿಫ್ಟ್ ಯಾವ ಷೋ ರೂಮ್ ನಲ್ಲೂ ಸಿಗುವುದಿಲ್ಲ. ಅದರ ಬದಲಿಗೆ ಹೊಸ ವಿನ್ಯಾಸದ ಸ್ವಿಫ್ಟ್ ಮಾದರಿ ರಸ್ತೆಗಿಳಿಯಲಿದೆ. YP8 ಎಂದು ಕೋಡ್ ಹೆಸರುಳ್ಳ ಹೊಸ ಮಾದರಿಯ ಟ್ರಯಲ್ ರನ್ ಈಗಾಗಲೇ ಮನೆಸರ್ ಘಟಕದಲ್ಲಿ ಆರಂಭವಾಗಿದೆ. ಸದ್ಯ ಸ್ವಿಫ್ಟ್ ಬೆಲೆ 4.09 ಲಕ್ಷ ದಿಂದ 5.56 ಲಕ್ಷ ರು ಬೆಲೆ ಇದ್ದು, ಹೊಸ ಸ್ವಿಫ್ಟ್ ಬೆಲೆ ಇದಕ್ಕಿಂತ ಹೆಚ್ಚಾಗಲಿದೆ.
ಪೆಟ್ರೋಲ್ ಹಾಗೂ ಡಿಸೇಲ್ ಮಾದರಿಯಲ್ಲಿ ಸ್ವಿಫ್ಟ್ ಲಭ್ಯವಿರುವ ಸ್ವಿಫ್ಟ್, ಫೋರ್ಡ್ ಫಿಗೊ, ವೋಕ್ಸ್ ವ್ಯಾಗನ್ ಪೊಲೊ, ಟೊಯೊಟಾ ಇಟೀಯೋಸ್, ಲಿವಾ ಹಾಗೂ ಶೆವರ್ಲೆ ಬೀಟ್ ಜೊತೆ ನೇರ ಸ್ಪರ್ಧೆಗಿಳಿಯಲಿದೆ. ಹೊಸ ಮಾದರಿ ಸ್ವಿಫ್ಟ್ ನಲ್ಲಿ ಉತ್ತಮ ಇಂಜಿನ್ ಕಾರ್ಯಕ್ಷಮತೆ, ಇಂಧನ ಉಳಿತಾಯಕ್ಕೆ ಆದ್ಯತೆ ನೀಡಲಾಗಿದೆಯಂತೆ. ಡೀಲರ್ ಗಳು ಈಗಾಗಲೇ ಹೊಸ ಸ್ವಿಫ್ಟ್ ಅನ್ನು ಮುಕ್ತವಾಗಿ ಸ್ವಾಗತಿಸಿದ್ದಾರೆ. ಆಗಸ್ಟ್ ನಲ್ಲಿ ಸ್ವಿಫ್ಟ್ ನ ಬಂಡವಾಳ ತಿಳಿಯಲಿದೆ.


Click it and Unblock the Notifications