ವಾಹನೋದ್ಯಮ ಶೇ. 11-13 ಪ್ರಗತಿ: ಸ್ಯಾಮ್ ಮುನ್ನೋಟ

ಈ ಆರ್ಥಿಕ ವರ್ಷದಲ್ಲಿ ದೇಶದ ವಾಹನ ಮಾರುಕಟ್ಟೆ ಸುಮಾರು ಶೇ. 11ರಿಂದ ಶೇ. 13ರಷ್ಟು ಪ್ರಗತಿ ಕಾಣುವ ನಿರೀಕ್ಷೆಯನ್ನು ದೇಶದ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ(ಸ್ಯಾಮ್) ವ್ಯಕ್ತಪಡಿಸಿದೆ. ಆದರೆ ಈ ಮುನ್ನೋಟ ಕಳೆದ ವರ್ಷದ ಶೇ. 30ರಷ್ಟು ವಾಹನ ಮಾರಾಟ ಹೆಚ್ಚಳಕ್ಕಿಂತ ಗಣನೀಯವಾಗಿ ಇಳಿಕೆಯಾಗಿದೆ.

ಈ ವರ್ಷ ದೇಶದ ಒಟ್ಟಾರೆ ವಾಹನ ಮಾರುಕಟ್ಟೆ ಶೇ. 11ರಿಂದ 12ರಷ್ಟು ಪ್ರಗತಿ ಕಾಣಲಿದೆ. ಇದರಲ್ಲಿ ಪ್ರಯಾಣಿಕ ಕಾರು ಮಾರಾಟ ಶೇ. 10ರಿಂದ 12ರಷ್ಟಿರಲಿದೆ ಎಂದು ಸ್ಯಾಮ್ ಅಧ್ಯಕ್ಷ ಪವನ್ ಗೋಯೆಂಕಾ ಹೇಳಿದ್ದಾರೆ. ಆದರೆ ಇದಕ್ಕೂ ಮುನ್ನ ಪ್ರಯಾಣಿಕ ಕಾರು ಮಾರಾಟ ಸುಮಾರು ಶೇ. 18ರಷ್ಟು ಪ್ರಗತಿ ಕಾಣುವುದಾಗಿ ಸ್ಯಾಮ್ ಮುನ್ನೋಟ ನೀಡಿತ್ತು.

ಇಂಧನ ದರ ಮತ್ತು ಬ್ಯಾಂಕ್ ಸಾಲಗಳು ದುಬಾರಿಯಾಗಿರುವುದು ಕಾರು ಮಾರಾಟ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಕಳೆದ ವರ್ಷದ ಜೂನ್ ತಿಂಗಳ ಕಾರು ಮಾರಾಟಕ್ಕೆ ಹೋಲಿಸಿದರೆ ಪ್ರಸಕ್ತ ಜೂನಿನಲ್ಲಿ ಕಾರು ಮಾರಾಟ ಶೇ 1.6ರಷ್ಟು ಏರಿಕೆ ಕಂಡಿದೆ. ಕಚ್ಚಾ ವಸ್ತುಗಳ ದರ ಏರಿಕೆ ವಾಹನಗಳನ್ನು ದುಬಾರಿಯಾಗಿಸಿದ್ದು ಮಾರಾಟ ಇಳಿಕೆಗೆ ಕಾರಣವಾಗಿದೆ.

More from DriveSpark

Article Published On: Monday, July 11, 2011, 16:55 [IST]
English summary
The Society of Indian Automobile Manufacturers (SIAM), the umbrella body of all Indian auto makers has predicted that the Indian auto sector will grow by 11 to 13 per cent during this financial year. This prediction is quite contrary to the previous year's sales which had registered a 30 per cent growth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+