ದೇಶದ ರಸ್ತೆಗೆ ಸ್ಕೋಡಾದಿಂದ 5 ಹೊಸ ಕಾರು ಬರುತ್ತಂತೆ!

ಈ ಐದು ಕಾರುಗಳಲ್ಲಿ ಮೊದಲ ಕಾರು ಸೂಪರ್ಬ್ ಐಷಾರಾಮಿ ಸೆಡಾನ್ ಕಾರಾಗಿರಲಿದೆ. ಸ್ಕೋಡಾ ಸೂಪರ್ಬ್ ಮಾಡೆಲ್ ಇನ್ನಷ್ಟು ಆಕರ್ಷಕ, ಆಧುನಿಕ ಫೀಚರ್ ಗಳೊಂದಿಗೆ ಬರಲಿದೆ. ಇದರೊಂದಿಗೆ ಭಾರತೀಯರಿಗೆ ಇಷ್ಟವಾಗುವಂತಹ ಮೈಲೇಜ್ ಮತ್ತು ಶಕ್ತಿಶಾಲಿ ಎಂಜಿನ್ ಕೂಡ ಇರಲಿದೆಯಂತೆ!
ದೇಶದ ರಸ್ತೆಗಿಳಿಯಲಿರುವ ಎರಡನೇ ಕಾರು. ಸ್ಕೋಡಾ ರಾಪಿಡ್. ಇದು ಮಧ್ಯಮ ಗಾತ್ರದ ಎಕ್ಸಿಕ್ಯೂಟಿವ್ ಸೆಡಾನ್ ಕಾರು. ಈಗ ಉತ್ಪಾದನೆ ಸ್ಥಗಿತಗೊಳಿಸಿರುವ ಸ್ಕೋಡಾ ಒಕ್ಟೊವಿಯಾದ ಹೊಸ ರೂಪವಾಗಿ ರಸ್ತೆಗಿಳಿಯಲಿದೆ. ಈ ಮಾಡೆಲ್ ಅಭಿವೃದ್ಧಿ ಹಂತದಲ್ಲಿದ್ದು ಮುಂದಿನ ವರ್ಷ ರಸ್ತೆಗಿಳಿಯುವ ನಿರೀಕ್ಷೆಯಿದೆ.
ಇದರೊಂದಿಗೆ ಕಂಪನಿಯು ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಕಾರೊಂದನ್ನು ಹೊರತರಲಿದೆ. ಇದರ ದರ ಸ್ಕೋಡಾ ಫಾಬಿಯಾಕ್ಕಿಂತ ಕಡಿಮೆ ಇರಲಿದೆ. ನೂತನ ಹ್ಯಾಚ್ ಬ್ಯಾಕ್ ದರ 3-5 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯನ್ನು ಸ್ಕೋಡಾ ಇಂಡಿಯಾದ ಪ್ರಮುಖ ಅಧಿಕಾರಿಯೊಬ್ಬರು ವ್ಯಕ್ತಪಡಿಸಿದ್ದಾರೆ.
ಕೆಲವು ತಿಂಗಳ ಹಿಂದೆ ರಸ್ತೆಗಿಳಿದ ಸ್ಕೋಡಾ ಯೆತಿ ಕೂಡ ಹೆಚ್ಚು ಬೇಡಿಕೆ ಪಡೆಯುವಲ್ಲಿ ವಿಫಲವಾಗಿದೆ. ಇದಕ್ಕಾಗಿ ಕಂಪನಿಯು ಯೆಟಿಯ ಹೊಸ ಎರಡು ಆವೃತ್ತಿಗಳನ್ನು ಹೊರತರಲು ನಿರ್ಧರಿಸಿದೆ. ಈಗ ರಸ್ತೆಯಲ್ಲಿರುವ ಯೆಟಿ ದರ 15.35 ಲಕ್ಷ ರು. ಮತ್ತು 16.73 ಲಕ್ಷ ರು. ಇದೆ. ಇನ್ನು ರಸ್ತೆಗಿಳಿಯಲಿರುವ ನೂತನ ಯೆಟಿ ಕಾರುಗಳ ದರ ಹಳೆಯ ಆವೃತ್ತಿಗಿಂತ ಒಂದೆರಡು ಲಕ್ಷ ರು. ಕಡಿಮೆ ಇರುವ ನಿರೀಕ್ಷೆಯಿದೆ.


Click it and Unblock the Notifications