ಒಂದು ಲಕ್ಷ ತಲುಪಿದ ಫೋಕ್ಸ್ ವ್ಯಾಗನ್ ಕಾರು ಉತ್ಪಾದನೆ

Volkswagen India
ಫೋಕ್ಸ್ ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಚಕನ್(ಪುಣೆ) ಘಟಕವು ಒಂದು ಲಕ್ಷ ಕಾರು ಉತ್ಪಾದನೆಯ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂಭ್ರಮದ ಕಾರ್ಯಕ್ರಮದಲ್ಲಿ ಪಾರ್ಲಿಮೆಂಟ್ ಸದಸ್ಯೆ ಸುಪ್ರೀಯ ಸುಲೆ, ಫೋಕ್ಸ್ ವ್ಯಾಗನ್ ಇಂಡಿಯಾ ಮುಖ್ಯಸ್ಥ ಜಾನ್ ಚಾಕೊ, ಕಂಪನಿಯ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಇನ್ನಿತರರು ಪಾಲ್ಗೊಂಡಿದ್ದರು.

ಜರ್ಮನಿಯ ಕಾರು ತಯಾರಿಕಾ ಕಂಪನಿ ಫೋಕ್ಸ್ ವ್ಯಾಗನ್ ಮಹಾರಾಷ್ಟ್ರದ ಚಕನ್ ಘಟಕದಲ್ಲಿ ಯಶಸ್ವಿಯಾಗಿ ಕಾರು ಉತ್ಪಾದಿಸುತ್ತಿದೆ. ಇಲ್ಲಿ ಕಂಪನಿಯ ಎಲ್ಲಾ ಬಗೆಯ ಕಾರುಗಳನ್ನು ಉತ್ಪಾದಿಸಲಾಗುತ್ತದೆ. ಕಳೆದ ಎರಡು ವರ್ಷದಿಂದ ಕಂಪನಿಯ ಕಾರು ಉತ್ಪಾದನೆ ಒಂದು ಲಕ್ಷ ಸಂಖ್ಯೆಗೆ ತಲುಪಿದೆ.

ಫೋಕ್ಸ್ ವ್ಯಾಗನ್ ಇಂಡಿಯಾದ ಒಂದು ಲಕ್ಷದ ಕಾರು ವೆಂಟೊ. ಇದು ಕಂಪನಿಯ ಅತ್ಯಧಿಕ ಮಾರಾಟದ ಸೆಡಾನ್ ಕಾರು ಕೂಡ ಹೌದು. ಮೇ 2009ರಲ್ಲಿ ಕಂಪನಿಯು ಸ್ಕೋಡಾ ಫಾಬಿಯಾದೊಂದಿಗೆ ಉತ್ಪಾದನೆ ಆರಂಭಿಸಿತ್ತು. ಈಗ ಫಾಬಿಯಾದೊಂದಿಗೆ ಫೋಕ್ಸ್ ವ್ಯಾಗನ್ ಪೊಲೊ ಕಾರು ಕೂಡ ಉತ್ಪಾದನೆಗೆ ಸಾಥ್ ನೀಡುತ್ತಿದೆ.

ಚಕನ್ ಘಟಕವು ವಾರ್ಷಿಕವಾಗಿ 1.3 ಲಕ್ಷ ಕಾರು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ ಕಂಪನಿಯು ಸುಮಾರು 3,800 ಕೋಟಿ ರು. ಹೂಡಿಕೆ ಮಾಡಿದೆ. ಇದು ಜರ್ಮನಿಯ ವಾಹನ ಕಂಪನಿಯೊಂದು ಭಾರತದಲ್ಲಿ ಮಾಡಿದ ಅತ್ಯಧಿಕ ಪ್ರಮಾಣದ ಹೂಡಿಕೆಯೂ ಹೌದು.

More from DriveSpark

Article Published On: Monday, July 11, 2011, 12:40 [IST]
English summary
Volkswagen India Private Limited celebrated the roll-out of the 100,000th car at its manufacturing plant in Chakan, Pune.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+