ಜೂನಿನಲ್ಲಿ ಬೈಕಿಗೆ ಶುಕ್ರದೆಸೆ.. ಕಾರಿಗೆ ಶನಿದೆಸೆ

ಸೊಸೈಟಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಒಟ್ಟು 8,25,273 ಮೋಟಾರ್ ಸೈಕಲ್ ಗಳು ಮಾರಾಟವಾಗಿದ್ದು 2010 ರ ಜೂನ್ ತಿಂಗಳಿನಲ್ಲಿ 7,17,859 ಮೋಟಾರ್ ಸೈಕಲ್ ಗಳು ಮಾರಾಟವಾಗಿದ್ದವು. ಒಟ್ಟು ದ್ವಿಚಕ್ರ ವಾಹನ ಮಾರಾಟದಲ್ಲಿ ಶೇ 18.50 ಯಷ್ಟು ಏರಿಕೆ ದಾಖಲಾಗಿದ್ದು 10,71,452 ವಾಹನಗಳು ಮಾರಾಟವಾಗಿದ್ದರೆ ಜೂನ್ ೨೦೧೦ ರಲ್ಲಿ ೯,೩೪,೯೭೫ ವಾಹನಗಳು ಮಾರಾಟವಾಗಿದ್ದವು.
ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ 17.83 ರಷ್ಟು ಏರಿಕೆ ದಾಖಲಾಗಿದೆ. ಒಟ್ಟು ಎಲ್ಲಾ ಮಾದರಿಯ ವಾಹನಗಳ ಮಾರಾಟದಲ್ಲಿ ಶೇ 12,84 ರಷ್ಟು ಹೆಚ್ಚಳ ದಾಖಲಾಗಿದ್ದು 12,07,934 ವಾಹನಗಳಿಂದ 13,62,984 ವಾಹನಗಳಿಗೇರಿದೆ ಎಂದು ವಾಹನ ಒಕ್ಕೂಟ ತಿಳಿಸಿದೆ.


Click it and Unblock the Notifications








