ಶೇ. 5.99 ಬಡ್ಡಿಗೆ ಹ್ಯುಂಡೈ ಕಾರು ಖರೀದಿಸಬಹುದು!

ಸ್ಯಾಂಟ್ರೊ ಕ್ಸಿಂಗ್ ಮತ್ತು ಐ10 ಮಾದರಿಯ ಕಾರುಗಳನ್ನು ಕೇವಲ ಶೇ. 5.99 ಬಡ್ಡಿದರದಲ್ಲಿ ನೀಡುವುದಾಗಿ ಹ್ಯುಂಡೈ ಹೇಳಿದೆ. ಇವೆರಡು ಕಾರುಗಳು ಕಂಪನಿಯ ಅತ್ಯಧಿಕ ಮಾರಾಟದ ಕಾರುಗಳಾಗಿವೆ. ಕಂಪನಿಯ ಈ ಆಫರ್ ನಿಂದ ಕಡಿಮೆ ಬಡ್ಡಿದರದಲ್ಲಿ ಗ್ರಾಹಕರು ಕಾರುಗಳನ್ನು ಖರೀದಿಸಬಹುದು.
ಇದರೊಂದಿಗೆ ಕಂಪನಿ ಈ ಹಿಂದೆಯೇ ಹಲವು ಆಫರ್ ಗಳನ್ನು ನೀಡಿದೆ. ಒಂದು ವರ್ಷ ವ್ಯಾರೆಂಟಿ ಹೆಚ್ಚಳ, ಒಂದು ವರ್ಷ ಉಚಿತ ವಿಮೆ, ಒಂದು ವರ್ಷದಲ್ಲಿ ಪೆಟ್ರೊಲ್ ದರ ಹೆಚ್ಚಳಕ್ಕೆ ರಕ್ಷಣೆ ಸೇರಿದಂತೆ ಹಲವು ಸ್ಕೀಮ್ ಗಳನ್ನು ಗ್ರಾಹಕರು ಪಡೆಯಬಹುದೆಂದು ಹ್ಯುಂಡೈ ಹೇಳಿದೆ. ನೂತನ ಬಡ್ಡಿದರ ಇಳಿಕೆ ನೂತನ ವೆರ್ನಾ ಕಾರಿಗೆ ಅನ್ವಯವಾಗುವುದಿಲ್ಲವಂತೆ!


Click it and Unblock the Notifications








