ಹೋಂಡಾ, ಮಾರುತಿ ಆಫರ್ ಗಳ ಸುರಿಮಳೆ

ಹೋಂಡಾ ಜಾಝ್ ಖರೀದಿಸುವರಿಗೆ ತಾತ್ಕಾಲಿಕ ಅವಧಿಯವರೆಗೆ ಸುಮಾರು 1.7 ಲಕ್ಷ ರು. ಮನ್ನಾ ಮಾಡಲು ಹೋಂಡಾ ಯೋಜಿಸುತ್ತಿದೆ. ಆಲ್ಟೊ, ವ್ಯಾಗನಾರ್ ಮತ್ತು ಎಸ್ಟಿಲೋ ಕಾರು ಖರೀದಿದಾರರಿಗೆ ಸುಮಾರು 50 ಸಾವಿರ ರು.ನಷ್ಟು ವಿನಾಯಿತಿ ನೀಡುವುದಾಗಿ ಮಾರುತಿ ಸುಜುಕಿ ಹೇಳಿದೆ.
ಇದೀಗ ಹೋಂಡಾ, ಮಾರುತಿ ಸುಜುಕಿ, ಹ್ಯುಂಡೈ ಸೇರಿದಂತೆ ಹೆಚ್ಚಿನ ಕಂಪನಿಗಳು ಡಿಸ್ಕೌಂಟ್ ಮಂತ್ರ ಹೇಳುತ್ತಿವೆ. ಕಂಪನಿಗಳು ವಾಹನ ಸಾಲಗಳಿಗೆ ಕಡಿಮೆ ಬಡ್ಡಿದರ ವಿಧಿಸುವ ಅಂತಾರಾಷ್ಟ್ರೀಯ ಟ್ರೆಂಡ್ ಅನುಸರಿಸುತ್ತಿವೆ.
ಹಣದುಬ್ಬರ ನಿಯಂತ್ರಣಕ್ಕಾಗಿ ಕೇಂದ್ರ ಬ್ಯಾಂಕ್ ಶೇಕಡಾ 3ರಷ್ಟು ಬಡ್ಡಿದರ ಹೆಚ್ಚಿಸಿವೆ. ಇದೀಗ ಫೋಕ್ಸ್ ವ್ಯಾಗನ್ ಶೇ. 6.99 ಬಡ್ಡಿದರದಲ್ಲಿ ವೆಂಟೊ ಪೆಟ್ರೊಲ್ ಆವೃತ್ತಿಯನ್ನು ನೀಡುತ್ತಿದೆ. ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಸೆಡಾನ್ ಕಾರುಗಳಿಗೆ ಮತ್ತು ಆಡಿ ಎ4 ಸೆಡಾನ್ ಕಾರುಗಳಿಗೆ ಝೀರೋ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಹೇಳಿವೆ.
ಹ್ಯುಂಡೈ ಐ20, ಮಾರುತಿ ಸ್ವಿಫ್ಟ್ ಮತ್ತು ಫೋಕ್ಸ್ ವ್ಯಾಗನ್ ಪೊಲೊ ಕಾರುಗಳೊಂದಿಗೆ ಪೈಪೋಟಿ ನಡೆಸಲು ಹೋಂಡಾ ಜಾಝ್ ಗೆ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಜಾಝ್ ದರ 7 ಲಕ್ಷ ರು.ಕ್ಕೂ ಹೆಚ್ಚಿರುವುದರಿಂದ ಗ್ರಾಹಕರು ಜಾಝ್ ನಿಂದ ದೂರ ಜಾರುತ್ತಿದ್ದಾರೆ.


Click it and Unblock the Notifications








