ಉಗ್ರರು ಬಾಂಬ್ ಸ್ಫೋಟಕ್ಕೆ ವಾಹನಗಳನ್ನೇಕೆ ಬಳಸುತ್ತಾರೆ?

ಯಾರಿಗೊತ್ತು ನಮ್ಮ ಪಕ್ಕದಲ್ಲಿ ಬಂದು ನಿಂತ ವಾಹನ "ಕಾರು ಬಾಂಬ್" ಆಗಿರಬಹುದು. ನಮ್ಮ ಪಕ್ಕದಲ್ಲಿ ನಿಲ್ಲಿಸಿದ ಸ್ಕೂಟರ್ ಸ್ಪೋಟಿಸಬಹುದು. ನಾವು ಚಲಿಸುತ್ತಿರುವ ಬಸ್ ನುಚ್ಚುನೂರಾಗಬಹುದು. ಯಾರಿಗೊತ್ತು? ಯಾವ ವಾಹನದಲ್ಲಿ ಯಾವ ಬಾಂಬ್ ಇದೆ ಎಂದು!
ಭಯೋತ್ಪಾದಕರು ತಮ್ಮ ಕುಕೃತ್ಯಗಳಿಗೆ ವಾಹನಗಳನ್ನು ಆಟಿಕೆಗಳಾಗಿ ಬಳಸುತ್ತಿದ್ದಾರೆ. ಸಾರಿಗೆ ವ್ಯವಸ್ಥೆಯ ಸಾಧನವಾಗಿರುವ ವಾಹನಗಳೇ ಮುಗ್ಧ ಜನರ ಹತ್ಯೆಗೇಕೆ ದಾಳಗಳಾಗುತ್ತಿವೆ? ಇದನ್ನು ತಡೆಗಟ್ಟುವುದು ಹೇಗೆ? ತುಸು ಯೋಚಿಸಬೇಕು.
ಉಗ್ರರು ಬಾಂಬ್ ಸ್ಪೋಟಕ್ಕೆ ವಾಹನಗಳನ್ನು ಬಳಸಿಕೊಳ್ಳಲು ಕಾರಣಗಳು
* ದಟ್ಟಣೆಯಿಂದ ಕೂಡಿರುವ ವಾಹನಗಳ ತಪಾಸಣೆ ಕಷ್ಟಕಾರಿ
* ವಾಹನದಲ್ಲಿ ಬಾಂಬ್ ಅವಿತಿಡುವುದು ಸುಲಭ
* ವಾಹನವನ್ನು ಕ್ಷಣಾರ್ಧದಲ್ಲಿ ಶೋಧಿಸಬಲ್ಲ ಸ್ಪೋಟಕ ಶೋಧಕಗಳು ಲಭ್ಯವಿಲ್ಲದಿರುವುದು.
* ವಾಹನಗಳನ್ನು ಮಾನವರು ತಪಾಸಣೆ ನಡೆಸುವುದು ಹೆಚ್ಚು. ಇದರಿಂದ ಬಾಂಬ್ ಪತ್ತೆಯಾಗುವ ಕುರಿತು ಭರವಸೆಯಿಡುವಂತ್ತಿಲ್ಲ.
* ಜನಸಂದಣಿ ಇರುವಲ್ಲಿಗೆ ವಾಹನಗಳನ್ನು ಸಾಗಿಸುವುದು ಸುಲಭ. ಜನಸಂದಣಿ ಇರುವಲ್ಲಿ ಬಾಂಬ್ ಇರುವ ವಾಹನ ಬಿಟ್ಟು ಬಂದರೆ ಸಾಕು.
ವಾಹನಗಳಲ್ಲಿ ಬಾಂಬ್ ಸ್ಪೋಟ ತಡೆಗಟ್ಟುವುದು ಹೇಗೆ?
* ಅತ್ಯಾಧುನಿಕ ವಾಹನ ಶೋಧಕ ಸಾಧನಗಳನ್ನು ಬಳಸಿಕೊಳ್ಳಬೇಕು.
* ಅನುಮಾನಸ್ಪದವಾಗಿ ನಿಲ್ಲಿಸಿರುವ ವಾಹನಗಳ ಕುರಿತು ನಿಗಾ ವಹಿಸಬೇಕು.
* ಗುರುತು ಪರಿಚಯ ಇಲ್ಲದವರಿಗೆ ಹಳೆಯ ವಾಹನ ಮಾರಾಟ ಮಾಡಬಾರದು.


Click it and Unblock the Notifications








