ಮದರ್ಸನ್ ಸುಮಿಯಿಂದ ಜರ್ಮನಿಯ ಕಂಪೆನಿ ಖರೀದಿ

ಸುದ್ದಿಗಾರರೊಂದಿಗೆ ಮಾತನಾಡಿದ ಕಂಪೆನಿಯ ಉಪಾದ್ಯಕ್ಷ ವಿವೇಕ್ ಚಾಂದ್ ಸೆಹಗಲ್ ಅವರು ದೇಶೀಯ ಬ್ಯಾಂಕ್ ಗಳ ಸಾಲದ ನೆರವಿನಿಂದ ಈ ಖರೀದಿ ಮಾಡಲಾಗುತ್ತಿದೆ ಎಂದರು. ಪೆಗುಫಾರ್ಮ್ ವಾಹನಗಳ ಬಂಪರ್ , ಪ್ಲಾಸ್ಟಿಕ್ ಕಾಂಪೊನೆಂಟ್ಸ್ , ಡ್ಯಾಷ್ ಬೋರ್ಡ್ ಹಾಗೂ ಒಳಾಂಗಣ ಉಪಕರಣಗಳನ್ನು ತಯಾರಿಸುತ್ತಿದೆ.
ಖರೀದಿಯ ನಂತರ ಕ್ರಾಸ್ ಇಂಡಸ್ಟ್ರೀಸ್ ಪೆಗುಫಾರ್ಮ್ ನಲ್ಲಿ ಶೇ ೨೦ ಪಾಲನ್ನು ಹೊಂದಲಿದ್ದು ಪೆಗುಫಾರ್ಮ್ ನ ೨೦೧೧ ರ ಆದಾಯ ೨.೨೫ ಬಿಲಿಯನ್ ಡಾಲರ್ ಗಳಾಗಲಿವೆ. ಮದರ್ಸನ್ ಆದಾಯ ೧.೮ ಬಿಲಿಯನ್ ಡಾಲರ್ ಗಳಾಗಲಿವೆ ಎನ್ನಲಾಗಿದೆ.
ಒಟ್ಟು ಶೇ ೮೦ ರಷ್ಟು ಪಾಲನ್ನು ಖರೀದಿಸಲಿದ್ದು ಇದರಲ್ಲಿ ಮದರ್ಸನ್ ಸುಮಿ ಶೇ ೫೧, ಸಮೂಹದ ಕಂಪೆನಿ ಸಂವರ್ಧನ ಮದರ್ಸನ್ ಫೈನಾನ್ಸ್ ಶೇ ೪೯ ರಷ್ಟು ಪಾಲನ್ನು ಹೊಂದಲಿವೆ.


Click it and Unblock the Notifications








