ಮಾರುತಿ ಸುಜುಕಿ "ಆರ್ 3" ಮುಂದಿನ ವರ್ಷ ರಸ್ತೆಗೆ

ದೇಶದ ಬೃಹತ್ ವಾಹನ ತಯಾರಿಕಾ ಕಂಪನಿ ಮಾರುತಿ ಸುಜುಕಿ ಹೊಸ ಮಲ್ಟಿ ಪರ್ಪೊಸ್ ವೆಹಿಕಲ್(ಎಂಪಿವಿ) "ಆರ್3" ಮೂಲಕ ಟೊಯೊಟಾಕ್ಕೆ ಸೆಡ್ಡು ಹೊಡೆಯಲು ಸಜ್ಜಾಗಿದೆ. ಮಾರುತಿ ಸುಜುಕಿ ಆರ್3 ಬೇಸ್ ವರ್ಸನ್ ದರ ಸುಮಾರು 6 ಲಕ್ಷ ರು. ಇರಲಿದೆ. ಸದ್ಯ ರಸ್ತೆಯಲ್ಲಿರುವ ಟೊಯೊಟಾ ಇನ್ನೋವಾ ಬೇಸ್ ಆವೃತ್ತಿ ದರ 8,60,527 ರು.ಗೆ ಹೋಲಿಸಿದರೆ ಇದು ಕಡಿಮೆ. ಹೊಸ ಆರ್3 ಆಗಮನದ ನಿರೀಕ್ಷೆಯಲ್ಲಿ ಮಾರುತಿ ಗ್ರಾಹಕರು ಥ್ರಿಲ್ ಆಗಿದ್ದಾರೆ.

ರಿಟ್ಜ್ ಪ್ಲಾಟ್ ಫಾರ್ಮ್ ನಲ್ಲಿ ಮಾರುತಿ ಆರ್3 2012ರ ಮೊದಲ ತ್ರೈಮಾಸಿಕದಲ್ಲಿ ರಸ್ತೆಗಿಳಿಯುವ ನಿರೀಕ್ಷೆಯಿದೆ. ನೂತನ ಮಾರುತಿ ಸುಜುಕಿ ಆರ್3 1.5 ಲೀಟರ್ ನ ಪೆಟ್ರೊಲ್ ಮತ್ತು 1.3 ಲೀಟರ್ ಡೀಸಲ್ ಎಂಜಿನ್ ಗಳನ್ನು ಹೊಂದಿರುವ ನಿರೀಕ್ಷೆಯನ್ನು ಕಂಪನಿಯ ಮೂಲಗಳು ವ್ಯಕ್ತಪಡಿಸಿವೆ. ಈ ಕುರಿತು ಖಚಿತಪಡಿಸಲು ಕಂಪನಿಯ ಪ್ರಧಾನ ವ್ಯವಸ್ಥಾಪಕರನ್ನು ಸಂಪರ್ಕಿಸಲಾಯಿತು. ಆರ್3 ಕುರಿತಾದ ಪ್ರಶ್ನೆಗೆ "ನೂತನ ಕಾರಿನ ದರದ ಕುರಿತು ತಿಳಿಸಲು ಇನ್ನೂ ಕಾಲ ಬಂದಿಲ್ಲ" ಎಂದು ನಕ್ಕರು.

ಇದರೊಂದಿಗೆ ಕಾಂಪ್ಯಾಕ್ಟ್ ಕಾರಿನಲ್ಲಿ ಮಾರುತಿ ಪ್ರಾಬಲ್ಯ ಪಡೆದಿದೆ. ಮಾರುತಿಗೆ ಸೆಡ್ಡು ಹೊಡೆಯಲು ಟೊಯೊಟಾ ಕೂಡ ದೇಶದ ರಸ್ತೆಗೆ ಕಾಂಪ್ಯಾಕ್ಟ್ ಕಾರೊಂದನ್ನು ಹೊರತರುವ ಸಿದ್ಧತೆಯಲ್ಲಿದೆ. ಇದರ ಅರಿವಿರುವಂತೆ ಕಾಣುವ ಮಾರುತಿ ನೇರವಾಗಿ ಆರ್3 ಮೂಲಕ ಟೊಯೊಟಾದ ಎಂಪಿವಿ ಮಾರುಕಟ್ಟೆಗೆ ಹೊಡೆತ ನೀಡಲು ಯೋಜಿಸಿದೆ. ಟೊಯೊಟಾ ಕಂಪನಿಯು ಇನ್ನೋವಾದ ಪರಿಷ್ಕೃತ ಆವೃತ್ತಿಯೊಂದನ್ನು ಮುಂದಿನ ವರ್ಷ ಹೊರತರಲು ನಿರ್ಧರಿಸಿದೆ.

ಆರ್3 ಕುರಿತು ಪ್ರೊಟಿವಿಟಿ ಕನ್ಸಲ್ಟಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಪ್ರಶ್ನಿಸಲಾಯಿತು. ಮಲ್ಟಿ ಪರ್ಪೊಸ್ ವೆಹಿಕಲ್ ಆರ್3 ದರ ಸುಮಾರು 6 ಲಕ್ಷ ರು. ಇದ್ದರೆ ಅದು ಟೊಯೊಟಾಕ್ಕೆ ಮಾತ್ರ ಹೊಡೆತ ನೀಡದು. ದೇಶದ ಎಲ್ಲಾ ಎಂಪಿವಿಗಳಿಗೂ ಪ್ರಬಲ ಪೈಪೋಟಿ ನೀಡಲಿದೆ" ಎಂದು ಅವರು ಅಭಿಪ್ರಾಯಪಡುತ್ತಾರೆ.

More from DriveSpark

Article Published On: Friday, July 15, 2011, 14:53 [IST]
English summary
The largest carmaket of the India Maruti suzuki ready to hit its new MPV rill. Maruti Suzuki Rill base version price expected Rs 6 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+