ಹಿಮಾಲಯದಲ್ಲಿ ಮಾರುತಿ ಸರ್ವಿಸ್ ಸ್ಟೇಷನ್ ಆರಂಭ

ಕಂಪನಿಯು ಹಿಮಾಚಲ ಪ್ರದೇಶದ ಸ್ಪಿಟಿ, ಲಾಹೂಲ್ ಮತ್ತು ಕಾಝಾ ಜಿಲ್ಲೆಗಳಲ್ಲಿ ವರ್ಕ್ ಶಾಪ್ ತೆರೆದಿದೆ. ಇಷ್ಟು ಎತ್ತರದಲ್ಲಿ ದೇಶದ ಬೇರಾವ ಕಂಪನಿಯು ವರ್ಕ್ ಶಾಪ್ ತೆರೆದಿರಲಿಲ್ಲ. ಇದು ಪರ್ವತರೋಹಿಗಳಿಗೆ ಇಷ್ಟವಾದ ಪ್ರದೇಶಗಳು. ಲಡಕ್ ನಲ್ಲಿ ಮಾರುತಿ ಅತ್ಯಧಿಕ ಸರ್ವಿಸ್ ಸೆಂಟರ್ ಗಳನ್ನು ಹೊಂದಿದೆ.
"ಅಂತಹ ಎತ್ತರದ ಪ್ರದೇಶದಲ್ಲಿ ಸರ್ವಿಸ್ ಸ್ಟೇಷನ್ ನಿರ್ಮಿಸುವುದು ನಿಜಕ್ಕೂ ಸವಾಲು. ಆದರೆ ನಮ್ಮ ಗ್ರಾಹಕರಿಗಾಗಿ ಅಂತಹ ಸವಾಲನ್ನು ನಾವು ತೆಗೆದುಕೊಂಡಿದ್ದೇವೆ. ಈ ಪ್ರದೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ" ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ನ ನಿರ್ವಹಣಾಧಿಕಾರಿ ಪಂಕಜ್ ನರುಲಾ ಹೇಳಿದ್ದಾರೆ.


Click it and Unblock the Notifications








