ಬುಗಾಟಿ ಪಡಿಯಚ್ಚು ನಿರ್ಮಿಸಿದ 25ರ ಯುವಕ

Bugatti Veyron
ಒಂದು ಸೂಪರ್ ಕಾರು ಖರೀದಿಸಬೇಕೆಂದು ಎಲ್ಲರೂ ಕನಸು ಕಾಣಬಹುದು. ಫೆರಾರಿ ಎನ್ಜೊ, ಮೆಕ್ ಲಾರೆನ್ ಎಫ್1, ಪೊರ್ಷ್ ಕರೆರಾ, ಲಂಬೊರ್ಗಿನಿ ಮುರ್ಸಿಲಾಗೊ, ಆಸ್ಟೊನ್ ಮಾರ್ಟಿನ್ ವೆಂಟೆಜ್ ಮತ್ತು ಬುಗಾಟಿಯಂತಹ ಕಾರುಗಳನ್ನು ಖರೀದಿಸುವುದು ಕೆಲವರಿಗೆ ತಿರುಕನ ಕನಸು. ಯಾಕೆಂದರೆ ಅದರ ದರವೇ ಹಲವು ಕೋಟಿ ರು.ಗಳ ಲೆಕ್ಕದಲ್ಲಿರುತ್ತದೆ.

ಬುಗಾಟಿ ವೆರೊನ್ ವಾಹನ ಲೋಕದ ಕೆಟ್ಟ ಹುಡುಗ. ಇದಕ್ಕೆ ವಿಶ್ವದ ವೇಗದ ಕಾರೆಂಬ ಹಣೆಪಟ್ಟಿ ಬೇರೆ. ಇದರಲ್ಲಿ ಪ್ರತಿಗಂಟೆಗೆ 400 ಕಿ.ಮೀ. ವೇಗದಲ್ಲಿ ಸಾಗಬಹುದು. ಇದರ ದರ ಬೆಚ್ಚಿಬೀಳಿಸುವಂತ್ತಿದೆ. ಇದಕ್ಕೆ ಭಾರತದಲ್ಲಿ ಸುಮಾರು 16 ಕೋಟಿ ರು. ಪಾವತಿಸಬೇಕು.

ಅಮೆರಿಕದ ಫ್ಲೋರಿಡಾ ಊರಿನ ಮೈಕ್ ಡಫ್ ಎಂಬ ಯುವಕನಿಗೂ ಬುಗಾಟಿ ಕಾರಿನ ಕನಸು ಬೀಳುತ್ತಿತ್ತು. ಆದರೆ ಅದನ್ನು ತಿರುಕನ ಕನಸಾಗಿಸಲು ಆತನಿಗೆ ಮನಸ್ಸಾಗಲಿಲ್ಲ. ಖರೀದಿಸಬೇಕೆಂದರೆ ಅಷ್ಟು ದುಡ್ಡೂ ಇಲ್ಲ. ಹಾಗಂತ ಸುಮ್ಮನೆ ಕುಳಿತುಕೊಳ್ಳಲು ಮನಸ್ಸೂ ಬರಲಿಲ್ಲ.

ಆತನಲ್ಲಿ ಮೆರ್ಕ್ಯುರಿ ಕೊಗರ್ ಕೂಪ್(ಈ ಕಾರು ಭಾರತದಲ್ಲಿಲ್ಲ) ಕಾರಿತ್ತು. ಅದನ್ನೇ ಬುಗಾಟಿ ವೆರೊನ್ ಆಗಿ ಪರಿವರ್ತಿಸಿದ್ದಾನೆ. ಪ್ಲಾಸ್ಟಿಕ್ ಫೈಬರ್ ಸೇರಿದಂತೆ ಹಲವು ಬಿಡಿಭಾಗಗಳನ್ನು ಬಳಸಿ ಒರಿಜಿನಲ್ ಬುಗಾಟಿ ನಾಚುವಂತೆ ವಿನ್ಯಾಸ ಮಾಡಿದ್ದಾನೆ. ಇದಕ್ಕೆ ವೃತ್ತಿಪರರಿಂದ ಪೈಂಟಿಗ್ ಕೂಡ ಮಾಡಿಸಿದ್ದ. ಥೇಟ್ ಬುಗಾಟಿಗೆ ಬಳಸಿದ್ದ ಲೆದರ್ ಗಳನ್ನು ಇಂಟಿರಿಯರ್ ಗೆ ಬಳಸಿದ್ದ.

ಈ ಕಾರು ನೋಡಿ ಎಲ್ಲರೂ ಕನ್ ಫ್ಯೂಸ್ ಆಗಿದ್ದಾರಂತೆ. ನೋಡಲು ಬುಗಾಟಿ ವೆರೊನ್ ನಂತೇ ಇದೆ. ಆದರೆ ಇದರಲ್ಲಿ ತಾಂತ್ರಿಕವಾಗಿ ಸಾಕಷ್ಟು ವ್ಯತ್ಯಾಸಗಳಿವೆ ಎಂಬುದನ್ನು ಮರೆಯುವಂತ್ತಿಲ್ಲ. ಆದರೇನಂತೆ ಈ ಕಾರಿನ ನಿರ್ಮಾಣಕ್ಕೆ ಈತನಿಗೆ ಖರ್ಚಾದದ್ದು ಸುಮಾರು 89 ಸಾವಿರ ಡಾಲರ್(ಸುಮಾರು 43 ಲಕ್ಷ ರು.) ಅಂದರೆ ಒರಿಜಿನಲ್ ಬುಗಾಟಿಗಿಂತ 40 ಪಟ್ಟು ಕಡಿಮೆ ಖರ್ಚಾಗಿದೆ.

More from DriveSpark

Article Published On: Tuesday, July 19, 2011, 17:23 [IST]
English summary
Mike Duff, an ambitious 25-year-old from Florida,USA wanted to own a Bugatti Veyron but did not have the resources. Instead of worrying about the missed opportunity, he went on to convert a Mercury Cougar coupé in to his dream car. This hand built Veyron looks very much like the original.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+