ಹಳೆಯ ಹೋಂಡಾ ಜಾಝ್, ಹೊಸ ಗಾನ ಬಜಾನ

Honda Jazz
ಹೋಂಡಾ ಜಾಝ್ ಇತ್ತೀಚೆಗೆ ಬಿಸಿದೋಸೆಯಂತೆ ಮಾರಾಟವಾಗಿತ್ತು. ಉತ್ಪಾದನೆ ಸ್ಥಗಿತಗೊಳಿಸಿದ ಸಂದರ್ಭದಲ್ಲಿ ಎಲ್ಲಾ ಸ್ಟಾಕ್ ಮುಗಿದು ಹೋಗಲಿ ಎಂದು ಸುಮಾರು ಒಂದುವರೆ ಲಕ್ಷ ರು. ವಿನಾಯಿತಿಯಲ್ಲಿ ಜಾಝ್ ಕಾರುಗಳನ್ನು ಮಾರಾಟ ಮಾಡಲಾಗಿತ್ತು. ಹೊಸ ಪರಿಷ್ಕೃತ ಕಾರನ್ನು ಹೊರತರುವ ಉದ್ದೇಶದಿಂದ ಕಂಪನಿಯು ಜಾಝ್ ಉತ್ಪಾದನೆ ಸ್ಥಗಿತಗೊಳಿಸಿತ್ತು.

ಹಳೆಯ ಜಾಝ್ ಮರೆತುಬಿಡಿ. ಮುಂದಿನ ತಿಂಗಳು ಹೊಸ ಹೋಂಡಾ ಜಾಝ್ ರಸ್ತೆಗಿಳಿಯಲಿದೆ. ಹಳೆಯ ಜಾಝ್ ಗೆ ಹೋಲಿಸಿದರೆ ಹೊಸ ಕಾರಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಮೂಲಗಳು ಹೇಳುವ ಪ್ರಕಾರ ಕಾರಿನ ಎದುರು ಮತ್ತು ಹಿಂಬಾಗಕ್ಕೆ ಹೊಸ ಬಂಪರ್ ಅಳವಡಿಸಲಾಗುವುದಂತೆ. ಜೊತೆಗೆ ಹೊಸ ಫಾಗ್ ಲ್ಯಾಂಪ್ ಇರಲಿದೆಯಂತೆ!

ಕೇವಲ ಹೊರ ವಿನ್ಯಾಸ ಮಾತ್ರವಲ್ಲದೇ ಜಾಝ್ ನ ಇಂಟಿರಿಯರ್ ಕೂಡ ಬದಲಾಗಲಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಹಳೆಯ ಜಾಝಿಗಿಂತ ಹೊಸ ಜಾಜ್ ಹೆಚ್ಚು ಆಕರ್ಷಕವಾಗಿರಲಿದೆ ಎಂದು ದೆಹಲಿಯ ವಾಹನ ಡೀಲರೊಬ್ಬರು ಮಾಹಿತಿ ನೀಡಿದ್ದಾರೆ. ನೂತನ ಜಾಝ್ 1.5 ಲೀಟರಿನ ಐ-ವಿಟೆಕ್ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ. ಹೊಸ ಜಾಝ್ ದರವೆಷ್ಟಿರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

More from DriveSpark

Article Published On: Wednesday, July 20, 2011, 17:15 [IST]
English summary
Coming Soon: The face lifted model of the Honda Jazz is expected to bow in next month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+