ವೆಂಟೊ, ಹೋಂಡಾ ಸಿಟಿಗೆ ಹ್ಯುಂಡೈ ವೆರ್ನಾ ಸವಾಲು

ಪ್ರಸಕ್ತ ವರ್ಷದ ಎರಡನೇ 10,303 ನೂತನ ಹ್ಯುಂಡೈ ಫ್ಲೂಡಿಕ್ ವೆರ್ನಾ ಮಾರಾಟವಾಗಿದೆ. ಕಳೆದ ವರ್ಷ ಕಂಪನಿಯು 5,338 ವೆರ್ನಾ (ಹಳೆಯ ಮಾಡೆಲ್) ಕಾರುಗಳನ್ನು ಮಾರಾಟ ಮಾಡಿತ್ತು. ವೆರ್ನಾದ ಪ್ರಮುಖ ಎದುರಾಳಿಯಾದ ವೆಂಟೊ ಮಾರಾಟ 7,726 ಯೂನಿಟ್ ಗೆ ತಲುಪಿದೆ. ವೆರ್ನಾಕ್ಕೆ ಹೋಲಿಸಿದರೆ ಮಾರಾಟದಲ್ಲಿ ಹೋಂಡಾ ಸಿಟಿ ಕೂಡ ಹಿಂದೆ ಸರಿದಿದೆ.
ಫ್ಲೂಡಿಕ್ ವೆರ್ನಾ ಬಗ್ಗೆ ಒಂದಿಷ್ಟು: 2011ರ ವೆರ್ನಾ ಎರಡು ಪೆಟ್ರೊಲ್ ಮತ್ತು ಎರಡು ಡೀಸಲ್ ಆವೃತ್ತಿಗಳಲ್ಲಿ ದೊರಕುತ್ತವೆ. ಎರಡೆರಡು ಆವೃತ್ತಿಗಳೇನು ಎಂದರೆ 1.4 ಲೀಟರ್ ಮತ್ತು 1.6 ಲೀಟರ್ ಎಂಜಿನ್ ಗಳಾಗಿವೆ. ಇದರಲ್ಲಿ 1.4 ಲೀಟರ್ ಎಂಜಿನ್ ಆವೃತ್ತಿಗಳಲ್ಲಿ 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಇದೆ. 1.6 ಲೀಟರ್ ಆವೃತ್ತಿಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಇದೆ.
ಯಾವುದೇ ಒತ್ತಡವಿಲ್ಲದೇ ಆರಾಮವಾಗಿ ಸವಾರಿ ಮಾಡುವಲ್ಲಿ ಇವೆರಡು ಎಂಜಿನ್ ಗಳು ಅನನ್ಯ ಕ್ಷಮತೆ ನೀಡುತ್ತವೆ. ದೇಶದ ರಸ್ತೆಗೆ ಪೂರಕವಾಗಿರುವ ಇದರ ಸಸ್ಪೆನ್ಸನ್ ಇಷ್ಟವಾಗುತ್ತದೆ. ನೂತನ ವೆರ್ನಾ ಕಾರಿಗೆ ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 7,08,320 ರು.ನಿಂದ 10,88,826 ರು.ವರೆಗಿದೆ.


Click it and Unblock the Notifications








